Thalapathy Vijay: ಶೀಘ್ರದಲ್ಲೇ ರಾಜಕೀಯಕ್ಕೆ ಬರಲಿರುವ ನಟ ವಿಜಯ್.. ಗುಟ್ಟು ಭೇದಿಸಿದ ಅರ್ಜುನ್ ಸರ್ಜಾ..!!
VIjay Thalapathy: ಲೋಕೇಶ್ ಕನಕರಾಜ್ ನಿರ್ದೇಶನದ ನಟ ವಿಜಯ್ ಅಭಿನಯದ ‘ಲಿಯೋ’ ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಚಿತ್ರದಲ್ಲಿ ಅರ್ಜುನ್, ತ್ರಿಶಾ, ಸಂಜಯ್ ದತ್, ಪ್ರಿಯಾ ಆನಂದ್ ಮತ್ತು ಚಲನಚಿತ್ರ ನಿರ್ದೇಶಕರಾದ ಮಿಕ್ಸಿನ್ ಮತ್ತು ಗೌತಮ್ ವಾಸುದೇವ್ ಮೆನನ್ ನಟಿಸಿದ್ದಾರೆ. ಸೆವೆನ್ ಸ್ಕ್ರೀನ್ ಸ್ಟುಡಿಯೋ ನಿರ್ಮಿಸಿದ್ದು, ಅನಿರುದ್ಧ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ನಟ ವಿಜಯ್ ಮುಖ್ಯ ಭೂಮಿಕೆಯಲ್ಲಿ ತೆರೆಕಂಡ ಲಿಯೋ ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಸಕ್ಸಸ್ ಮೀಟ್ ನಡೆಯುತ್ತಿದೆ. ಲಿಯೋ ತಂಡದ ಪ್ರತಿಯೊಬ್ಬರು ಸಮಾರಂಭದಲ್ಲಿ ಇದರಲ್ಲಿ ಭಾಗವಹಿಸಿದ್ದರು.
ಇದೇ ಸಮಾರಂಭದಲ್ಲಿ ಉಪಸ್ಥಿತರಿದ್ದ ಆಕ್ಷನ್ ಕಿಂಗ್ ಅರ್ಜುನ್, “ನನ್ನನ್ನು ಎಲ್ಲಿ ನೋಡಿದರೂ ಜೈಹಿಂದು ಎಂದು ಕರೆಯುತ್ತಾರೆ.. ‘ಮಂಗಾತ’ದಲ್ಲಿ ತ್ರಿಷಾ ಜೊತೆ ನಟಿಸಿದ್ದೆ. ಆ ನಂತರ ‘ಲಿಯೋ’ ಚಿತ್ರದಲ್ಲಿ ನಟಿಸಿಸಿದ್ದೀನಿ.. ಪ್ರತಿ ಸಿನಿಮಾ ಸೆಟ್ನಲ್ಲಿಯೂ ನಾಣು ವಿಜಯ್ ಅವರ ಸಮಯಪ್ರಜ್ಞೆಯನ್ನು ನೋಡುತ್ತೇನೆ. 9 ಗಂಟೆಗೆ ಚಿತ್ರೀಕರಣವಾದರೆ 7 ಗಂಟೆಗೆ ಸೆಟ್ ತಲುಪುತ್ತಾರೆ. ಅಂತಹ ಸಮರ್ಪಿತ ಸರಳ ವ್ಯಕ್ತಿ. ವಿಜಯ್ ನಾಯಕನಾಗಲು ಇನ್ನು ಏನು ಬೇಕು..? ಶೀಘ್ರದಲ್ಲೇ ಅವರು ರಾಜಕೀಯಕ್ಕೆ ಬರಲಿದ್ದಾರೆ” ಎಂದು ಗುಟ್ಟು ರಟ್ಟಾಗಿಸಿದ್ದಾರೆ.