ವಿಚ್ಛೇದನ ವದಂತಿ ಮಧ್ಯೆಯೇ ಐಶ್ವರ್ಯಾ ತಾಯಿ ಜೊತೆ ಅಭಿಷೇಕ್ ನಡೆದುಕೊಂಡದ್ದು ಹೀಗೆ ! ಪತ್ನಿ ಮಗಳ ಬಗ್ಗೆಯೂ ಹೊರ ಬಿತ್ತು ಕೆಲ ಮಾತು !
ಮುಂಬಯಿ : ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಬಾಲಿವುಡ್ ನಲ್ಲಿ ದೊಡ್ಡ ಹೆಸರು. ಆದರೆ ಇತ್ತೀಚಿನ ದಿನಗಳಲ್ಲಿ ಇವರಿಬ್ಬರ ವಿಚ್ಛೇದನದ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಐಶ್ವರ್ಯ ತನ್ನ ಬಚ್ಚನ್ ಪರಿವಾರ ಬಿಟ್ಟು ಹೊರ ನಡೆದಿದ್ದಾರೆ ಎನ್ನುವ ಬಗ್ಗೆಯೂ ಸುದ್ದಿ ಕೇಳಿ ಬಂದಿತ್ತು. ಇದರ ಮಧ್ಯೆಯೇ ಕೆಲವೊಂದು ಸಮಾರಂಭಗಳಲ್ಲಿ ದಂಪತಿ ಒಟ್ಟಾಗಿಯೇ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗೆ ಮಗಳು ಆರಾಧ್ಯಾಳ ಶಾಲೆಯ ಸಮಾರಂಭದಲ್ಲಿಯೂ ಐಶ್ವರ್ಯಾ ಮತ್ತು ಅಭಿಷೇಕ್ ಮಾತ್ರವಲ್ಲ ಇಡೀ ಬಚ್ಚನ್ ಕುಟುಂಬ ಮತ್ತು ಐಶ್ವರ್ಯಾ ತಾಯಿ ಕೂಡಾ ಕಾಣಿಸಿಕೊಂಡಿದ್ದರು.
ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ವಾರ್ಷಿಕ ಸಮಾರಂಭದಲ್ಲಿ ಆರಾಧ್ಯ ತಮ್ಮ ಪರ್ಫಾರ್ಮೆನ್ಸ್ ನೀಡಿದ್ದರು. ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಮತ್ತು ಅವರ ತಾಯಿ ವೃಂದಾ ರೈ ಈ ಈವೆಂಟ್‌ಗೆ ಆಗಮಿಸಿದ್ದರು.
ಈ ಸಮಾರಂಭದ ನಂತರ ಅಭಿಷೇಕ್ ಬಚ್ಚನ್ ತನ್ನ ಅತ್ತೆಯನ್ನು ಸುರಕ್ಷಿತವಾಗಿ ಕಾರಿನ ಬಳಿಗೆ ಕರೆದೊಯ್ಯುತ್ತಿರುವ ದೃಶ್ಯ ಕಂಡು ಬಂದಿದೆ. ಅಭಿಷೇಕ್ ತನ್ನ ಅತ್ತೆಯನ್ನು ಕೈ ಹಿಡಿದುಕೊಂಡು ಅವರನ್ನು ಕಾರಿನ ಬಳಿಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಐಶ್ವರ್ಯಾ ರೈ ಬಚ್ಚನ್ ಕೂಡಾ ಜೊತೆಯಲ್ಲಿಯೇ ಇದ್ದರು ಎನ್ನುವುದು ಗಮನಾರ್ಹ.
ಇನ್ನು ಇತ್ತೀಚಿನ ವರದಿಗಳ ಪ್ರಕಾರ, ಐಶ್ವರ್ಯಾ ರೈ ಬಚ್ಚನ್ ಪತಿಯೊಂದಿಗಿನ ಜೊತೆಗಿನ ವೈಷಮ್ಯದಿಂದಾಗಿ ಬಚ್ಚನ್ ಮನೆಯಿಂದ ಹೊರಬಂದಿದ್ದಾರೆ ಎನ್ನುವುದು. ಆದರೆ ಐಶ್ವರ್ಯಾ ಇನ್ನೂ ಬಚ್ಚನ್ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ ಎನ್ನುವುದು ಸತ್ಯ. ಅಮಿತಾಬ್ ಬಚ್ಚನ್ ಅವರ ಜಲ್ಸಾದ ಪಕ್ಕದ ಬಂಗಲೆಯಲ್ಲಿಯೇ ಐಶ್ವರ್ಯಾ ವಾಸಿಸುತ್ತಿದ್ದಾರೆ. ಈ ಎರಡೂ ಬಂಗಲೆಗಳು ಪರಸ್ಪರ ಆಂತರಿಕವಾಗಿ ಕನೆಕ್ಟ್ ಆಗಿವೆ.
ಈ ಮಧ್ಯೆ ಮಗಳು ಆರಾಧ್ಯ ನಟನೆಯ ಬಗ್ಗೆ ಮಾತನಾಡಿದ ಅಭಿಷೇಕ್, ಆರಾಧ್ಯಾಳ ಲಾಲನೆ ಪಾಲನೆಯಲ್ಲಿ ಐಶ್ವರ್ಯಾ ಪಾತ್ರ ಮಹತ್ವದ್ದು ಎಂದು ಹೇಳಿದ್ದಾರೆ. ಆರಾಧ್ಯ ಏನೇ ಆಗಿದ್ದರೂ ಅದರ ಸಂಪೂರ್ಣ ಕ್ರೆಡಿಟ್ ಐಶ್ವರ್ಯಾಗೆ ಸಲ್ಲಬೇಕು ಎಂದು ಹೇಳಿದ್ದಾರೆ. ಐಶ್ವರ್ಯಾ ಆರಾಧ್ಯಳ ಸಂಪೂರ್ಣ ಜವಾಬ್ದಾರಿಯನ್ನು ತೆಗದುಕೊಂಡು ನನಗೆ ಹೊರಗೆ ಹೋಗಲು ಚಲನಚಿತ್ರಗಳನ್ನು ಮಾಡಲು ಅವಕಾಶ ಸಿಗುವಂತೆ ಮಾಡಿದ್ದಾರೆ ಎಂದು ತಮ್ಮ ಪತ್ನಿಯನ್ನು ಕೊಂಡಾಡಿದ್ದಾರೆ ಜ್ಯೂನಿಯರ್ ಬಚ್ಚನ್.
ಇನ್ನು ಆರಾಧ್ಯ ಕೂಡಾ ಸಾಮಾನ್ಯ ಮಗು. ಅವಳು ಎಲ್ಲರಂತೆ ಶಾಲೆಗೆ ಹೋಗುತ್ತಾಳೆ, ಆಟವಾಡುತ್ತಾಳೆ, ತನ್ನ ಸ್ನೇಹಿತರೊಂದಿಗೆ ಮಾತುಕತೆ ನಡೆಸುತ್ತಾಳೆ. ನಾವು ಅವಳ ಮೇಲೆ ಯಾವುದೇ ಕೆಲಸಕ್ಕಾಗಿ ಒತ್ತಡ ಹೇರುವುದಿಲ್ಲ, ಬಲವಂತ ಮಾಡುವುದಿಲ್ಲ ಎಂದಿದ್ದಾರೆ.