Bigg Boss: ‘ಜಗ್ಗೇಶ್ ಅವರ ಚಪ್ಪಲಿಗೂ ನಾವು ಸಮ ಇಲ್ಲ’- ‘ಡ್ರೋನ್’ ಪ್ರತಾಪ್ ತಂದೆ ಮರಿಮಾದಯ್ಯ

ಹೈಲೈಟ್ಸ್‌:

  • ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋ ಬಗ್ಗೆ ಪ್ರತಾಪ್ ತಂದೆ ಮರಿಮಾದಯ್ಯ ಮಾತು
  • ಮಗನ ಆಟದ ಬಗ್ಗೆ ಪ್ರತಿಕ್ರಿಯೆ ನೀಡಿದ ‘ಡ್ರೋನ್’ ಪ್ರತಾಪ್ ತಂದೆ
  • ‘ಡ್ರೋನ್’ ಪ್ರತಾಪ್ ಕುರಿತಂತೆ ಜಗ್ಗೇಶ್ ಕಾಮೆಂಟ್ ಮಾಡಿದ್ರಾ? ಪ್ರತಾಪ್ ತಂದೆ ಪ್ರತಿಕ್ರಿಯೆ ಏನು?

‘ಡ್ರೋನ್’ ಪ್ರತಾಪ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋ ಸ್ಪರ್ಧಿ. ತನ್ನ ತಂದೆ-ತಾಯಿ ಜೊತೆಗೆ ಪ್ರತಾಪ್ ಅವರು ಮಾತನಾಡೋದನ್ನು ಬಿಟ್ಟಿದ್ದಾರಂತೆ. ನನ್ನ ಪಾಲಕರ ಜೊತೆ ಮಾತಾಡಬೇಕು ಅಂತ ಪ್ರತಾಪ್ ಅವರು ಬಿಗ್ ಬಾಸ್ ಮನೆಯಲ್ಲಿ ತಾರಮ್ಮನ ಮುಂದೆ ಹೇಳಿಕೊಂಡು ಅತ್ತಿದ್ದರು. ಈಗ ಮಗನ ಬಗ್ಗೆ ಪ್ರತಾಪ್ ತಂದೆ ಮರಿಮಾದಯ್ಯ ಅವರು ಯುಟ್ಯೂಬ್‌ ಚಾನೆಲ್‌ವೊಂದರ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಮಗನ ಬಗ್ಗೆ ಪ್ರತಾಪ್ ತಂದೆ ಹೇಳಿದ್ದೇನು?

“ನನ್ನ ಮಗ ಪ್ರತಾಪ್ ಬಿಗ್ ಬಾಸ್ ಶೋಗೆ ಹೋಗಿರೋದು ತುಂಬ ಖುಷಿ. ಮಗ ಶೋನಲ್ಲಿ ಇರೋದಿಕ್ಕೆ ನಿತ್ಯ ಬಿಗ್ ಬಾಸ್ ನೋಡ್ತೀನಿ. ನಮ್ಮ ಊರಿನಲ್ಲಿ ಎಲ್ಲರೂ ಬಿಗ್ ಬಾಸ್ ಶೋವನ್ನು ನೋಡುತ್ತಾರೆ. ನನ್ನ ಮಗ ಯಾರ ಮನಸ್ಸನ್ನೂ ನೋಯಿಸಬಾರದು, ಒಳ್ಳೆಯ ರೀತಿಯಲ್ಲಿ ಗೆಲ್ಲಬೇಕು” ಎಂದು ಪ್ರತಾಪ್ ಅವರ ತಂದೆ ಮರಿಮಾದಯ್ಯ ಹೇಳಿದ್ದಾರೆ.

ಎಲ್ಲ ಹೆಣ್ಣು ಮಕ್ಕಳು ಪ್ರತಾಪ್‌ಗೆ ಅಕ್ಕ-ತಂಗಿಯರೇ!

“ನನ್ನ ಮಗ ಹೆಣ್ಣು ಮಕ್ಕಳನ್ನು ಗೌರವಿಸುತ್ತಾನೆ. ಅವನು ಕೆಟ್ಟ ರೀತಿಯಲ್ಲಿ ನೋಡಿದ್ರೆ ಅವನು ಯಾವುದೋ ಮಟ್ಟಕ್ಕೆ ಹೋಗುತ್ತಿದ್ದ. ಹೆಣ್ಣು ಮಕ್ಕಳನ್ನು ತನ್ನ ಅಕ್ಕ -ತಂಗಿಯರು ಅಂತಲೇ ಭಾವಿಸುತ್ತಾನೆ” ಎಂದು ಪ್ರತಾಪ್ ತಂದೆ ಹೇಳಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಪ್ರತಾಪ್ ಅವರು ಹೆಣ್ಣು ಮಕ್ಕಳನ್ನು ನೋಡುವ ದೃಷ್ಟಿ ಸರಿ ಇಲ್ಲ ಎಂದು ಹೇಳಿಕೆ ನೀಡಿದ್ದರು. ಆ ನಂತರ ಸಂಗೀತಾ ಅವರೇ ಪ್ರತಾಪ್ ಜೆಂಟಲ್‌ಮ್ಯಾನ್ ಎಂದು ಹೇಳಿದ್ದರು.

ನಮ್ಮ ಫೋನ್ ನಂಬರ್‌ ಬ್ಲ್ಯಾಕ್ ಮಾಡಿದ್ದಾನೆ

“ನನ್ನ ಮಗ ನಮ್ಮ ನಂಬರ್‌ನ್ನು ಬ್ಲಾಕ್ ಮಾಡಿದ್ದಾನೆ. ಅವನು ಬೇಸರದಲ್ಲಿ ಇರೋದಿಕ್ಕೆ ಅವನು ನಮ್ಮ ಫೋನ್ ನಂಬರ್‌ನ್ನು ಬ್ಲ್ಯಾಕ್ ಮಾಡಿದ್ದಾನೆ. ಇಡೀ ಕರ್ನಾಟಕ, ಭಾರತದ ಜನರು ನಮ್ಮ ಮಗನನ್ನು ಗೆಲ್ಲಿಸಬೇಕು” ಎಂದು ಪ್ರತಾಪ್ ತಂದೆ ಮರಿಮಾದಯ್ಯ ಹೇಳಿದ್ದಾರೆ.

ನನ್ನ ತಂದೆ-ತಾಯಿ ಜೊತೆ ಮಾತಾಡದೆ ಮೂರು ವರ್ಷ ಆಯ್ತು. ಎಲ್ಲರನ್ನು ದೂರ ಇಟ್ಟಿದ್ದೀನಿ ಅಂತ ಪ್ರತಾಪ್ ಅವರು ಹೇಳಿಕೊಂಡು ಕಣ್ಣೀರು ಹಾಕಿದ್ದರು.

ಜಗ್ಗೇಶ್ ಬಗ್ಗೆ ಮಾತಾಡಲ್ಲ

“ಜಗ್ಗೇಶ್ ಅವರ ಕಾಲ ಚಪ್ಪಲಿಗೂ ನಾವು ಸಮಾನರಲ್ಲ. ಅವರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ಪ್ರತಾಪ್‌ಗೆ ಎಷ್ಟೇ ಅವಮಾನ ಮಾಡಿದರೂ ನಾನು ಬೇಸರ ಮಾಡಿಕೊಳ್ಳೋದಿಲ್ಲ. ಅದೊಂದು ಆಟ ಅಷ್ಟೇ. ಉಳಿದ ಸ್ಪರ್ಧಿಗಳು ಕುಡ ನಮ್ಮ ಮಕ್ಕಳಿದ್ದ ಹಾಗೆ..ಒಂದು ಸಮಯದಲ್ಲಿ ಆ ಮಕ್ಕಳು ಕೂಡ ತಾವು ತಪ್ಪು ಮಾಡಿದ್ದೇವೆ ಅಂತ ಬೇಸರ ಮಾಡಿಕೊಳ್ತಾರೆ” ಎಂದು ಪ್ರತಾಪ್ ತಂದೆ ಮರಿಮಾದಯ್ಯ ಹೇಳಿದ್ದಾರೆ.

ಪ್ರತಾಪ್ ಅವರ ತಂದೆ ಮರಿಮಾದಯ್ಯ, ತಾಯಿ ಸವಿತಾ. ಪ್ರತಾಪ್ ಮೂಲತಃ ಮಂಡ್ಯದವರು. 10ನೇ ತರಗತಿ ನಂತರದಲ್ಲಿ ಪ್ರತಾಪ್ ಅವರು ಮೈಸೂರಿನಲ್ಲಿ ಶಿಕ್ಷಣ ಪಡೆದಿದ್ದಾರಂತೆ.

ಪ್ರತಾಪ್ ಅವರು ತಾನು ‘ಡ್ರೋನ್’ ಅನ್ವೇಷಣೆ ಮಾಡಿದ್ದೇನೆ ಎಂದು ಹೇಳಿಕೊಂಡು ಓಡಾಡಿದ್ದರು. ಆರಂಭದಲ್ಲಿ ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋನಲ್ಲಿ ಪ್ರತಾಪ್ ಅವರ ಸಾಧನೆ ಬಗ್ಗೆ ಜಗ್ಗೇಶ್ ಅವರು ಹೊಗಳಿದ್ದರು. ಆನಂತರದಲ್ಲಿ ಪ್ರತಾಪ್ ಅವರು ಮಾಡಿರೋದು ಮೋಸ ಅಂತ ಗೊತ್ತಾಗಿದೆ. ಆಮೇಲೆ ಜಗ್ಗೇಶ್ ಅವರು ಪ್ರತಾಪ್‌ರನ್ನು ನಂಬಲು ರೆಡಿ ಇಲ್ಲ ಎಂದು ಕಾಮೆಂಟ್ ಮಾಡಿರುವ ಪೋಸ್ಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಆಗ ಜಗ್ಗೇಶ್ ಅವರು ನಾನು ಯಾವುದೇ ಕಾಮೆಂಟ್ ಮಾಡಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *