ಹೊಸ ವರ್ಷಕ್ಕೂ ಮುನ್ನವೇ ಜನಸಾಮಾನ್ಯರಿಗೆ ಗಿಫ್ಟ್ : ಭಾರೀ ಅಗ್ಗವಾಯಿತು ಗ್ಯಾಸ್ ಸಿಲಿಂಡರ್ !
Commercial LPG Cylinder New Rates : ಹೊಸ ವರ್ಷದ ಮುನ್ನವೇ ಭಾರತೀಯರಿಗೆ ಉಡುಗೊರೆ ಸಿಕ್ಕಿದೆ. ಆಯಿಲ್ ಮಾರ್ಕೆಟಿಂಗ್ ಕಂಪನಿಯು ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಕಡಿಮೆ ಮಾಡಿದೆ. ಎಲ್‌ಪಿಜಿ ಸಿಲಿಂಡರ್‌ನ ಬೆಲೆಯಲ್ಲಿ 39 ರೂಪಾಯಿ ಇಳಿಕೆಯಾಗಿದೆ. ಕ್ರಿಸ್‌ಮಸ್ ಹಬ್ಬ ಮತ್ತು ಹೊಸ ವರ್ಷಾಚರಣೆಗೂ ಮುನ್ನವೇ ತೈಲ ಮಾರಾಟ ಸಂಸ್ಥೆ ದರ ಇಳಿಕೆಯ ಘೋಷಣೆ ಮಾಡಿದೆ.
ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆ :
ಕ್ರಿಸ್‌ಮಸ್ ಹಬ್ಬ ಮತ್ತು ಹೊಸ ವರ್ಷಾಚರಣೆಗೂ ಮುನ್ನವೇ ತೈಲ ಮಾರಾಟ ಸಂಸ್ಥೆ ಜನ ಸಾಮಾನ್ಯರಿಗೆ ಸಿಹಿ ಸುದ್ದಿ ನೀಡಿದೆ. ಹೌದು, 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯಲ್ಲಿ 39 ರೂಪಾಯಿ ಇಳಿಕೆಯಾಗಿದೆ. ಆದರೆ, ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎನ್ನುವುದು ಕೂಡಾ ಗಮನಾರ್ಹ.
ವಿವಿಧ ನಗರಗಳಲ್ಲಿ 19 ಕೆ.ಜಿ ಎಲ್.ಪಿ.ಜಿ ಸಿಲಿಂಡರ್ ಬೆಲೆ :
ದೆಹಲಿ – 1757.50 ರೂ.
ಕೋಲ್ಕತ್ತಾ – 1869 ರೂ.
ಮುಂಬೈ – 1710 ರೂ.
ಚೆನ್ನೈ – 1929.50 ರೂ.
ವಾಣಿಜ್ಯ LPG ಸಿಲಿಂಡರ್ ಬೆಲೆಯಲ್ಲಿ ಬದಲಾವಣೆ :
ಈ ಹಿಂದೆ ಡಿಸೆಂಬರ್ 1 ರಂದು 19 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಬದಲಾಯಿಸಲಾಗಿತ್ತು. ಆಗ ಸಿಲಿಂಡರ್ ಬೆಲೆಯನ್ನು 21 ರೂ. ಹೆಚ್ಚಿಸಲಾಗಿತ್ತು. ಆದರೆ, ಅದಕ್ಕೂ ಮುನ್ನ ನವೆಂಬರ್ 16 ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 57 ರೂಪಾಯಿ ಕಡಿತಗೊಳಿಸಲಾಗಿತ್ತು. ಕೆಲವು ಸಮಯದಿಂದ, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಬಹುತೇಕ ಪ್ರತಿ ತಿಂಗಳು ಬದಲಾವಣೆ ಕಂಡುಬರುತ್ತಿದೆ. ಸಿಲಿಂಡರ್ ದರವನ್ನು ಪದೇ ಪದೇ ಪರಿಷ್ಕರಿಸಲಾಗುತ್ತಿದೆ.
ಗೃಹಬಳಕೆಯ ಸಿಲಿಂಡರ್ ಬೆಲೆ ಬದಲಾಗಿದೆಯೇ? :
ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ದರವನ್ನು ನೋಡುವುದಾದರೆ ಆಗಸ್ಟ್ ತಿಂಗಳಿನಿಂದ ಅದರ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕೊನೆಯ ಬಾರಿಗೆ ಆಗಸ್ಟ್ 30, 2023 ರಂದು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 200 ರೂ.ಗಳಷ್ಟು ಕಡಿಮೆ ಮಾಡಲಾಗಿತ್ತು. ಇಂಡಿಯನ್ ಆಯಿಲ್‌ನ ವೆಬ್‌ಸೈಟ್ ಪ್ರಕಾರ, ದೇಶೀಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ದೆಹಲಿಯಲ್ಲಿ 903 ರೂ. ಕೋಲ್ಕತ್ತಾದಲ್ಲಿ 929 ರೂ. ಮತ್ತು ಮುಂಬೈನಲ್ಲಿ 902.50 ರೂಪಾಯಿ ಆಗಿದೆ.