ನಟಿ ರಮ್ಯಾ ಇನ್ ಸ್ಟಾಗ್ರಾಂ ಖಾತೆ ಹ್ಯಾಕ್

ಬೆಂಗಳೂರು: ಕೆಲವೇ ದಿನಗಳ ಹಿಂದಷ್ಟೇ ಇನ್ ಸ್ಟಾಗ್ರಾಂಗೆ ಮರಳಿದ್ದ ನಟಿ ರಮ್ಯಾ ಖಾತೆ ಈಗ ಹ್ಯಾಕ್ ಆಗಿರುವ ಅನುಮಾನ ಮೂಡಿಸಿದೆ.

ರಮ್ಯಾ ಖಾತೆಯಲ್ಲಿ ಇದ್ದ ಫೋಟೋಗಳೆಲ್ಲವೂ ಡಿಲೀಟ್ ಆಗಿದೆ. ರಿಫ್ರೆಷ್ ಚಿಹ್ನೆಯಷ್ಟೇ ಬರುತ್ತಿದೆ. ಈ ಬಗ್ಗೆ ಸ್ಟೇಟಸ್ ನಲ್ಲಿ ಬರೆದುಕೊಂಡಿರುವ ರಮ್ಯಾ ನಿನ್ನೆ ಬೆಳಿಗ್ಗೆಯಿಂದ ಹೀಗೇ ಬರುತ್ತಿದೆ. ಅನ್ ಇನ್ ಸ್ಟಾಲ್ ಮಾಡಿದರೂ ಸಮಸ್ಯೆ ಬಗೆಹರಿಯುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ. ಹೀಗಾಗಿ ಅವರ ಖಾತೆ ಹ್ಯಾಕ್ ಆಗಿರಬಹುದು ಎಂದು ಸಂಶಯಿಸಲಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *