ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (08-02-2022)

# ಪಂಚಾಂಗ : ಮಂಗಳವಾರ , 08-02-2022
ಪ್ಲವನಾಮ ಸಂವತ್ಸರ | ಉತ್ತರಾಯಣ | ಹೇಮಂತ ಋತು | ಪುಷ್ಯ ಮಾಸ | ಶುಕ್ಲ ಪಕ್ಷ | ತಿಥಿ: ಅಷ್ಟಮಿ| ನಕ್ಷತ್ರ: ಭರಣಿ| ಮಳೆ ನಕ್ಷತ್ರ: ಧನಿಷ್ಠ

* ಸೂರ್ಯೋದಯ : ಬೆ.06.44
* ಸೂರ್ಯಾಸ್ತ : 06.23
* ರಾಹುಕಾಲ : 3.00-4.30
* ಯಮಗಂಡ ಕಾಲ : 9.00-10.30
* ಗುಳಿಕ ಕಾಲ : 12.00-1.30

# ರಾಶಿಭವಿಷ್ಯ 
ಮೇಷ: ಹಳೆಯ ಸ್ನೇಹಿತರಿಂದ ಶುಭ ಸುದ್ದಿ ಕೇಳುವಿರಿ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.
ವೃಷಭ: ಅಂದುಕೊಳ್ಳದ ರೀತಿಯಲ್ಲಿ ಖರ್ಚಿನ ಪ್ರಮಾಣ ವಿಪರೀತ ಹೆಚ್ಚಾಗುತ್ತದೆ.
ಮಿಥುನ: ಮುಂದೆ ಯಾವಾಗಲೋ ಹಣ ಬರಲಿದೆ ಎಂಬ ನಿರೀಕ್ಷೆಯಿಟ್ಟುಕೊಂಡು ಸಾಲ ಮಾಡದಿರಿ.

ಕಟಕ: ನಾನಾ ಬಗೆಯ ಚಿಂತೆ- ಬೇಸರ ಕಾಡಲಿದೆ. ನಿಮ್ಮ ಪ್ರೀತಿಪಾತ್ರರು ನಿಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಡೆಯುತ್ತಾರೆ.
ಸಿಂಹ: ಅನುಕೂಲಕ್ಕಾಗಿ ಹೆಚ್ಚುವರಿ ಹಣ ಖರ್ಚು ಮಾಡುವುದನ್ನು ತಪ್ಪಿಸಿ.
ಕನ್ಯಾ: ಬಾಕಿ ಇರುವ ಕೆಲಸ-ಕಾರ್ಯಗಳನ್ನು ಪೂರ್ಣಗೊಳಿಸಲು ಬಹಳ ಕಷ್ಟಪಡಬೇಕಾಗುತ್ತದೆ.

ತುಲಾ: ವ್ಯವಹಾರದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಾಗ ಎಚ್ಚರಿಕೆ ವಹಿಸಿ.
ವೃಶ್ಚಿಕ: ಕುಟುಂಬ ಸದಸ್ಯರ ನಡುವೆ ಹೊಂದಾಣಿಕೆ ಕೊರತೆ ಇರುತ್ತದೆ. ಸೋಮಾರಿತನ ಮಾಡದಿರಿ.
ಧನುಸ್ಸು: ಸಂಗಾತಿ ಮತ್ತು ಕುಟುಂಬದೊಂದಿಗಿನ ಸಂಬಂಧ ಸಾಮರಸ್ಯದಿಂದ ಕೂಡಿರುತ್ತದೆ.

ಮಕರ: ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ.
ಕುಂಭ: ಪ್ರತಿಸ್ರ್ಪಧಿಗಳು ನಿಮಗೆ ಕಠಿಣ ಸ್ಪರ್ಧೆ ನೀಡಬಹುದು. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಪ್ರತಿ ಹೆಜ್ಜೆಯನ್ನು ಚಿಂತನಶೀಲವಾಗಿ ಇಡಬೇಕಾಗುತ್ತದೆ.
ಮೀನ: ವೈಯಕ್ತಿಕ ವಿಷಯಗಳಲ್ಲಿ ಯಾವುದೇ ಮೂರನೇ ವ್ಯಕ್ತಿ ಹಸ್ತಕ್ಷೇಪ ಮಾಡಲು ಬಿಡಬೇಡಿ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *