Medicine shortage: ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಸ್ಥಿತಿಗತಿ ಹೇಗಿದೆ? ಏನಂತಾರೆ ಅಲ್ಲಿನ ವೈದ್ಯರು?
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತವಾದ ಔಷಧಿಗಳು ದೊರೆಯುತ್ತಿಲ್ಲವೆಂಬ ದೂರು ಕೇಳಿ ಬಂದಿವೆ. ಇದೇ ವಿಚಾರವಾಗಿ ರೋಗಿಗಳು ಮತ್ತು ವೈದ್ಯರ ನಡುವೆ ಕೆಲವು ಆಸ್ಪತ್ರೆಗಳಲ್ಲಿ ವಾಗ್ವಾದ ನಡೆದ ಉದಾಹರಣೆಗಳು ಸಾಕಷ್ಟಿವೆ. ಈ ಔಷಧಿ ಕೊರತೆ ಕುರಿತು ಸ್ವತಃ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸಹ ಮಾತನಾಡಿದ್ದರು. ಅದಾದ ಬಳಿಕ ಈ ವಿಚಾರ ಹೆಚ್ಚು ಚರ್ಚೆ ಆಗುತ್ತಿದೆ.
ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಯಲ್ಲಿ ಔಷಧಿ ಸಂಗ್ರಹ ಸುವ್ಯವಸ್ಥಿತವಾಗಿದೆ. ಇಲ್ಲಿ ಯಾವುದೇ ಔಷಧಿಗಳ ಕೊರತೆ ಇಲ್ಲ ಎಂದು ಕಿಮ್ಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅರುಣ್ಕುಮಾರ್ ಸ್ಪಷ್ಟನೆ ಕೊಟ್ಟಿದ್ದಾರೆ. ಎಲ್ಲ ಔಷಧಿಗಳು ಲಭ್ಯ ಇವೆ: ಕೀಮ್ಸ್ ಆಸ್ಪತ್ರೆಯಲ್ಲಿ ವಿವಿಧ ವಿಭಾಗಗಳ ಎಚ್ಓಡಿ, ಓಪಿಡಿ, ಐಪಿಡಿ ಸಲಹೆ ಪಡೆದು ಔಷಧಿಗಳನ್ನು ತರಿಸುತ್ತೇವೆ. ಅನೀಮಿಯದಿಂದ ಹಿಡಿದು ಕ್ಯಾನ್ಸರ್ವೆರೆಗೂ ಔಷಧಗಳು ಲಭ್ಯವಿದೆ. ನಮ್ಮಲ್ಲಿ ಔಷಧಿಗಳ ಕೊರತೆ ಇದೆ ಎಂಬ ಮಾತಿಲ್ಲ. ಮಕ್ಕಳ ವ್ಯಾಕ್ಸಿನ್ನಿಂದ ಹಿಡಿದು ರೆಬಿಸ್ವರೆಗೆ ಔಷಧ ಇದ್ದು, ಕೊರತೆ ಇಲ್ಲ ಎಂದು ಹೇಳಿದರು. ಜೀವರಕ್ಷಕ ಔಷಧಗಳ ಸಂಗ್ರಹ ಸಾಕಷ್ಟು ಪ್ರಮಾಣದಲ್ಲಿದೆ ಕೀಮ್ಸ್ನಲ್ಲಿ ದಾಸ್ತಾನು ಇದೆ. ಕಿಮ್ಸ್ಗೆ ಬರುವ ರೋಗಿಗಳು ಔಷಧಕ್ಕಾಗಿ ಪರದಾಡುವ ಪರಿಸ್ಥಿತಿ ಇಲ್ಲಿ ಇಲ್ಲ. ಔಷಧ ಸಂಗ್ರಹ ಮತ್ತು ವಿತರಣೆ ಇದುವರೆಗೆ ಸರಾಗವಾಗಿ ನಡೆಯುತ್ತಿದೆ.
