ಮೊಹಮ್ಮದ್ ಶಮಿಗೆ ಮದುವೆ ಪ್ರಪೋಸಲ್ ಕೊಟ್ಟ ಬಾಲಿವುಡ್ ಬೆಡಗಿ ಪಾಯಲ್ ಘೋಶ್‌!

ಹೈಲೈಟ್ಸ್‌:

  • ಮೊದಲ ಪತ್ನಿ ಹಸೀನ್‌ ಜಹಾನ್‌ ಅವರಿಂದ ವಿಚ್ಛೇದನ ಪಡೆದಿರುವ ಟೀಮ್ ಇಂಡಿಯಾ ವೇಗಿ ಮೊಹಮ್ಮದ್‌ ಶಮಿ.
  • ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನದ ಬೆನ್ನಲ್ಲೇ ಮದುವೆ ಪ್ರಪೋಸಲ್‌ ಪಡೆದ ಫಾಸ್ಟ್‌ ಬೌಲರ್‌.
  • ಒಂದು ಕಂಡೀಷನ್‌ ಮುಂದಿಟ್ಟು ಮದುವೆಯಾಗಲು ರೆಡಿ ಎಂದ ಬಾಲಿವುಡ್‌ ಬೆಡಗಿ ಪಾಯಲ್‌ ಘೋಶ್‌.

ಬೆಂಗಳೂರು: ಪ್ರಸಕ್ತ ಸಾಲಿನ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಆಡಿದ 4 ಪಂದ್ಯಗಳಲ್ಲಿ 16 ವಿಕೆಟ್‌ಗಳನ್ನು ಉರುಳಿಸುವ ಮೂಲಕ ಶ್ರೇಷ್ಠ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ ವೇಗಿ ಮೊಹಮ್ಮದ್‌ ಶಮಿ ಅವರಿಗೆ ಈಗ ಮದುವೆ ಪ್ರಪೋಸಲ್‌ಗಳು ಬರಲು ಶುರುವಾಗಿದೆ. 34 ವರ್ಷದ ಬಲಗೈ ವೇಗದ ಬೌಲರ್‌ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ಪರ ಸಾರ್ವಕಾಲಿಕ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ ಆಗಿ ಹೊರಹೊಮ್ಮಿದ್ದು, ಪ್ರಸಕ್ತ ಟೂರ್ನಿಯಲ್ಲೂ ಭಾರತದ ಪರ ಲೀಡಿಂಗ್‌ ವಿಕೆಟ್‌ ಟೇಕರ್‌ ಆಗಿದ್ದಾರೆ.

ಅವರ ಈ ಮನಮೋಹಕ ಪ್ರದರ್ಶನಕ್ಕೆ ಬಾಲಿವುಡ್‌ ಬೆಡಗಿ ಪಾಯಲ್‌ ಘೋಶ್‌ ಕ್ಲೀನ್ ಬೌಲ್ಡ್‌ ಆಗಿದ್ದು, ಶರತ್ತೊಂದನ್ನು ಮುಂದಿಟ್ಟು ಮದುವೆಯಾಗಲು ರೆಡಿ ಎಂದು ತಮ್ಮ ಟ್ವಿಟರ್‌ (ಎಕ್ಸ್‌) ಖಾತೆಯ ಮೂಲಕ ಸಂದೇಶ ರವಾನಿದ್ದಾರೆ. ಬಹು ಭಾಷೆಗಳಲ್ಲಿ ನಟಿಸಿರುವ ಪಾಯಲ್‌ ಘೋಶ್‌ ರಾಜಕೀಯದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದೀಗ ಟೀಮ್ ಇಂಡಿಯಾ ವೇಗಿಗೆ ಎರಡನೇ ಪತ್ನಿಯಾಗಲು ರೆಡಿ ಎಂದಿದ್ದಾರೆ. ಅಂದಹಾಗೆ ಮೊಹಮ್ಮದ್‌ ಶಮಿ ತಮ್ಮ ಮೊದಲ ಪತ್ನಿ ಹಸೀನ್‌ ಜಹಾನ್‌ ಅವರಿಂದ ವಿಚ್ಛೇದನ ಪಡೆದಿದ್ದಾರೆ. ಶಮಿ ತಮ್ಮ ಮೊದಲ ಪತ್ನಿಯೊಂದಿಗೆ ಹೆಣ್ಣುಮಗುವೊಂದನ್ನು ಪಡೆದಿದ್ದಾರೆ.

“ಶಮಿ ನಿಮ್ಮ ಇಂಗ್ಲಿಷ್‌ ಬಾಷೆಯನ್ನು ಸುಧಾರಿಸಿಕೊಳ್ಳಿ, ನಾನು ನಿಮ್ಮನ್ನು ಮದುವೆಯಾಗಲು ರೆಡಿ,” ಎಂದು ಹಸೀನ್‌ ಜಹಾನ್‌ ತಮ್ಮ ಟ್ವಿಟರ್‌ ಗೋಡೆಯ ಮೇಲೆ ಬರೆದುಕೊಂಡಿದ್ದಾರೆ. ಕೋಲ್ಕತಾದಲ್ಲಿ 1992ರಲ್ಲಿ ಜನಿಸಿದ ಪಾಯಲ್‌ ಘೋಶ್‌, ಅಲ್ಲಿನ ಸೇಂಟ್‌ ಪಾಲ್ಸ್‌ ಮಿಷನ್‌ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ನಡೆಸಿ, ಸ್ಕಾಟಿಷ್‌ ಚರ್ಚ್‌ ಕಾಲೇಜಿನಲ್ಲಿ ಪೊಲಿಟಿಕಲ್‌ ಸೈನ್ಸ್‌ ವಿಷಯದಲ್ಲಿ ಪದವಿ ಪಡೆದಿದ್ದಾರೆ.

