ಕಲಬುರಗಿ :ಸೋಷಲಿಸ್ಟ್ ಯೂನಿಟಿ ಸೆಂಟರ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದಿಂದ ಪ್ರತಿಭಟನೆ

ಕಲಬುರಗಿ :ಬೃಹತ್ ನಗರವಾಗಿ ಬೆಳೆಯುತ್ತಿರುವುದು ನಿಮಗೆಲ್ಲಾ ತಿಳಿದಿರುವ ವಿಷಯವಾಗಿದೆ. ಇಲ್ಲಿ ಮಧ್ಯಮ ವರ್ಗದ, ದೊಡ್ಡ-ದೊಡ್ಡ ಶ್ರೀಮಂತರ ಜೊತೆಗೆ ಕೂಲಿಕಾರದ ಕಡುಬಡವರ ಸಂಖ್ಯೆಯು ಗಣನಿಯವಾಗಿ ಬೆಳೆಯುತಿದೆ. ಲಕ್ಷಾಂತರ ಕೂಲಿ ಕಾರ್ಮಿಕರಿಗೆ ಒoದು ಹೋತಿನ ಊಟಕ್ಕೂ ಗತಿಯಿಲ್ಲದೆ ಈ ಕೋವಿಡ -19 ಸಂದರ್ಭದಲ್ಲಿ ಬದುಕುತ್ತಿದ್ದಾರೆ. ತೆಲೆಮೇಲೊಂದು ಸೂರ್ಯ ಇಲ್ಲ, ಕುಳಿತುಕೊಳ್ಳದಕೇ ಒಂದು ಆಶ್ರಯವಿಲ್ಲದೆ ಈ ಮಳೆಗಾಲದ ಚಳಿಯಲ್ಲಿ ಚಿಕ್ಕ ಮಕ್ಕಳೋoದಿಗೆ ಬದುಕುತ್ತಿದ್ದಾರೆ.
ಕೋರೋನಾ ಮಹಾಮಾರಿ ರೋಗದ ಹಿನ್ನಲೆಯಲ್ಲಿ ಕೂಲಿ ಕೆಲಸವಿಲ್ಲದೆ, ಮನೆ ಬಾಡಿಗೆಯು ಕಟ್ಟುವುದಕೆ ಆಗದೆ ಅಕ್ಷರಸಹ ಬೀದಿಗೆ ಬಂದು ಬದಕುವ ಸ್ಥಿತಿ ನಿರ್ಮಾಣವಾಗಿದೆ, ಕಲಬುರಗಿ ನಗರದ ಏಕತಾ ಕಾಲೋನಿಯಲ್ಲಿ ಜೀವನ ಮಾಡುತಿರುವ ಬಡವರ ಪರಿಸ್ಥಿತಿಯು ಇದೇ ಆಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಲವಾರು ಯೋಜನೆಗಳಲ್ಲಿ ನಿರಾಶ್ರಿತರಿಗೆಂದು ಸಾವಿರಾರು ಮನೆಗಳು ಮಂಜೂರು ಆದರೂ ಆ ಮನೆಗಳು ಸರಿಯಾಗಿ ನಿಜವಾದ ನಿರಾಶ್ರಿತರಿಗೆ ತಲಪುತಿಲ್ಲ. ರಾಜಕೀಯ ಪ್ರಬಾರಿಗಳು, ದಲ್ಲಾಳಿಗಳೂ ತಮವರಿಗೆ ಬೇಕಾದ ರೀತಿಯಲ್ಲಿ ಕೊಡುತ್ತಿದಾರೆ. ಇದರಿಂದಾಗಿ ನಿಜವಾದ ಬಡವವರು ನಿರಾಶ್ರಿತರು ಬೀದಿಯಲ್ಲಿ ಜೀವನ ಮಾಡುವಂತಾಗಿದೆ.

ಊಟ, ನೀರು, ವಸತಿ, ಅರೋಗ್ಯ, ಶಿಕ್ಷಣ ಭಾರತದ ಪ್ರತಿಯೊಬ್ಬರ ಮೂಲಭೂತ ಹಕ್ಕೆoದು ಸರ್ಕಾರವೇ ಹೆಳ್ಳುತ್ತದೆ. ಆದರೆ ನಮ ನಗರದ (ಕಲಬುರಗಿ) ಜನರಿಗೆ ಕನಿಷ್ಠ ಮೂಲಭೂತ ಹಕ್ಕುಗಳು ಸಿಗಲಾರದೆ ವಂಚಿತರಾಗುತ್ತಿದ್ದಾರೆ.
ಅದ್ದರಿಂದ ಆಶ್ರಯವಿಲ್ಲದೆ ಕೋರೋನಾ ಮಹಾಮಾರಿಯ ಭಯದ ನೆರಳಿನಲ್ಲಿ ವಾರದಿಂದಲೂ ಬಿಟ್ಟು-ಬಿಡದೆ ಸುರಿಯುತ್ತಿರುವ ಈ ಮಳೆಯ ಚಳಿಯಲ್ಲಿ ಸೋರುತ್ತಿರುವ ಕಟ್ಟಡದಲಿ ಬದುಕುತ್ತಿರುವ ಈ ಬಡ ಜನರಿಗೆ ಸ್ವಂತ ಮನೆಯನ್ನು ನಿರ್ಮಿಸಿಕೊಡಬೇಕೆಂದು ಸೋಷಲಿಸ್ಟ್ ಯೂನಿಟಿ ಸೆಂಟರ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷವು ತಮ್ಮಲ್ಲಿ ವಿನಂತಿಸಿಕೊಳ್ಳುತ್ತದೆ.

ವರದಿ : ಸಂಗಮೇಶ ಸರಡಗಿ

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *