ಮುಖಪುಟ ರಾಷ್ಟ್ರೀಯ ಮುಂದಿನ ಮೂರು ವಾರಗಳಲ್ಲಿ ಮೂರನೆ ಅಲೆ ನಿರೀಕ್ಷೆಗೂ ಮೊದಲೇ ಉಲ್ಬಣ: ವರದಿ
ನವದೆಹಲಿ: ಕೋವಿಡ್-19 ಮೂರನೇ ಅಲೆ ಇನ್ನು ಮೂರು ವಾರಗಳಲ್ಲಿ ನಿರೀಕ್ಷೆಗಿಂತಲೂ ಮೊದಲೇ ಉಲ್ಬಣವಾಗಲಿದೆ ಎಂದು ವರದಿಯೊಂದು ಹೇಳಿದೆ.
ಗ್ರಾಮೀಣ ಭಾಗಗಳ ಹೊಸ ಕೇಸ್ ಲೋಡ್ ಗಳ ಹೆಚ್ಚಳದ ನಡುವೆಯೇ, ಗರಿಷ್ಠ ಪ್ರಮಾಣದಲ್ಲಿ ಸೋಂಕನ್ನು ಹೊಂದಿದ್ದ 15 ಜಿಲ್ಲೆಗಳಲ್ಲಿ ಗಣನೀಯ ಪ್ರಮಾಣದಲ್ಲಿ ಕೋವಿಡ್-19 ಸೋಂಕು ಇಳಿಕೆಯಾಗಿರುವುದು ಈ ಹೊಸ ವಿಶ್ಲೇಷಣೆಗೆ ಕಾರಣವಾಗಿದೆ.
ಎಸ್ ಬಿಐ ಸಂಶೋಧನೆಯಲ್ಲಿ ಈ ಮಾಹಿತಿ ಬಹಿರಂಗಗೊಂಡಿದ್ದು, ಡಿಸೆಂಬರ್ ನಲ್ಲಿ ಗರಿಷ್ಠ ಪ್ರಮಾಣದ ಸೋಂಕನ್ನು ಕಂಡಿದ್ದ (ಶೇ.67.9 ರಷ್ಟು) 15 ಜಿಲ್ಲೆಗಳಲ್ಲಿ ಜನವರಿ ತಿಂಗಳಲ್ಲಿ ಶೇ.37.4 ರಷ್ಟಕ್ಕೆ ಇಳಿಕೆಯಾಗಿದೆ.
ಈ 15 ಜಿಲ್ಲೆಗಳಲ್ಲಿ 10 ಜಿಲ್ಲೆಗಳಲ್ಲಿ ದೇಶದ ಪ್ರಮುಖ ನಗರಗಳಾಗಿದ್ದು ಬೆಂಗಳೂರು ಹಾಗೂ ಪುಣೆಯಲ್ಲಿ ಸೋಂಕು ಪ್ರಮಾಣ ಏರುಗತಿಯಲ್ಲಿಯೇ ಎಂಬುದನ್ನೂ ವರದಿ ಒಪ್ಪಿಕೊಂಡಿದೆ.
ಗ್ರಾಮೀಣ ಭಾಗದ ಪ್ರದೇಶಗಳಲ್ಲಿ ಜನವರಿ ತಿಂಗಳಲ್ಲಿ ಶೇ.32.6 ರಷ್ಟು ಏರಿಕೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಮೆರಿಕಾಗೆ ಹೋಲಿಕೆ ಮಾಡಿಕೊಂಡರೆ ಈ ಅಂಕಿ-ಸಂಖ್ಯೆಗಳು ಕಡಿಮೆ ಇದ್ದು, ಅಲ್ಲಿ ಶೇ.80 ರಷ್ಟು ಲಸಿಕೆ ಪಡೆದಿದ್ದರೂ ಸೋಂಕುಗಳ ಏರಿಕೆ ಪ್ರಮಾಣ ಶೇ.6.9 ಪಟ್ಟು ಹೆಚ್ಚಾಗಿದೆ ಎಂದು ವರದಿ ಹೇಳಿದೆ.