BBK10: “ಇದೇನಾ ಫ್ರೆಂಡ್‌ಶಿಪ್? ಫ್ರೆಂಡ್ ಆಗಿ ನೀವು 100% ಕೊಟ್ಟಿದ್ದೀರಾ?”: ಸಂಗೀತಾಗೆ ಕಿವಿಹಿಂಡಿದ ಕಿಚ್ಚ ಸುದೀಪ್!
Karthik, Tanisha and Sangeetha in BBK10: ಬಿಗ್‌ಬಾಸ್ ಕನ್ನಡ ಸೀಸನ್ 10 ಕಾರ್ಯಕ್ರಮದಲ್ಲಿ ಆರನೇ ವಾರ ಸಂಗೀತಾ – ಕಾರ್ತಿಕ್ – ತನಿಷಾ ಮಧ್ಯೆ ಜೋರು ಗಲಾಟೆ ನಡೆದಿದ್ದು, ಸಂಗೀತಾ “ಫ್ರೆಂಡ್ ಆಗಿ ಅವಕಾಶವಿದ್ದರೂ ನನ್ನನ್ನ ಸೇಫ್ ಮಾಡಲಿಲ್ಲ” ಅಂತ ಪದೇ ಪದೇ ಹೇಳಿ ಕಾರ್ತಿಕ್, ತನಿಷಾ ಇಬ್ಬರನ್ನು ಚುಚ್ಚುತ್ತಾ “ಫ್ಲಿಪ್”, “ಹಾರ್ಟ್ ಬ್ರೇಕ್”, “ಟ್ರಸ್ಟ್ ಇಲ್ಲ” ಎಂಬೆಲ್ಲಾ ಪದಬಳಕೆಯನ್ನ ಮಾಡಿದ್ದರು. ನಿನ್ನೆ ನಡೆದ ಕಿಚ್ಚನ ಪಂಚಾಯಿತಿ ಸುದೀಪ್ ಫ್ಲಿಪ್ ಬಗ್ಗೆ ಮಾತನಾಡಿದ್ದಾರೆ.
ಕಿಚ್ಚ ಸುದೀಪ್ ತನಿಷಾಗೆ ಪದೇ ಪದೇ ಈ ವಾರ ನಿಮಗೆ ‘ಫ್ಲಿಪ್’ ಎಂಬ ಪದ ಬರ್ತಿತ್ತು. ಏನು ಹಾಗಂದ್ರೆ ಅಂತ ಕೇಳಿದಕ್ಕೆ ಉಲ್ಟಾ ಹೊಡೆಯೋದು ಅಂತ ಉತ್ತರಿಸಿದರು. ಆಗ ಮತ್ತೆ ಸುದೀಪ್ ಈ ಮನೆಗೂ ಫ್ಲಿಪ್‌ಗೂ ಏನು ಸಂಬಂಧ ಅಂತ ಪ್ರಶ್ನಿಸಿದಕ್ಕೆ ಈ ಮನೆಯಲ್ಲಿ ಚೇಂಜ್ ಆಗುತ್ತಿರುತ್ತಾರೆ, ಅದು ಸಡನ್ ಆಗಿ ಆಗಬಹುದು, ಅಥವಾ ನಿಧಾನವಾಗಿ ಆಗಬಹುದು ಅಂತ ಹೇಳಿದರು. ಬಳಿಕ ಕಾರ್ತಿಕ್ ಇದರ ಬಗ್ಗೆ ವಿವರಿಸುತ್ತಾ,
“ಲುಡೋ ಟಾಸ್ಕ್ ನಡೆಯುವಾಗ ‘ಅದಲು ಬದಲು’ ಆಯ್ಕೆ ಸಿಕ್ತು. ಸಂಗೀತಾ ಹೋಗ್ತೀನಿ ಅಂದಳು. ನಾವು ಕಳಿಸಿಕೊಟ್ವಿ. ವರ್ತೂರು ಸಂತೋಷ್ ಅಪ್‌ಸೆಟ್ ಆಗಿ ಈ ಕಡೆ ಬಂದರು. ‘ಎದುರಾಳಿ ತಂಡದ ಒಬ್ಬರನ್ನ ಸೇಫ್ ಮಾಡಿ’ ಎಂಬ ಆಯ್ಕೆ ಬಂದಾಗ ‘ನೀವಿಬ್ರೇ ಡಿಸೈಡ್ ಮಾಡಬೇಡಿ. ಮೂವರೂ ಮಾಡಬೇಕು’ ಅಂತ ವರ್ತೂರು ಸಂತೋಷ್ ಹೇಳಿದರು. ನಾವು ಸಿರಿ ಹೆಸರನ್ನ ಹೇಳಿದ್ವಿ. ಅವರು ನೀತು ಎಂದರು. ಕೊನೆಗೆ ಸಿರಿ ಅವರನ್ನ ಸೇಫ್ ಮಾಡಿದ್ವಿ. ಅಲ್ಲಿ ಸಂಗೀತಾಗೆ ಎರಡೇ ಹೆಜ್ಜೆ ಉಳಿದಿತ್ತು. ಸಂಗೀತಾ ಬಗ್ಗೆ ನಾವು ಅಲ್ಲಿ ಯೋಚನೆ ಮಾಡಿದ್ದು ಹೌದು. ಅವಳು ಹೇಗಿದ್ದರೂ ಸೇಫ್ ಆಗ್ತಾಳೆ ಅಂತ ಇತ್ತು. ಆದರೆ ಸಂಗೀತಾ ಕಡೆಯಿಂದ ಫ್ಲಿಪ್ ಎಂಬ ಮಾತು ಬಂತು. ಅದು ನಮಗೆ ತುಂಬಾ ಹರ್ಟ್ ಆಯ್ತು” ಎಂದು ಹೇಳಿದರು.
ಅದಕ್ಕೆ ಸಂಗೀತಾ ನಾವು ಟೀಮ್ ಆಗಿದ್ಯಾಕೆ ಅಂದ್ರೆ ನಮ್ಮಲ್ಲಿ ಅಂಡರ್‌ಸ್ಟಾಂಡಿಂಗ್ ಇದೆ. ನಾವು ಫ್ರೆಂಡ್ಸ್ ಅಂತ. ‘ಅದಲು ಬದಲು’ ಬಂದಾಗ ನಾವು ವರ್ತೂರು ಸಂತೋಷ್ ಮನೆ ತಗೊಂಡ್ವಿ. ಯಾಕಂದ್ರೆ ಅದು ಲೀಡ್‌ನಲ್ಲಿ ಇತ್ತು ಅಂತ. ‘ನಾನು ಹೋಗ್ತೀನಿ’ ಅಂತ ಹೇಳಿದೆ. ಯಾರೂ ಕೂಡ ನಾನು ಹೋಗ್ಲಾ ಅಂತ ಡಿಸ್ಕಷನ್ ಬಂದಿಲ್ಲ ಎಂದಿದಕ್ಕೆ, ಕಿಚ್ಚ ಸುದೀಪ್ ನೀವೂ ಡಿಸ್ಕಸ್ ಮಾಡಿಲ್ಲ. ನೀವೇ ಆಕ್ಚುಲಿ ಪುಶ್ ಮಾಡ್ತಿದ್ರಿ… ನೀವೇ ಹೋಗ್ಬೇಕಂತ. ಆಗ ಡಿಸ್ಕಷನ್ ಯಾಕೆ ಮಾಡಲಿಲ್ಲಅಂತ ಕೇಳಿದಕ್ಕೆ ಅವರೂ ಕೇಳಬಹುದಿತ್ತು. ನನ್ನ ಕಡೆಯಿಂದ ನಾನು ಇಂಟ್ರೆಸ್ಟ್ ತೋರಿಸಿದೆ ಅಂತ ಹೇಳಿದರು. ತಿರ್ಗಾ ಸುದೀಪ್, ವಾರವಿಡೀ ‘ನೀನೂ ಕೇಳಬಹುದಿತ್ತು’ ಅಂತ ನೀವು ತುಂಬಾ ಸಲಿ ಹೇಳಿದ್ದೀರಾ. ಆದ್ರೆ ನೀವ್ಯಾಕೆ ಕೇಳಲಿಲ್ಲ ಅಂತ ಪ್ರಶ್ನಿಸಿದರು.ಅದಕ್ಕೆ ಸಂಗೀತಾ ‘ನೀನು ಹೋಗು’ ಅಂದ್ಮೇಲೆ ನಾನು ಇನ್ನೇನು ಕೇಳಲಿ ಎಂದರು.
ಬಳಿಕ ಕಿಚ್ಚ ಸುದೀಪ್, ನೀವು ಹೋಗ್ತೀನಿ ಎಂದಾಗ “ಹೋಗಬೇಡʼ ಅನ್ನೋಕೆ ಅವರಿಗೆ ಮನಸ್ಸಾಗಲಿಲ್ಲ. ಒಬ್ಬ ಫ್ರೆಂಡ್ ಹೋಗಲು ಇಷ್ಟಪಟ್ಟರು. ಬಾಕಿ ಇಬ್ಬರು ಅದಕ್ಕೆ ಸ್ಪಂದಿಸಿದರು. “ನಾನೂ ಹೋಗಬೇಕು” ಅಂತ ಹೇಳುವ ಮನಸ್ಸು ಇಬ್ಬರಿಗೂ ಇರಲಿಲ್ಲ. ತನಿಷಾ, ಕಾರ್ತಿಕ್.. ನಿಮ್ಮಿಬ್ಬರಿಗೆ ಹೋಗಬೇಕು ಅಂತ ಅನಿಸಲಿಲ್ವಾ? ಅಂತ ಕೇಳಿದಕ್ಕೆ ತನಿಷಾ ಅನಿಸಿತ್ತು ಸರ್ ಅಂತ ಹೇಳಿದರು. ಆಗ ಕಾರ್ತಿಕ್ ಸಹ ಹೌದು ಸರ್. ನಾವು ಚರ್ಚೆ ಮಾಡೋಕೆ ಮುನ್ನವೇ ಸಂಗೀತಾ ‘ಹೋಗ್ತೀನಿ’ ಎಂದಳು ಎಂದು ಹೇಳಿದರು. ಅದಕ್ಕೆ ಸುದೀಪ್, ಇದನ್ನ ನೋಡಿ ತಾನೇ ವರ್ತೂರು ಸಂತೋಷ್ ಹೇಳಿದ್ದು ನೀವು ನೀವೇ ಚರ್ಚೆ ಮಾಡುವ ಹಾಗಿಲ್ಲ. ನಮ್ಮನ್ನೂ ಕೇಳಿ ಅಂತ.. ಹೇಳಿದಕ್ಕೆ ಕಾರ್ತಿಕ್ ಹೌದು ಸರ್ ಎಂದು ಒಪ್ಪಿಕೊಂಡರು.