ಎಂಇಎಸ್‌ನವರನ್ನು ಒದ್ದು ಹೊರಗೆ ಹಾಕಿ: ವಾಟಾಳ್ ‌ನಾಗರಾಜ್

ಬೆಳಗಾವಿ
ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ವಿವಾದದ ಶಾಂತಿ ಸಭೆ ನಿರ್ಣಯಕ್ಕೆ ವಾಟಾಳ್ ವಿರೋಧ ವ್ಯೆಕ್ತಪಡಿಸಿದ್ದಾರೆ. ರಾಯಣ್ಣ ಪ್ರತಿಮೆ ಜಾಗದಲ್ಲಿ ಶಿವಾಜಿ ಸರ್ಕಲ್ ಅಂತಾ ಯಾವನೂ ಪೊಲೀಸ್ ಆಫೀಸರ್ ರಾಜಿ ಮಾಡಿದ್ದು, ಮರಾಠಿಯವರಿಗೆ ಕರ್ನಾಟಕ ಅರ್ಧಬರೆದುಕೊಟ್ಟಿದ್ದೇರಿ ಏನ್ರಿ, ಎಂಇಎಸ್ ನವರನ್ನು ಒದ್ದು ಹೊರಗೆ ಹಾಕಿ ಎಂದು ಹಿರಿಯ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ತಮ್ಮದೆ ಶೈಲಿಯಲ್ಲಿ ಚಾಟಿ ಬಿಸಿದ್ದಾರೆ.


ಶನಿವಾರ ಹಿರೇಬಾಗೇವಾಡಿ ಟೋಲ್ ನಾಕಾ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಯಣ್ಣ ಪ್ರತಿಮೆ ಇರೋ ಜಾಗದಲ್ಲಿ ಶಿವಾಜಿ ಸರ್ಕಲ್ ನಾವು ಒಪ್ಪಲ್ಲ, ಆಗಸ್ಟ್ ೩೧ರಂದು ಬೆಂಗಳೂರಿನ ವಿಧಾನಸೌಧಕ್ಕೆ ಮುತ್ತಿಗೆ ಹಾಕ್ತೀವಿ, ಇದಕ್ಕೂ ಬಗ್ಗದಿದ್ದರೇ ಕರ್ನಾಟಕ ಬಂದ್‌ಗೆ ಕರೆ ನೀಡ್ತೀವಿ, ಬೆಳಗಾವಿ ನಮ್ಮದು, ಮರಾಠಿಗರದ್ದು ಶಿವಸೇನೆಯರದ್ದಲ್ಲ,ಬಿ.ಎಸ್.ಯಡಿಯೂರಪ್ಪ ಎಚ್ಚರ ಎಚ್ಚರ ಎಂದ ವಾಟಾಳ್ ನಾಗರಾಜ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಎಂಇಎಸ್ ನವರನ್ನು ಇರಿಸಲು ಬೆಳಗಾವಿ ಜೈಲಿನಲ್ಲಿ ಜಾಗ ಇಲ್ಲ ಅಂದ್ರೆ ಬೆಂಗಳೂರು ಜೈಲಿಗೆ ಕಳಿಸಿ, ಬಾಳಾ ಠಾಕ್ರೆಗೆ ಕೂಗಿ ಕೂಗಿ ಸಾಕಾಯ್ತು ಈಗ ಉದ್ಧವ್ ಠಾಕ್ರೆ ಕೂಗುತ್ತಿದ್ದಾನೆ,ಯಡಿಯೂರಪ್ಪ ನವರೇ ನಿಮಗೆ ನಾಲಿಗೆ ಇಲ್ವಾ, ಮರಾಠಿಗರ ವೋಟ್‌ಗಾಗಿ ಕನ್ನಡಿಗರನ್ನು ತುಳೀತಿದ್ದಾರೆ, ಪ್ರಾಣ ಹೋದರೂ ಶಿವಾಜಿ ಸರ್ಕಲ್ ಮಾಡೋದಕ್ಕೆ ಬಿಡೋದಿಲ್ಲ, ಇನ್ನೂ ಹದಿನೈದು ದಿವಸದಲ್ಲಿ ನಾನು ಬೆಳಗಾವಿ ನಗರಕ್ಕೆ ಎಂಟ್ರಿ ಕೊಡ್ತೀನಿ ಎಂದು ವಾಟಾಳ್ ಗುಡುಗಿದರು.