ಸಿನಿಮಾ ರಂಗದಲ್ಲಿ ಬೆಳೆಯುವ ಉದ್ದೆಶದಿಂದ ಮುಂಬೈಗೆ ಬಂದ ಪಾಯಲ್‌ ಘೋಶ್‌, ಮೊದಲ ಬಾರಿ ತೆಲುಗಿನ ಪ್ರಯಾಣಂ ಸಿನಿಮಾದಲ್ಲಿ ನಟಿಸಿದರು. ಅಷ್ಟೇ ಅಲ್ಲದೆ ವರ್ಷಧಾರೆ, ಊಸರವಳ್ಳಿ, ಮಿಸ್ಟರ್ ರಾಸ್ಕಲ್‌, ಪಟೇಲ್ ಕಿ ಪಂಜಾಬ್‌ ಶಾದಿ ಅಂತಹ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ರಾಮದಾಸ್‌ ಅತ್ವಾಲೆ ಅವರ ರಾಜಕೀಯ ಪಕ್ಷದ ಮಹಿಳಾ ಘಟಕದ ಉಪಾಧ್ಯಕ್ಷೆಯಾಗಿ 2020ರಲ್ಲಿ ಆಯ್ಕೆಯಾಗಿದ್ದರು.

ಇನ್ನು ಟೀಮ್ ಇಂಡಿಯಾ ವೇಗಿ ಮೊಹಮ್ಮದ್‌ ಶಮಿ, 2014ರಲ್ಲಿ ನಟಿ ಹಾಗೂ ರೂಪದರ್ಶಿ ಹಸೀನ್‌ ಜಹಾನ್‌ ಅವರನ್ನು ಮದುವೆಯಾಗಿದ್ದರು. 2015ರಲ್ಲಿ ಈ ಜೋಟಿಗೆ ಹೆಣ್ಣು ಮಗು ಕೂಡ ಜನಿಸಿತ್ತು. ಆದರೆ, ನಂತರ ತಮ್ಮ ಪತಿಗೆ ವಿವಾಹೇತರ ಸಂಬಂಧಗಳಿಗೆ ಎಂದು ಹಸೀನ್ ಜಹಾನ್‌ ಕಾನೂನು ಮೆಟ್ಟಿಲೇರಿದ್ದರು. ಈ ಕೌಟುಂಬಿಕ ಜಗಳ ಬೀದಿ ರಂಪಾಟದಂತ್ತಾಗಿ, ಹಸೀನ್‌ ಜಹಾನ್‌ ಟೀಮ್ ಇಂಡಿಯಾ ವೇಗಿ ವಿರುದ್ಧ ಮ್ಯಾಚ್‌ ಫಿಕ್ಸಿಂಗ್ ಅಂತಹ ಗಂಭೀರ ಆರೋಪಗಳನ್ನು ಮಾಡಿದ್ದರು. ಅಷ್ಟೇ ಅಲ್ಲದೆ ಶಮಿ ಮತ್ತು ಅವರ ಕುಟುಂಬದವರು ತಮ್ಮ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ. ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದರು.

ಇದೀಗ ಶಮಿ ಮತ್ತು ಹಸೀನ್ ಜಹಾನ್‌ಗೆ ನ್ಯಾಯಾಲಯ ವಿಚ್ಛೇದನ ನೀಡಿದೆ. ಹಸೀನ್‌, ತಿಂಗಳಿಗೆ 12 ಲಕ್ಷ ರೂ.ಗಳಂತೆ ಜೀವನಾಂಶ ಭರಿಸಿಕೊಡಬೇಕು ಎಂದು ಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ, ನ್ಯಾಯಾಲಯ ಇದನ್ನು ತಿರಸ್ಕರಿಸಿ ಪ್ರತಿ ತಿಂಗಳಿಗೆ 1.2 ಲಕ್ಷ ರೂ.ಗಳಂತೆ ಜೀವನಾಂಶ ಕೊಡಬೇಕು ಎಂದು ಆದೇಶ ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಹಸೀನ್ ಇದೀಗ ಉನ್ನತ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇನ್ನು ಕೋರ್ಟ್‌ ಮಗುವನ್ನು ತಾಯಿಯ ಮಡಿಲಿಗೆ ಒಪ್ಪಿಸಿದೆ. ಮಗು ಆರೈಕೆಗೆ ಮಾಸಿಕ 80 ಸಾವಿರ ರೂ. ಮತ್ತು ಹಸೀನ್ ಅವರಿಗೆ ಮಾಸಿಕ 40 ಸಾವಿರ ರೂ. ಜೀವನಾಂಶ ನೀಡಬೇಕು ಎಂದು ಕೋರ್ಟ್‌ ಆದೇಶಿಸಿತ್ತು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *