ಕಡಣಿ ಗ್ರಾಮದ 110/11 ಕೆವಿ ವಿದ್ಯುತ್ ಕೇಂದ್ರದ ಭೂಮಿ ಪೂಜೆ

ಆಲಮೇಲ :ಕಡಣಿ ಗ್ರಾಮದಲ್ಲಿ ್ಠ210 ಎಂವಿಎ, 110/11 ಕೆವಿ ವಿದ್ಯುತ್ ಉಪಕೇಂದ್ರ ಸ್ಥಾಪನೆಯ ಭೂಮಿ ಪೂಜೆಯನ್ನು ಶಾಸಕರಾದ ಅಶೋಕ ಮನಗೂಳಿ ಯವರು ತಮ್ಮ ಅಮೃತ ಹಸ್ತದಿಂದ ನೆರವೇರಿಸಿದರು.
ಇದೆ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರಸ್ತುತ ಕಡಣಿ ಸುತ್ತಮುತ್ತಲಿನ ಪ್ರದೇಶಗಳಾದ ದೇವಣಗಾಂವ, ಕುರುಬತಹಳ್ಳಿ, ಕಡಣಿ, ಬಮ್ಮನಹಳ್ಳಿ ಮುಂತಾದ ಗ್ರಾಮಗಳು 110/11 ಕೆವಿ ಆಲಮೇಲ ಮತ್ತು 110/11 ಕೆವಿ ದೇವಣಗಾಂವ ವಿದ್ಯುತ್ ಕೇಂದ್ರಗಳಿಂದ ಸರಬರಾಜುಗೊಳ್ಳುತ್ತಿವೆ. ಸದರಿ ವಿದ್ಯುತ್ ಉಪಕೇಂದ್ರಗಳು ಅಧಿಕ ವಿದ್ಯುತ್ ಭಾರವನ್ನು ಹೊಂದಿದ್ದರಿಂದ ಈ ಭಾಗಗಳಿಗೆ ಉತ್ತಮ ವಿದ್ಯುತ್ ಪೂರೈಕೆಯು ಸವಾಲಿನ ವಿಷಯವಾಗಿತ್ತು.
ಆದ್ದರಿಂದ ಕಡಣಿ ಗ್ರಾಮದಲ್ಲಿ 110/11ಕೆವಿ ವಿದ್ಯುತ್ ಉಪಕೇಂದ್ರದ ಸ್ಥಾಪನೆ ನಮ್ಮ ತಂದೆಯವರಾದ ದಿ. ಎಂ ಸಿ ಮನಗೂಳಿ ಯವರ ಕನಸಾಗಿತ್ತು. ಇಂದು ಆ ಕನಸು ಈಡೇರಿದೆ. ರೈತರು ಕೂಡಾ ಸಹಕರಿಸಿ ಭೂ ದಾನ ನೀಡಿದ ಚನ್ನವೀರಪ್ಪ ಕತ್ತಿ, ಮಹಾದೇವಿ ಕತ್ತಿ ರವರಿಗೆ ಧನ್ಯವಾದಗಳು.
ಕಡಣಿ ವಿದ್ಯುತ್ ವಿತರಣಾ ಉಪಕೇಂದ್ರ ಸ್ಥಾಪಿಸುವದರಿಂದ ಕಡಣಿ ಸುತ್ತ ಮುತ್ತಲಿನ ಎಲ್ಲಾ ಗ್ರಾಹಕರಿಗೂ ಪ್ರಮುಖವಾಗಿ ರೈತರ ಪಂಪಸೆಟ್ ಗಳಿಗೆ ಅತ್ಯಂತ ಉತ್ತಮ ಗುಣಮಟ್ಟದ ಹಾಗೂ ತಡೆರಹಿತ ವಿದ್ಯುತ್ ಪೂರೈಕೆಯಾಗುತ್ತದೆ.
ಇದೆ ಸಂದರ್ಭದಲ್ಲಿ ಕಾರ್ಯದಲ್ಲಿ ಕಡಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಸಲಿಂಗಪ್ಪ ಕತ್ತಿ ರವರು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದರು. ಭೂಮಿ ಪೂಜೆಯನ್ನು ಮಾನ್ಯ ಶಾಸಕರಾದ ಅಶೋಕ ಮನಗೂಳಿ ಯವರು ನೆರವೇರಿಸಿದರು. ಅಧಿಕಾರಿಗಳಾದ ಕೆ.ಜಿ ಹಿರೇಮಠ ಮುಖ್ಯ ಅಭಿಯಂತರರು, ಜಿ. ಕೆ ಗೊಟ್ಯಾಳ ಅಧೀಕ್ಷಕ ಅಭಿಯಂತರರು, ಎಸ್ ಎ ಬಿರಾದಾರ ಕಾರ್ಯನಿರ್ವಾಹಕ ಅಭಿಯಂತರರು, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಸಿ.ಡಿ ನಾಯಕ ಸೇರಿದಂತೆ ಸಿಂದಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ ಪೂಜಾರಿ, ಅರವಿಂದ ಹಂಗರಗಿ, ಶ್ರೀಗಿರಿ ಸಾಹುಕಾರ, ಸೇರಿದಂತೆ ಇತರರು ಉಪಸ್ಥಿತರಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *