Rashmika Mandanna: ವಿಜಯ್ – ರಶ್ಮಿಕಾ ಲವ್ ಸ್ಟೋರಿ ರಿವೀಲ್.! ಶೀಘ್ರದಲ್ಲೇ ಮದುವೆಯಾಗೋದು ಪಕ್ಕಾ?

Rashmika Mandanna Vijay Devarakonda : ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಡುವೆ ಏನಿದೆ ಎಂದು ತಿಳಿಯಲು ಸಿನಿ ಪ್ರೇಕ್ಷಕರು ತುಂಬಾ ಆಸಕ್ತಿ ಹೊಂದಿದ್ದಾರೆ. ಮೊದಲ ಸಿನಿಮಾ ಗೀತಾ ಗೋವಿಂದಂ ನಂತರ ಇವರಿಬ್ಬರ ನಡುವೆ ಪ್ರೀತಿ ಶುರುವಾಗಿದೆ ಎಂಬ ವರದಿಗಳು ಬಂದಿದ್ದವು. ಅದಾದ ನಂತರ ಇವರಿಬ್ಬರು ಡಿಯರ್ ಕಾಮ್ರೇಡ್ ಚಿತ್ರದಲ್ಲಿ ನಟಿಸಿದರು. ನಂತರ ಇವರಿಬ್ಬರ ನಡುವಿನ ಸಂಬಂಧದ ರೂಮರ್ ಗಳು ಹೆಚ್ಚಾದವು.

ನಂದಮೂರಿ ಬಾಲಕೃಷ್ಟ ಅವರ ಅನ್‌ಸ್ಟಾಪಬಲ್ ವಿತ್ ಎನ್‌ಬಿಕೆನಲ್ಲಿ ರಶ್ಮಿಕಾ ವಿಜಯ್ ದೇವರಕೊಂಡ ನಡುವಿನ ಸಂಭಾಷಣೆ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಟಾಲಿವುಡ್ ನಿರ್ದೇಶಕ ಸಂದೀಪ್ ವಂಗಾ ನಿರ್ದೇಶನದ ಅನಿಮಲ್ ಚಿತ್ರದಲ್ಲಿ ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಡಿಸೆಂಬರ್ 1 ರಂದು ಅನಿಮಲ್ ಚಿತ್ರ ಬಿಡುಗಡೆ ಆಗಲಿದೆ. ಈ ಚಿತ್ರದ ಪ್ರಚಾರದ ಭಾಗವಾಗಿ ಬಾಲಕೃಷ್ಣ ಅವರ ಶೋಗೆ ಅನಿಮಲ್ ಚಿತ್ರ‌ತಂಡ ಆಗಮಿಸಿತು. ಪ್ರೇಕ್ಷಕರು ಕಾತರದಿಂದ ಕಾಯುತ್ತಿರುವ ಈ ಸಂಚಿಕೆಯ ಪ್ರೋಮೋ ಇದೀಗ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದ ಪ್ರೇಕ್ಷಕರನ್ನು ಭರ್ಜರಿಯಾಗಿ ಆಕರ್ಷಿಸುತ್ತಿದೆ.

ಈ ಪ್ರೋಮೋದಲ್ಲಿ ಬಾಲಯ್ಯ, ರಣಬೀರ್, ರಶ್ಮಿಕಾ ಮತ್ತು ಸಂದೀಪ್ ಒಟ್ಟಿಗೆ ಸದ್ದು ಮಾಡಿದ್ದಾರೆ. ಈ ಪ್ರೋಮೋದಲ್ಲಿ ಬಾಲಕೃಷ್ಣ ವಿಜಯ್ ಅದೇವರಕೊಂಡ ಅವರಿಗೆ ಫೋನ್ ಮಾಡಿ ಮಾತನಾಡಿದ್ದಾರೆ. ವಿಜಯ್ ಫೋನ್‌ನಲ್ಲಿ ವಾಟ್ಸಾಪ್ ಎಂದು ಹೇಳಿದಾಗ ರಶ್ಮಿಕಾ ನಾಚಿ ನೀರಾಗಿದ್ದಾರೆ. ನಂತರ ಡಿಯರ್ ಕಾಮ್ರೇಡ್ ಲವ್ ಸಾಂಗ್ ಕೂಡ ಪ್ಲೇ ಆಯಿತು.

ವಿಜಯ್ ದೇವರಕೊಂಡ ಕರೆಯಲ್ಲಿರುವಾಗಲೇ ಸಂದೀಪ್ ರೆಡ್ಡಿ ಬಳಿ ಬಾಲಕೃಷ್ಣ ತಮಾಷೆಯಾಗಿ ‘ಐ ಲವ್ ರಶ್ಮಿಕಾ’ ಎಂದಿದ್ದಾರೆ. ಈ ಸಂಚಿಕೆಯಲ್ಲಿ ಬಾಲಕೃಷ್ಣ.. ವಿಜಯ್-ರಶ್ಮಿಕಾ ಲವ್ ಸ್ಟೋರಿ ರಿವೀಲ್ ಆಗುತ್ತಾ..? ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಈ ಶೋನಲ್ಲಿ ಏನಾಗಲಿದೆ ಎಂದು ತಿಳಿಯಲು ಪೂರ್ಣ ಸಂಚಿಕೆಗಾಗಿ ಕಾಯಲೇಬೇಕು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *