ನಟಿ ಅಮಲಾ ಪೌಲ್ ಎರಡನೇ ಮದುವೆ ಆಗ್ತಿರೋ ಈ ವ್ಯಕ್ತಿ ಯಾರು ಗೊತ್ತಾ?

Amala Paul Second Marriage : ನಟಿ ಅಮಲಾ ಪೌಲ್ ತಮ್ಮ ಬಹುಕಾಲದ ಗೆಳೆಯ ಜಗತ್ ದೇಸಾಯಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ತಮ್ಮ 32 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅಮಲಾ ಪೌಲ್‌ ಅವರು ಜಗತ್ ದೇಸಾಯಿ ಎಂಬುವವರ ಜೊತೆ ಎರಡನೇ ಮದುವೆ ಆಗಲಿದ್ದಾರೆ. ಅಮಲಾ ಅವರ ಹುಟ್ಟುಹಬ್ಬದ ಪಾರ್ಟಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜಗತ್‌ ದೇಸಾಯಿ ಜೊತೆ ಸಖತ್‌ ರೋಮ್ಯಾಂಟಿಕ್‌ ಫೋಟೋಗಳನ್ನು ಅಮಲಾ ಪೌಲ್‌ ಶೇರ್ ಮಾಡಿದ್ದಾರೆ.

 

ಈ ನಡುವೆ ಅಭಿಮಾನಿಗಳು ಅಮಲಾ ಮತ್ತು ಜಗತ್‌ ಅವರ ಲವ್ ಸ್ಟೋರಿ ತಿಳಿಯಲು ಕಾತುರದಿಂದ ಎದುರು ನೋಡುತ್ತಿದ್ದಾರೆ. ಗೋವಾದ ವಿಲ್ಲಾದಲ್ಲಿ ಸೇಲ್ಸ್‌ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡುವ ಜಗತ್ ಖ್ಯಾತ ನಟಿಯ ಹೃದಯವನ್ನು ಗೆದ್ದಿದ್ದಾರೆ. ತಮ್ಮ ಜೀವನದಲ್ಲಿ ಈ ಹೊಸ ಅಧ್ಯಾಯವನ್ನು ಆರಂಭಿಸಲು ಇಬ್ಬರೂ ಕಾತುರರಾಗಿದ್ದಾರೆ. ಅದ್ಧೂರಿ ವಿವಾಹ ಸಮಾರಂಭದಲ್ಲಿ ಅಮಲಾ ಮತ್ತು ಜಗತ್ ಸಪ್ತಪದಿ ತುಳಿಯಬಹುದು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *