ಸಿದ್ದರಾಮಯ್ಯ ಪ್ರಚಾರ ನಡೆಸಿದ್ದ ಕಾಮಾರೆಡ್ಡಿಯಲ್ಲಿ ಕೆಸಿಆರ್‌ಗೆ ಭಾರೀ ಹಿನ್ನಡೆ, 3ನೇ ಸ್ಥಾನದಲ್ಲಿ ತೆಲಂಗಾಣ ಸಿಎಂ!

ಹೈಲೈಟ್ಸ್‌:

  • ಕಾಮಾರೆಡ್ಡಿ ಕ್ಷೇತ್ರದಲ್ಲಿ ತೆಲಂಗಾಣ ಹಾಲಿ ಸಿಎಂ ಕೆ ಚಂದ್ರಶೇಖರ್‌ ರಾವ್‌ಗೆ ಭಾರೀ ಹಿನ್ನಡೆ
  • ಆರಂಭಿಕ ಸುತ್ತಿನ ಮತ ಎಣಿಕೆಯಲ್ಲಿ ತೆಲಂಗಾಣ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ರೇವಂತ್‌ ರೆಡ್ಡಿ ಮುನ್ನಡೆ
  • ಚಂದ್ರಶೇಖರ್‌ ರಾವ್‌ಗೆ ಮೂರನೇ ಸ್ಥಾನ, ಎರಡನೇ ಸ್ಥಾನದಲ್ಲಿ ಬಿಜೆಪಿ ಅಭ್ಯರ್ಥಿ ವೆಂಕಟ ರಮಣ ರೆಡ್ಡಿ

ತಮ್ಮ ಭದ್ರಕೋಟೆ ಗಜ್ವೇಲ್‌ನಲ್ಲಿ ಸೋಲುವ ಆತಂಕದಿಂದ ಕಾಮಾರೆಡ್ಡಿಯಿಂದಲೂ ಸ್ಪರ್ಧಿಸಿರುವ ಹಾಲಿ ಸಿಎಂ ಕೆ ಚಂದ್ರಶೇಖರ್‌ ರಾವ್‌ ಇಲ್ಲಿ ಭಾರೀ ಹಿನ್ನಡೆ ಅನುಭವಿಸುತ್ತಿದ್ದಾರೆ. ಆರಂಭಿಕ ಸುತ್ತಿನ ಮತ ಎಣಿಕೆಯಲ್ಲಿ ತೆಲಂಗಾಣ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ರೇವಂತ್‌ ರೆಡ್ಡಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿ ಬಿಜೆಪಿ ಅಭ್ಯರ್ಥಿ ಇದ್ದು, ಮೂರನೇ ಸ್ಥಾನದಲ್ಲಿ ಚಂದ್ರಶೇಖರ್‌ ರಾವ್‌ ಇದ್ದಾರೆ.

ಮೊದಲ ಸುತ್ತಿನ ಅಂತ್ಯಕ್ಕೆ ಇಲ್ಲಿ ರೇವಂತ್‌ ರೆಡ್ಡಿ 3,607 ಮತಗಳನ್ನು ಪಡೆದಿದ್ದು, ಬಿಜೆಪಿಯ ವೆಂಕಟ ರಮಣ ರೆಡ್ಡಿ (2,717) ವಿರುದ್ಧ 890 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಚಂದ್ರಶೇಖರ್‌ ರಾವ್‌ ಮೂರನೇ ಸ್ಥಾನದಲ್ಲಿದ್ದು 2,695 ಮತ ಗಳಿಸಿದ್ದಾರೆ.

ಮೊದಲ ಸುತ್ತಿನ ಅಂತ್ಯಕ್ಕೆ ಕಾಮಾರೆಡ್ಡಿ ಕ್ಷೇತ್ರದ ಚಿತ್ರಣ ಹೀಗಿದೆ,

ಅಭ್ಯರ್ಥಿ ಪಕ್ಷ ಮತ
ರೇವಂತ್‌ ರೆಡ್ಡಿ ಕಾಂಗ್ರೆಸ್‌ 3,607
ವೆಂಕಟ ರಮಣ ರೆಡ್ಡಿ ಬಿಜೆಪಿ 2,717
ಕೆ ಚಂದ್ರಶೇಖರ್‌ ರಾವ್‌ ಬಿಆರ್‌ಎಸ್‌ 2,695

ಕಾಮಾರೆಡ್ಡಿಯಲ್ಲಿ ಒಟ್ಟು 19 ಸುತ್ತಗಳಿದ್ದು, ಇನ್ನೂ 18 ಸುತ್ತುಗಳ ಮತ ಎಣಿಕೆ ಬಾಕಿ ಇದೆ. ತೆಲಂಗಾಣ ವಿಧಾನಸಭೆಯ ಎಲ್ಲಾ ಕ್ಷೇತ್ರಗಳ ಫಲಿತಾಂಶವನ್ನು ವೀಕ್ಷಿಸಲು 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *