ಬೆಂಗಳೂರಿನಲ್ಲಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಆರೋಪಿ ಯುವಕ ಬಂಧನ
ಬೆಂಗಳೂರು: ಉದ್ಯಾನ ನಗರದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ವರದಿಯಾಗಿದೆ. 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ (Rape) ನಡೆದಿರುವ ಪ್ರಕರಣ ನಂದಿನಿ ಲೇ ಔಟ್ ಬಳಿ ನಡೆದಿದೆ.
ನಿನ್ನೆ ಸಾಯಂಕಾಲ ಬಾಲಕಿಯ ಮನೆಯಲ್ಲಿ ಯಾರೂ ಇಲ್ಲದ ವೇಳೆ ಪಕ್ಕದ ಮನೆಯ ಯುವಕ ಬಂದು ಈ ದುಷ್ಕೃತ್ಯ ನಡೆಸಿದ್ದಾನೆ ಎಂದು ಹೇಳಲಾಗುತ್ತಿದ್ದು ಆತನನ್ನು ಈಗಾಗಲೇ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಬಾಲಕಿಯ ತಾಯಿ ಕೆಲಸಕ್ಕೆ ಹೋದವರು ಮನೆಗೆ ಇನ್ನೂ ವಾಪಸ್ಸಾಗಿರಲಿಲ್ಲ. ಮನೆಯಲ್ಲಿ ಯಾರೂ ಇಲ್ಲದನ್ನು ನೋಡಿಕೊಂಡು ಹೊಂಚುಹಾಕುತ್ತಿದ್ದ ಯುವಕ ದುಷ್ಕೃತ್ಯ ನಡೆಸಿದ್ದಾನೆ. ಬಾಲಕಿ ಮತ್ತು ಆರೋಪಿಯ ವೈದ್ಯಕೀಯ ಪರೀಕ್ಷೆಯನ್ನ (Medical Test) ಪೊಲೀಸರು ನಡೆಸಲಿದ್ದಾರೆ.
ಬಾಲಕಿಯ ತಾಯಿ ಸಾಯಂಕಾಲ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ಸಾದ ವೇಳೆ ದುರ್ಘಟನೆ ನಡೆದಿರುವುದು ಬೆಳಕಿಗೆ ಬಂತು. ಅಷ್ಟು ಹೊತ್ತಿಗೆ ದುಷ್ಕೃತ್ಯ ಎಸಗಿ ಆರೋಪಿ ಯುವಕ ಪರಾರಿಯಾಗಿದ್ದ. ಬಾಲಕಿ ಮತ್ತು ಆಕೆಯ ತಾಯಿ ನೀಡಿದ ದೂರಿನ ಮೇಲೆ ಆರೋಪಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.