Karnataka Weather Today: ತಗ್ಗಿದ ಚಳಿ, ಬೇಸಿಗೆ ಆರಂಭದ ಬಿಸಿಲಿಗೆ ಜನರು ಹೈರಾಣು

Karnataka Weather Today 8th Feb 2022: ರಾಜ್ಯದಲ್ಲಿ ಬೇಸಿಗೆ ಆರಂಭವಾಗಿದ್ದು, ಇಂದು ಸಹ ಸೂರ್ಯನ ಪ್ರಖರತೆ ನೆತ್ತಿ ಸುಡಲಿದೆ. ಇತ್ತ ಚಳಿಯ (Winter) ಪ್ರಮಾಣ ತಗ್ಗಿದ್ದು, ಕನಿಷ್ಠ 16 ರಿಂದ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 30 ಮತ್ತು ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಳೆದ ವಾರ ಕಾಣಿಸಿಕೊಂಡಿದ್ದ ದಟ್ಟವಾದ ಮಂಜು (Fog) ಕಾಣಿಸಿಕೊಳ್ಳುತ್ತಿತ್ತು. ಇದೀಗ ಮಂಜು ಸಹ ಕಡಿಮೆಯಾಗುತ್ತಿದೆ. ರಾಜ್ಯ ಬಹುತೇಕ ಭಾಗಗಳಲ್ಲಿ ಶುಷ್ಕ ಹವಾಮಾನ ಇರಲಿದೆ. ಉತ್ತರ ಕನ್ನಡ, ವಿಜಯಪುರ ಜಿಲ್ಲೆಗಳಲ್ಲಿ ಗರಿಷ್ಠ 34 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮೈಸೂರು ಭಾಗದ ವ್ಯಾಪ್ತಿಯಲ್ಲಿ ಮೋಡ ಕವಿದ ವಾತಾವರಣ (Cloudy Weather) ಇರಲಿದೆ.

ನಿಕೋಬಾರ್ ಜಿಲ್ಲೆಯಾದ್ಯಂತ ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಪ್ರದೇಶ, ಉತ್ತರ ಬಿಹಾರ, ಪಶ್ಚಿಮ ಬಂಗಾಳದ ಉತ್ತರ ಭಾಗ ಮತ್ತು ಪಶ್ಚಿಮ ಅಸ್ಸಾಂನ ಹಲವಾರು ಭಾಗಗಳಲ್ಲಿ ಬೆಳಿಗ್ಗೆ ದಟ್ಟವಾದ ಮಂಜು ಸಾಧ್ಯತೆ ಇದೆ. ಇನ್ನು ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ ಭಾಗಗಳಲ್ಲಿ ಸಣ್ಣ ಪ್ರಮಾಣದಲ್ಲಿ ಹಿಮಪಾತ ಆಗುವ ಸಾಧ್ಯತೆಗಳಿವೆ.
ರಾಜ್ಯದ ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ)

ಬೆಂಗಳೂರು 30-16, ಮೈಸೂರು 32-18, ಚಾಮರಾಜನಗರ 32-17, ರಾಮನಗರ 32-17, ಮಂಡ್ಯ 32-17, ಬೆಂಗಳೂರು ಗ್ರಾಮಾಂತರ 30-16, ಚಿಕ್ಕಬಳ್ಳಾಪುರ 29-15, ಕೋಲಾರ 30-15, ಹಾಸನ 31-17, ಚಿಕ್ಕಮಗಳೂರು 31-16, ದಾವಣಗೆರೆ 33-18, ಶಿವಮೊಗ್ಗ 34-18, ಕೊಡಗು 31-16, ತುಮಕೂರು 32-17

ಉಡುಪಿ 31-23, ಮಂಗಳೂರು 32-22, ಉತ್ತರ ಕನ್ನಡ 34-18, ಧಾರವಾಡ 33-18, ಹಾವೇರಿ 34-18, ಹುಬ್ಬಳ್ಳಿ 34-18, ಬೆಳಗಾವಿ 32-17, ಗದಗ 33-18, ಕೊಪ್ಪಳ 33-19, ವಿಜಯಪುರ 34-19, ಬಾಗಲಕೋಟ 34-19, ಕಲಬುರಗಿ 34-21, ಬೀದರ್ 32-18, ಯಾದಗಿರಿ 34-21, ರಾಯಚೂರ 33-21 ಮತ್ತು ಬಳ್ಳಾರಿ 33-20