ಅಂಗಡಿಯಿAದ ಹಿಡಿದು ಮುಂಗಟ್ಟುವರೆಗೂ ಎಲ್ಲರದ್ದು ಇದೇ ಪರಿಸ್ಥಿತಿ, ಎಲ್ಲರೂ ಮರಾಠಾ ಏಜೆಂಟರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆಸಲು ಆಗ್ರಹ ಪಡಿಸಿದರು. ಯಾವ ಉದ್ದೇಶಕ್ಕಾಗಿ ಸುವರ್ಣಸೌಧ ನಿರ್ಮಾಣ ಆಯ್ತು ಆ ಉದ್ದೇಶ ಈಡೇರಲಿಲ್ಲ,
ಎರಡು ವರ್ಷಗಳಿಂದ ಸುವರ್ಣಸೌಧದಲ್ಲಿ ಅಧಿವೇಶನ ನಡೆದಿಲ್ಲ. ಉತ್ತರ ಕರ್ನಾಟಕ ಬಗ್ಗೆ ಪ್ರಾಮಾಣಿಕ ಚಿಂತನೆ ಇದ್ದರೆ ಬೆಂಗಳೂರಲ್ಲಿ ಅಧಿವೇಶನ ನಡೆಸಬೇಡಿ, ಬೆಂಗಳೂರು ಬಿಟ್ಟು ಸುವರ್ಣಸೌಧದಲ್ಲಿ ಅಧಿವೇಶನ ನಡೆಸಿ, ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಬಗ್ಗೆ ಚರ್ಚೆ ಮಾಡಬಹುದು, ಔರಾದ್ಕರ್ ವರದಿ ಜಾರಿಗೆ ಸಮಗ್ರವಾಗಿ ಚರ್ಚಿಸುವಂತೆ ವಾಟಾಳ್ ಒತ್ತಾಯಿಸಿದರು.
ಈಗಾಗಲೇ ಬಿಡಿಎ ಮಾರಿದ್ದೀರಿ.. ಇನ್ನೊಂದು ವರ್ಷ ಕಳೆದ್ರೆ ಸುವರ್ಣಸೌಧ ಮಾರಿ ಬಿಡ್ತೀರಿ, ಒಳ್ಳೆಯ ದುಡ್ಡು ಬರುತ್ತೆ ಹಂಚುಕೊಳ್ಳಬಹುದು ಅಲ್ವೇ? ಎಂದು ಪ್ರಶ್ನೆ ಮಾಡಿದ ಅವರುಈ ಸುವರ್ಣಸೌಧ ಮಾರಿದ ಮೇಲೆ ಬೆಂಗಳೂರಿನ ವಿಧಾನಸೌಧ ಮಾರಿ. ಅಲ್ಲೇ ಕಬ್ಬನ್ ಪಾರ್ಕ್ ಇದೆ ಅಲ್ಲಿ ಕುಳಿತುಕೊಳ್ಳಿ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಸುವರ್ಣಸೌಧ ಗಡಿನಾಡಿನ ಗೌರವ ಇಲ್ಲಿ ಅಧಿವೇಶನ ನಡೆಸಬೇಕು,ರೇಲ್ವೆ ಮಂತ್ರಿಯಾಗಿದ್ದೀರಿ ಅಧಿವೇಶನ ನಡೆಸಿ ಇಲ್ಲಾ ರಾಜೀನಾಮೆ ಕೊಡಿ, ಮಂತ್ರಿಗಾಗಿ ಕಿತ್ತಾಟ ಮಾಡ್ತಾರೆ ಆದರೆ ಅಧಿವೇಶನ ಮಾಡಲ್ಲ,ಬೆಳಗಾವಿಯ ಎಂಎಲ್ ಎಗಳು ಕಾಲು ಕಸ, ಎಂಪಿಗಳು ಕೆಟ್ಟ ಮೋರಿ, ಪೊಲೀಸ್ ನಾಯಿಗಳಿಗಿಂತಲೂ ಕಡೇ, ಕನ್ನಡ ದ್ರೋಹಿಗಳು, ಪಾಪಿಗಳು ಇವರು,ಎಂದು ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಟೋಲ್ ನಾಕಾ ಬಳಿ ವಾಟಾಳ್ ನಾಗರಾಜ್ ಹೇಳಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *