‘ಟಿಪ್ಪು ಸುಲ್ತಾನ್ ಈ ನೆಲದ ಮಗ ಎಂಬ ಎಚ್. ವಿಶ್ವನಾಥ್ ಹೇಳಿಕೆ ಸತ್ಯ‘ – ಸಂಸದ ಡಿ.ಕೆ ಸುರೇಶ್
ಇನ್ನು, ಎಚ್. ವಿಶ್ವನಾಥ್ ಹೇಳಿಕೆಯನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ. ಹಿಂದೆ ಯಡಿಯೂರಪ್ಪ ಟಿಪ್ಪು ಜಯಂತಿ ಮಾಡಿದ್ದನ್ನೂ ಅಲ್ಲಗಳೆಯಲು ಆಗಲ್ಲ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟಿಪ್ಪು ಹೊಗಳಿದ್ದನ್ನೂ ಅಲ್ಲಗಳೆಯಲು ಸಾಧ್ಯವಿಲ್ಲ – ಡಿ.ಕೆ ಸುರೇಶ್
ಬೆಂಗಳೂರು(ಆ.27): ಟಿಪ್ಪು ಸುಲ್ತಾನ್ ಈ ನೆಲದ ಮಗ ಮತ್ತು ವೀರ ಹೋರಾಟಗಾರ ಎಂಬ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿಕೆಗೆ ಸಂಸದ ಡಿ.ಕೆ ಸುರೇಶ್ ಪ್ರತಿಕ್ರಿಯಿಸಿದ್ದಾರೆ. ಈ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಡಿ.ಕೆ ಸುರೇಶ್, ಎಚ್. ವಿಶ್ವನಾಥ್ ಹೇಳಿರುವುದು. ಟಿಪ್ಪು ಈ ನೆಲಸ ಮಗನೇ ಎಂದರು.
ಬಿಜೆಪಿ ಎಂಎಲ್ಸಿ ಎಚ್. ವಿಶ್ವನಾಥ್ ನೀಡಿದ ಹೇಳಿಕೆಯನ್ನೇ ಈ ಹಿಂದೆ ಕೆಜೆಪಿ ಶುರು ಮಾಡಿದ್ದಾಗ ಸಿಎಂ ಬಿ.ಎಸ್ ಯಡಿಯೂರಪ್ಪನವರು ಹೇಳಿದ್ದರು. ಈಗ ವಿಶ್ವನಾಥ್ ಹೇಳಿದ್ದು ಸತ್ಯವೇ, ಆಗ ಯಡಿಯೂರಪ್ಪ ಹೇಳಿದ್ದು ಸತ್ಯವೇ. ಚುನಾವಣೆ ದೃಷ್ಟಿ ಇಟ್ಟುಕೊಂಡು ಇತಿಹಾಸ ಬದಲಿಸುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದರು.
ಇನ್ನು, ಎಚ್. ವಿಶ್ವನಾಥ್ ಹೇಳಿಕೆಯನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ. ಹಿಂದೆ ಯಡಿಯೂರಪ್ಪ ಟಿಪ್ಪು ಜಯಂತಿ ಮಾಡಿದ್ದನ್ನೂ ಅಲ್ಲಗಳೆಯಲು ಆಗಲ್ಲ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟಿಪ್ಪು ಹೊಗಳಿದ್ದನ್ನೂ ಅಲ್ಲಗಳೆಯಲು ಸಾಧ್ಯವಿಲ್ಲ. ಇತಿಹಾಸ ತಿರುಚುವುದು ಕುಮ್ಮಕ್ಕು ಕೊಡುವುದು, ಜನರ ಭಾವನೆ ಬೇರೆಡೆ ತೆಗೆದುಕೊಂಡು ಹೋಗುವ ಕೆಲಸ ನಡೀತಿದೆ. ಟಿಪ್ಪು ಕೂಡ ಈ ದೇಶಕ್ಕೆ ರಾಜ್ಯಕ್ಕೆ ಸಾಕಷ್ಡು ಕೊಡುಗೆ ಕೊಟ್ಟಿದ್ದಾರೆ ಎಂದು ಸಂಸದ ಸುರೇಶ್.
ನಿನ್ನೆ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದಾಗ ಎಚ್. ವಿಶ್ವನಾಥ್, ಟಿಪ್ಪು ಯಾವುದೇ ಜಾತಿ ಅಥವಾ ಧರ್ಮಕ್ಕೆ ಸೇರಿದ ವ್ಯಕ್ತಿಯಲ್ಲ. ಆತನ ಕುರಿತು ವಿದ್ಯಾರ್ಥಿಗಳು ಓದಿ ತಿಳಿದುಕೊಳ್ಳಬೇಕು. ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಡಿದ ಕಮಾಂಡರ್. ಅದೇ ಸಾಲಿಗೆ ಟಿಪ್ಪು ಕೂಡ ಸೇರುತ್ತಾನೆ ಎಂದು ಅವರು ಹೇಳಿದ್ದರು.
ಗಾಂಧೀಜಿಯಿಂದ ಟಿಪ್ಪು ಸುಲ್ತಾನ್ವರೆಗೆ ನಮ್ಮ ವಿದ್ಯಾರ್ಥಿಗಳು ಓದಬೇಕು. ಸರ್ಕಾರ ಟಿಪ್ಪು ಪಠ್ಯವನ್ನು ಕೈಬಿಟ್ಟಿಲ್ಲ. 5ನೇ ತರಗತಿ ಬದಲಿಗೆ 7ನೇ ತರಗತಿಯಲ್ಲಿ ಸೇರಿಸಿದೆ ಎಂದಿದ್ದರು. ಈ ಹೇಳಿಕೆಯೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.