ಜಿಲ್ಲಾಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಔಷಧ ಕೊರತೆ ಆಗುತ್ತಿದೆ . ಸರ್ಕಾರಿ ಆಸ್ಪತ್ರೆಗಳ ಔಷಧ ಕೊರತೆಯ ಒತ್ತಡದ ಪರಿಸ್ಥಿತಿ ಇದುವರೆಗೂ ನಮ್ಮ ಹುಬ್ಬಳ್ಳಿ ಕಿಮ್ಸ್ಗೆ ಎದುರಾಗಿಲ್ಲ ಎಂದರು. ಆರೋಗ್ಯ ಕುರಿತು ಏನೇ ಎಮರ್ಜೆನ್ಸಿ ಚಿಕಿತ್ಸೆಗೆ, ಔಷಧ ವಿತರಣೆ ಬೇಕಿದ್ದು, ಅದಕ್ಕೆಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಔಷಧಿ ವಿಚಾರದಲ್ಲಿ ನಾವು ಹೆಚ್ಚು ಮುಂಜಾಗ್ರತೆ ಒದಗಿಸಿದ್ದೇವೆ ಎಂದು ಹೇಳಿದರು.
ಸರ್ಕಾರಿ ಆಸ್ಪತ್ರೆಗಳನ್ನೆ ನೆಚ್ಚಿಕೊಂಡವರಲ್ಲಿ ಆತಂಕ ರಾಜ್ಯದಲ್ಲಿ ಬಹುತೇಕ ಬಡವರು, ಮಧ್ಯಮ ವರ್ಗದ ಜನರು ಆರೋಗ್ಯ ಕಾಳಜಿಗಾಗಿ, ಅಥವಾ ಆರೋಗ್ಯದಲ್ಲೇನಾದರೂ ಏರುಪೇರಾದರೆ ಅವರು ಮೊದಲು ಹೋಗುವುದೇ ಸರ್ಕಾರಿ ಆಸ್ಪತ್ರೆಗಳಿಗೆ. ಆದರೆ ದುರಾದೃಷ್ಟಕ್ಕೆ ರಾಜ್ಯದ ಸರ್ಕಾರ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಎದುರಾಗಿದೆ ಎಂದು ಹೇಳಲಾಗುತ್ತಿದೆ. ಈ ಮಾತು ಕೇಳಿದ ಬಳಿಕ ಬಡ ರೋಗಿಗಳಲ್ಲಿ ಆತಂಕ ಎದುರಾಗಿದೆ. ಆರೋಗ್ಯಕ್ಕೆ ಆಸರೆಯಾಗಿದ್ದ ಸರ್ಕಾರಿ ಆಸ್ಪತ್ರೆಗಳಲ್ಲಿ ಸಹ ಔಷಧ ಕೊರತೆ ಉಂಟಾದರೆ ಇನ್ನೂ ಹೆಚ್ಚು ಹಣ ಖರ್ಚು ಮಾಡಿ ಔಷಧಿ ಪಡೆಯುವುದು ಹೇಗೆ ಎಂದು ಯೋಚಿಸುತ್ತಿದ್ದಾರೆ. ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದೇನು? ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಡಿಸೆಂಬರ್ ನಂತರ ಔಷಧ ಕೊರತೆ ಇದೆ ಎಂದು ಹೇಳಬಾರದು. ಈ ನಿಟ್ಟಿನಲ್ಲಿ ಔಷದಿ ಕೊರತೆ ಸಮಸ್ಯೆ ಪರಿಹರಿಸಲು ಮುಂದಾಗಿದ್ದೇವೆ. ತ್ವರಿತ ಗತಿಯಲ್ಲಿ ಮಡಿಷಿನ್ ಪೂರೈಕೆ ಮಾಡುವಂತೆ ತಾಕೀತು ಮಾಡಲಾಗಿದೆ ಎಂದು ಸ್ವತಃ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇತ್ತೀಚೆಗೆ ಕಾರ್ಯಕ್ರಮದಲ್ಲಿ ಬೆಂಗಳೂರಿನಲ್ಲಿ ಹೇಳಿದ್ದರು.
ರಾಜ್ಯ ಔಷಧಿ ಪೂರೈಕೆ ಮಾಡುವ ಕಾರ್ಪೂರೇಷನ್ ಆಸ್ಪತ್ರೆಗಳಿಗೆ ಸರಿಯಾಗಿ ಔಷಧಿ ಸರಬರಾಜು ಆಗುತ್ತಿರಲಿಲ್ಲ. ನಮ್ಮ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಇದೆಲ್ಲ ಸಮಸ್ಯೆಗಳನ್ನು ಸರಿಪಡಿಸುತ್ತಿದ್ದೇವೆ ಎಂದು ತಿಳಿಸಿದ್ದರು. ಇದರ ಬೆನ್ನಲ್ಲೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ವಿಚಾರ ಮುನ್ನೆಲೆಗೆ ಬಂತು.