ಪಂಚರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಸಜ್ಜು: ಕೆಸಿ ವೇಣುಗೋಪಾಲ್
ನವದೆಹಲಿ: ಪಂಚ ರಾಜ್ಯಗಳ ಚುನಾವಣೆ ಎದುರಿಸಲು ಹಾಗೂ ರೈತರು, ಯುವ ಜನಾಂಗ, ಮಹಿಳೆಯರು ಮತ್ತು ಸಮಾಜದ ಇತರ ವರ್ಗಗಳಿಗಾಗಿ ಹೋರಾಡಲು ಪಕ್ಷ ಸಂಪೂರ್ಣವಾಗಿ ಸಜ್ಜಾಗಿರುವುದಾಗಿ ಕಾಂಗ್ರೆಸ್ ಶನಿವಾರ ಹೇಳಿದೆ.
ಗಡಿಯಲ್ಲಿ ಚೀನಾ ಆಕ್ರಮ ತಡೆಯುವಲ್ಲಿ ವಿಫಲತೆಯಿಂದ ಆಂತರಿಕವಾಗಿ ಶಾಂತಿ ಇಲ್ಲದಂತಾಗಿದೆ. ಬಿಜೆಪಿಯ ಪ್ರತಿಯೊಂದು ವಿಫಲತೆ ವಿರುದ್ಧ ಕಾಂಗ್ರೆಸ್ ಒಗ್ಗಟ್ಟಾಗಿ ಹೋರಾಡಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.
ಚುನಾವಣಾ ಆಯೋಗ ಪಂಚ ರಾಜ್ಯಗಳಲ್ಲಿ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಬಿಜೆಪಿಯ ಆಕ್ರಮಣ ಮತ್ತು ನಿರ್ಲಕ್ಷದ ವಿರುದ್ಧ ರೈತರು, ಯುವಜನಾಂಗ, ಮಹಿಳೆಯರು ಮತ್ತು ನಮ್ಮ ಜನರೊಂದಿಗೆ ಹೋರಾಡಲು ಕಾಂಗ್ರೆಸ್ ಪಕ್ಷ ಸಂಪೂರ್ಣ ತಯಾರು ಆಗಿರುವುದಾಗಿ ಅವರು ತಿಳಿಸಿದರು.
ಉತ್ತರ ಪ್ರದೇಶ, ಉತ್ತರಾಖಂಡ್, ಗೋವಾ, ಪಂಜಾಬ್ ಮತ್ತು ಮಣಿಪುರ ವಿಧಾನಸಭೆಗೆ ಫೆಬ್ರವರಿ 10 ರಿಂದ ಮಾರ್ಚ್ 7ರ ನಡುವೆ ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಮತಗಳ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.