ರಾಜ್ಯದ ಜಲಾಶಯಗಳಲ್ಲಿ ಕಡಿಮೆಯಾಗುತ್ತಿರುವ ನೀರಿನ ಪ್ರಮಾಣ

ಕಳೆದ ವರ್ಷ ರಾಜ್ಯದ ಬಹುತೇಕ ಕಡೆ ಮುಂಗಾರು ಮಳೆಯ ಅಬ್ಬರವಿತ್ತು. ಅಲ್ಲದೆ, ಹೆಚ್ಚು ಸೈಕ್ಲೋನ್‌ಗಳು, ಹವಾಮಾನ ಬದಲಾವಣೆ ಮುಂತಾದ ಕಾರಣಗಳಿಂದ ಸುರಿದ ಅಕಾಲಿಕ ಮಳೆಯಿಂದ ಎಲ್ಲೆಡೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಬೆಂಗಳೂರಿಗರ ಜೀವನವಂತೂ ತೀರಾ ಶೋಚನೀಯವಾಗಿತ್ತು. ಅಲ್ಲದೆ, ಎಡೆಬಿಡದೆ ಸುರಿದ ಮಳೆಯಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳು ಬಹುತೇಕ ಭರ್ತಿಯಾಗಿದ್ದವು.

ಉತ್ತರ ಭಾರತದಲ್ಲಿ ಮಳೆ, ಮಂಜು

ಉತ್ತರ ಪ್ರದೇಶದಲ್ಲಿ ಮತ್ತೆ ಚಳಿಯ ಪ್ರಮಾಣ ಏರಿಕೆಯಾಗುತ್ತಿದೆ. ಮುಂದಿನ ಮೂರು ದಿನಗಳಲ್ಲಿ ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ದೆಹಲಿಯಲ್ಲಿ ಬೆಳಗ್ಗೆ ಮತ್ತು ಸಂಜೆ ವೇಳೆ ದಟ್ಟವಾದ ಮಂಜು ಕಾಣಿಸಿಕೊಳ್ಳುತ್ತಿದೆ. ಈ ನಡುವೆ ಫೆಬ್ರವರಿ 9ರಂದು ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಪಶ್ಚಿಮ ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ  India Meteorological Department (IMD) ಹೇಳಿದೆ.

ದೆಹಲಿಯಲ್ಲಿ ತಗ್ಗಿದ ಗಾಳಿಮಟ್ಟ ಗುಣಮಟ್ಟ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ (Delhi Air Quality) ತಗ್ಗಿದೆ. ದೆಹಲಿಯ ವ್ಯಾಪ್ತಿಯಲ್ಲಿ ಇಂದು ಮತ್ತು ನಾಳೆ ಮಳೆಯಾಗುವ ಸಾಧ್ಯತೆಗಳಿವೆ. ಜೊತೆ ಮಂಜು ಕೂಡಿದ ವಾತಾವರಣ ಇರಲಿದೆ.

ನಿಕೋಬಾರ್ ಜಿಲ್ಲೆಯಾದ್ಯಂತ ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಪ್ರದೇಶ, ಉತ್ತರ ಬಿಹಾರ, ಪಶ್ಚಿಮ ಬಂಗಾಳದ ಉತ್ತರ ಭಾಗ ಮತ್ತು ಪಶ್ಚಿಮ ಅಸ್ಸಾಂನ ಹಲವಾರು ಭಾಗಗಳಲ್ಲಿ ಬೆಳಿಗ್ಗೆ ದಟ್ಟವಾದ ಮಂಜು ಸಾಧ್ಯತೆ ಇದೆ. ಇನ್ನು ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ ಭಾಗಗಳಲ್ಲಿ ಸಣ್ಣ ಪ್ರಮಾಣದಲ್ಲಿ ಹಿಮಪಾತ ಆಗುವ ಸಾಧ್ಯತೆಗಳಿವೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *