ಬಡ್ಡಿ ಸಮೇತ ವಿನಯ್‌ಗೆ ವಾಪಸ್ ಬರುತ್ತೆ; ಕಾರ್ತಿಕ್ ಕ್ಟಾಪ್ಟನ್‌ ಆದ್ಮೇಲೆ ಸಂಗೀತಾ ಮೈಂಡ್ ಗೇಮ್ ಶುರುನಾ?

ಬಿಗ್ ಬಾಸ್ ಮನೆಯಿಂದ ಇಶಾನಿ ಔಟ್ ಆಗಿದ್ದಾರೆ. ನಿನ್ನೆ ನಡೆದ ಎಲಿಮಿನೇಶನ್‌ ಮೂಲಕ ಇಶಾನಿ ಬಿಗ್ ಬಾಸ್ ಕನ್ನಡ ಸೀಸನ್ 10ರ ಮನೆಯಿಂದ ಹೊರಗಡೆ ಹೋಗಿದ್ದಾರೆ. ಈ ಮೂಲಕ ಇನ್ನೊಬ್ಬರು ಸ್ಪರ್ಧಿ ಅಲ್ಲಿ ಕಡಿಮೆ ಆಗಿದ್ದಾರೆ. ಇವತ್ತು ಇನ್ನೊಂದು ಎಲಿಮಿನೇಶನ್ ಇರಲಿದ್ದು, ಇನ್ನೊಬ್ಬರು ಕೂಡ ಬಿಗ್ ಬಾಸ್ ಮನೆಯಿಂದ ಹೊರಹೋಗಲಿರುವುದು ಪಕ್ಕಾ ಎನ್ನಲಾಗಿದೆ. ಇತ್ತ ಇನ್ನೊಂದು ಬದಲಾವಣೆ ಆಗಿದ್ದು, ಕಾರ್ತಿಕ್ ಮಹೇಶ್ ಮನೆಯ ಕ್ಯಾಪ್ಟನ್ ಆಗಿ ನೇಮಕಗೊಂಡಿದ್ದಾರೆ.

ಕಾರ್ತಿಕ್ ಕ್ಟಾಪ್ಟನ್ ಆದ ತಕ್ಷಣ ಸಂಗೀತಾ ವರ್ತನೆಯಲ್ಲಿ ಸಹಜವಾಗಿಯೇ ಬದಲಾವಣೆ ಆಗಿದೆ ಎನ್ನಬಹುದು. ‘ಬಿಗ್ ಬಾಸ್ ಮನೆಯಲ್ಲಿ ವಿನಯ್ ಆನೆ ಆಗಿದ್ದರೆ ನಮಗೇನೂ ಭಯವಿಲ್ಲ’ ಎಂದು ಬಹಿರಂಗ ಹೇಳಿಕೆ ಕೊಟ್ಟುಬಿಟ್ಟಿದ್ದಾರೆ ನಟಿ ಹಾಗೂ ಬಿಗ್ ಬಾಸ್ ಮನೆಯ ಕರ್ನಾಟಕ ಕ್ರಶ್ ಖ್ಯಾತಿಯ ಸಂಗೀತಾ ಶೃಂಗೇರಿ. ಈ ಮಾತು ಸಹಜವಾಗಿಯೇ ನಟ ಹಾಗು ಬಿಗ್ ಬಾಸ್ ಸ್ಪರ್ಧಿ ವಿನಯ್ ಅವರನ್ನು ಕೆಣಕಿದಂತಾಗಿದೆ. ಅವರಿನ್ನು ಸುಮ್ಮನೇ ಇರಲು ಸಾಧ್ಯವೇ ಇಲ್ಲ ಎಂಬಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಗೀತಾ ಮಾತಿಗೆ ವಿನಯ್ ಕೌಂಟರ್ ಏನು ಎಂಬುದು ಸದ್ಯವೇ ಹೊರಬರಲಿದೆ ಎಂದು ನಿರೀಕ್ಷೆ ಮಾಡಬಹುದು.

ವಿನಯ್ ಕ್ಯಾಪ್ಟನ್ ಆದಾಗ ಕಾರ್ತಿಕ್ ಮತ್ತು ಸಂಗೀತಾಗೆ ಸಖತ್ ಟಾರ್ಚರ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಅದನ್ನು ವೀಕ್ಷಕರು ನೋಡಿದ್ದಾರೆ ಕೂಡ. ಈಗ ಕಾರ್ತಿಕ್, ಅಂದ್ರೆ ಸಂಗೀತಾರ ಬೆಸ್ಟ್ ಫ್ರೆಂಡ್ ಹಾಗೂ ಲವರ್ ಕ್ಯಾಪ್ಟನ್ ಆಗಿದ್ದಾರೆ ಎಂದಮೇಲೆ ಸಂಗೀತಾ ಸುಮ್ಮನಿರಲು ಹೇಗೆ ಸಾಧ್ಯ? ವಿನಯ್ ಮೇಲೆ ಮುಗಿಬೀಳುವುದು ಪಕ್ಕಾ ಎಂಬುದನ್ನು ಎಲ್ಲರೂ ನಿರೀಕ್ಷೆ ಮಾಡಿದ್ದಾರೆ. ಅದರಂತೆ ಅಲ್ಲಿ ನಡೆಯುತ್ತಿದೆ. ಸಂಗೀತಾ ಮತ್ತು ಕಾರ್ತಿಕ್ ಸೇರಿ, ವಿನಯ್ ತಮಗಿಬ್ಬರೂ ಈ ಮೊದಲು ಕೊಟ್ಟಿದ್ದ ತೊಂದರೆಗೆ ಬಡ್ಡಿ ಸೇರಿಸಿ ವಾಪಸ್ ಕೊಡುವುದು ಶತಃಸಿದ್ಧ ಎಂಬ ಮಾತು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಒಟ್ಟಿನಲ್ಲಿ, ಸಂಗೀತಾ ವಿನಯ್ ಮಧ್ಯೆ ನಡೆಯುತ್ತಿರುವ ಶೀತಲ ಹಾಗೂ ಬಹಿರಂಗ ಯುದ್ಧಕ್ಕೆ ಈಗ ಕಾರ್ತಿಕ್ ಕ್ಯಾಪ್ಟನ್ ಆಗಿರುವುದು ಬೆಂಕಿಗೆ ತುಪ್ಪ ಸುರಿದಂತಾಗಿದೆ. ಇನ್ನೇನಿದ್ದರೂ ವಿನಯ್ ವಿರುದ್ಧ ಸಂಗೀತಾ-ಕಾರ್ತಿಕ್ ಜೋಡಿಯ ಯುದ್ಧ, ಅವರಿಬ್ಬರಿಗೆ ತನಿಷಾ ಸಾಥ್ ನೀಡಲಿದ್ದಾರೆ ಎಂಬುದು ಎಲ್ಲ ಕಡೆಯಲ್ಲೂ ಚರ್ಚೆಯಾಗುತ್ತಿರುವ ಮಾತುಕತೆ. ಅದು ನಿಜವಾಗಲಿದೆ ಕೂಡ ಎಂಬುದು ಸಾಕಷ್ಟು ಜನರ ನಿರೀಕ್ಷೆ ಕೂಡ. ಆದರೆ, ಈ ಮಾತು ಎಷ್ಟರ ಮಟ್ಟಿಗೆ ನಿಜ ಆಗುತ್ತದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಷ್ಟೇ!

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *