ಹ್ಯಾಪಿ ಬರ್ತ್ ಡೇ ವಿರಾಟ್ ಕೊಹ್ಲಿ..! ಬರ್ತ್ ಡೇ ದಿನ ಬರುತ್ತಾ 49ನೇ ಶತಕ..?

ಬೆಂಗಳೂರು(ನ.05): ಇವತ್ತು ವಿರಾಟ್ ಕೊಹ್ಲಿ ಅಭಿಮಾನಿಗಳ ವಿಶೇಷ ದಿನ. ಕಿಂಗ್ ಕೊಹ್ಲಿಗೂ ಅಷ್ಟೇ ಪಾಲಿಗೆ ಸ್ಪೆಷಲ್ ಡೇ. ಇಂದು ಅವರ ಬರ್ತ್ ಡೇ. ಹುಟ್ಟು ಹಬ್ಬದ ದಿನ ವಿಶ್ವಕಪ್ ಪಂದ್ಯ ಬೇರೆ ಆಡ್ತಿದ್ದಾರೆ. ನಿರೀಕ್ಷೆಗಳು ದುಪ್ಪಟ್ಟು ಇರಲಿದೆ. ಭಾರತದ ಕ್ರಿಕೆಟ್ ಕಾಶಿಯಲ್ಲಿ ಕ್ರಿಕೆಟ್ ದೇವರ ದಾಖಲೆ ಸರಿಟ್ಟುತ್ತಾರಾ ಅನ್ನೋ ಕುತೂಹಲವಿದೆ.

ವಿರಾಟ್ ಕೊಹ್ಲಿ. ಕ್ರಿಕೆಟ್ ದುನಿಯಾದಲ್ಲಿ, ಅದರಲ್ಲೂ ಭಾರತೀಯ ಕ್ರಿಕೆಟ್ನಲ್ಲಿ ಇದು ಬರೀ ಹೆಸರಲ್ಲ. ಒಂದು ಬ್ರ್ಯಾಂಡ್. ಯುವ ಕ್ರಿಕೆಟಿಗರ ಪಾಲಿಗಂತೂ ಕೊಹ್ಲಿ ಬಿಗ್ ಇನ್ಸಿಪಿರೇಷನ್. ಕೊಹ್ಲಿ ಗ್ರೇಟೆಸ್ಟ್ ಬ್ಯಾಟ್ಸ್ಮನ್ ಆಗಿರೋದಕ್ಕೆ ಆಟದ ಮೇಲಿನ ಅವರ ಡೆಡಿಕೇಷನ್, ಹಾರ್ಡ್ವರ್ಕ್, ಕಮಿಟ್ಮೆಂಟ್, ನೆವರ್ ಗಿವ್ಅಪ್ ಆ್ಯಟಿಟ್ಯುಡೇ ಕಾರಣ. ಇದೇ ಕಾರಣಕ್ಕೆ ಯಂಗ್ ಕ್ರಿಕೆಟರ್ಸ್ ಕೊಹ್ಲಿಯನ್ನ ಫಾಲೋ ಮಾಡ್ತಾರೆ. ನಾವು ಕೊಹ್ಲಿಯಂತೆ ಆಗ್ಬೇಕು ಅಂತ ಕನಸು ಕಾಣ್ತಾರೆ. ಇಂತಹ ಮಹಾನ್ ಕ್ರಿಕೆಟರ್ ವಿರಾಟ್ ಕೊಹ್ಲಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕಿಂಗ್ ಕೊಹ್ಲಿ 35ನೇ ಬರ್ತ್ಡೇ ಆಚರಿಸಿಕೊಳ್ತಿದ್ದಾರೆ.

ಕಿಂಗ್ ಕೊಹ್ಲಿಗೆ ವರ್ಲ್ಡ್ ವೈಡ್ ಫ್ಯಾನ್ಸ್ ಇದ್ದಾರೆ. ಅದರಲ್ಲೂ ಭಾರತದಲ್ಲಿ ಕೇಳ್ಬೇಕಾ..? ಹುಚ್ಚು ಅಭಿಮಾನಿಗಳಿದ್ದಾರೆ. ಬರ್ತ್ ಡೇ ದಿನ ವಿರಾಟ್ ಕೊಹ್ಲಿ ವಿಶ್ವಕಪ್ ಪಂದ್ಯ ಆಡ್ತಿದ್ದಾರೆ. ಇಂದು ಕೋಲ್ಕತ್ತಾದಲ್ಲಿ ಭಾರತ-ಸೌತ್ ಆಫ್ರಿಕಾ ಮ್ಯಾಚ್ ನಡೆಯುತ್ತಿದ್ದು, ಕೊಹ್ಲಿ-ಕೊಹ್ಲಿ ಅಂತ ಕೂಗಿಕೊಂಡು ಸ್ಟೇಡಿಯಂ ಒಳಗೆ ಬರೋರ ಸಂಖ್ಯೆ ಜಾಸ್ತಿಯಾಗಿರಲಿದೆ. ಈಡನ್ ಗಾರ್ಡನ್ಸ್ ಸ್ಟೇಡಿಯಂ ಕೊಹ್ಲಿ ಮಯವಾಗಿರಲಿದೆ. 70 ಸಾವಿರ ಸಾಮರ್ಥ್ಯವಿರುವ ಸ್ಟೇಡಿಯಂಗೆ ಬರೋ ಪ್ರೇಕ್ಷಕರಿಗೆ 70 ಸಾವಿರ ವಿರಾಟ್ ಕೊಹ್ಲಿ ಮಾಸ್ಕ್ ವಿತರಿಸಲು ಬೆಂಗಾಳ್ ಕ್ರಿಕೆಟ್ ಸಂಸ್ಥೆ ಪ್ಲಾನ್ ಮಾಡಿತ್ತು. ಆದ್ರೆ ಅದಕ್ಕೆ ಐಸಿಸಿ ಮತ್ತು ಬಿಸಿಸಿಐ ರೆಡ್ ಸಿಗ್ನಲ್ ನೀಡಿದೆ. ಆದ್ರೂ ಭಾರತದ ಕ್ರಿಕೆಟ್ ಕಾಶಿಯಲ್ಲಿ ಕೊಹ್ಲಿ ಮಾಸ್ಕ್ ರಾರಾಜಿಸಲಿವೆ.

ಬರ್ತ್ ಡೇ ದಿನ ಬರುತ್ತಾ 49ನೇ ಶತಕ..?

ಒನ್ಡೇ ಕ್ರಿಕೆಟ್ನಲ್ಲಿ ಸಚಿನ್ ತೆಂಡೂಲ್ಕರ್ ಅತ್ಯಧಿಕ ಅಂದ್ರೆ 49 ಶತಕ ಬಾರಿಸಿದ್ದಾರೆ. ಆ ದಾಖಲೆ ಮುರಿಯಲು ಕೊಹ್ಲಿಗೆ ಇನ್ನೆರಡು ಶತಕ ಬೇಕು. ಇನ್ನೊಂದು ಶತಕ ಹೊಡೆದ್ರೆ ಸಚಿನ್ ದಾಖಲೆ ಸರಿಗಟ್ಟಲಿದ್ದಾರೆ. ಈ ಎರಡು ಶತಕಕ್ಕಾಗಿ ಕ್ರಿಕೆಟ್ ಜಗತ್ತು ಜಾತಕ ಪಕ್ಷಿಯಂತೆ ಕಾಯ್ತಿದೆ. ಅದರಲ್ಲಿ ಒಂದು ಸೆಂಚುರಿ ಇಂದು ಬರುತ್ತಾ ಅನ್ನೋ ಕುತೂಹಲವಿದೆ. ಪಂದ್ಯ ಗೆದ್ದು ಕೊಹ್ಲಿಗೆ ಬರ್ತ್ ಡೇ ಗಿಫ್ಟ್ ನೀಡಲು ಟೀಂ ಇಂಡಿಯಾ ಆಟಗಾರರು ಮುಂದಾಗಿದ್ದಾರೆ. ಕೊಹ್ಲಿ ಸಹ, ಸೆಂಚುರಿ ಹೊಡೆದು ಅಭಿಮಾನಿಗಳನ್ನ ರಂಜಿಸಲು ಸಿದ್ದರಾಗಿದ್ದಾರೆ.

ವಿಶ್ವಕಪ್ನಲ್ಲೂ ರನ್ ಹೊಳೆ. ಕೋಲ್ಕತ್ತಾದಲ್ಲೂ ರನ್ ಮಳೆ.

ಈ ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ನೀಡ್ತಿದ್ದಾರೆ. 7 ಪಂದ್ಯಗಳಿಂದ ಒಂದು ಶತಕ, 4 ಅರ್ಧಶತ ಸಹಿತ 442 ರನ್ ಹೊಡೆದಿದ್ದಾರೆ. ಬಾಂಗ್ಲಾ ವಿರುದ್ಧ ಸೆಂಚುರಿ ಸಿಡಿಸಿದ್ರೆ, ಕಿವೀಸ್ ವಿರುದ್ಧ 95, ಲಂಕಾ ವಿರುದ್ಧ 88 ಮತ್ತು ಆಸೀಸ್ ವಿರುದ್ಧ 85 ರನ್ ಹೊಡೆದು ಔಟಾಗೋ ಮೂಲ್ಕ ಈ ವಿಶ್ವಕಪ್ನಲ್ಲೇ ಮೂರು ಸೆಂಚುರಿ ಮಿಸ್ ಮಾಡಿಕೊಂಡಿದ್ದಾರೆ. ಇನ್ನು ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಕಿಂಗ್ ಕೊಹ್ಲಿ 7 ಮ್ಯಾಚ್ನಿಂದ 330 ರನ್ ಕೊಳ್ಳೆ ಹೊಡೆದಿದ್ದಾರೆ. ಒಂದು ಸೆಂಚುರಿ, ಮೂರು ಹಾಫ್ ಸೆಂಚುರಿಗಳನ್ನ ಕೋಲ್ಕತ್ತಾದಲ್ಲಿ ದಾಖಲಿಸಿದ್ದಾರೆ. ಅಲ್ಲಿಗೆ ಇಂದು ಭಾರತದ ಕ್ರಿಕೆಟ್ ಕಾಶಿಯಲ್ಲಿ ವಿರಾಟ್ ವಿರಾಟ ರೂಪ ತಾಳೋದು ಪಕ್ಕಾ. ಅಲ್ಲಿಗೆ 49ನೇ ಸೆಂಚುರಿ ಫಿಕ್ಸ್.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *