UI First Look Teaser: ಕಲ್ಕಿ ಅವತಾರದಲ್ಲಿ ಉಪ್ಪಿ..! ಫ್ಯಾನ್ಸ್ಗೆ ಹಾಲಿವುಡ್ ಲೆವೆಲ್ ಗಿಫ್ಟ್ ಕೊಟ್ಟ ರಿಯಲ್ ಸ್ಟಾರ್
UI The Movie: ಭರವಸೆಯ ನಾಯಕ ಉಪೇಂದ್ರ ಪ್ರತಿ ಬಾರಿಯೂ ವಿಭಿನ್ನವಾಗಿಯೇ ತೆರೆ ಮೇಲೆ ಕಾಣಿಸಿಕೊಳ್ಳುತ್ತಾರೆ.. ಸದ್ಯ UI ಎಂಬ ಹೆಸರಿನ ಕೂತುಹಲಕಾರಿ ಸಿನಿಮಾ ತಯಾರಿಯಲ್ಲಿದ್ದಾರೆ.. ಈ ಚಿತ್ರ ಬರೋಬ್ಬರಿ 100 ಕೋಟಿ ಬಜೆಟ್ನಲ್ಲಿ ರೆಡಿಯಾಗುತ್ತಿದ್ದು.. ಅತಿವಾಸ್ತವಿಕವಾಗಿರುವ ದೃಶ್ಯಗಳನ್ನು ಅಭಿಮಾನಿಗಳ ಮುಂದೆ ತರುತ್ತಿದ್ದಾರೆ..
ಈ ಚಿತ್ರದಲ್ಲಿ ಉಪೇಂದ್ರ ಗಮನಾರ್ಹ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ರೀಷ್ಮಾ ನಾನಯ್ಯ ಚಿತ್ರದ ನಾಯಕಿಯಾಗಿ ನಟಿಸಲಿದ್ದಾರೆ. ಬಾಲಿವುಡ್ ನಟಿ ಸನ್ನಿ ಲಿಯೋನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಈ ಹಿಂದೆ ಉಪೇಂದ್ರ ಅವರ ಫಸ್ಟ್ ಲುಕ್ ಬಿಡುಗಡೆಯಾದಾಗ ಈ ಚಿತ್ರದ UI ನ ಟೀಸರ್ ಜನವರಿ 8 ರಂದು ಅಧಿಕೃತವಾಗಿ ಹೊರಬೀಳಲಿದೆ ಎನ್ನಲಾಗಿತ್ತು.. ಅದರಂತೆಯೇ ಇದೀಗ ದಿ ವೆಯ್ಟ್ ಈಸ್ ಓವರ್.. ಬರೋಬ್ಬರಿ ಎಂಟು ವರ್ಷಗಳ ನಂತ್ರ ಉಪೇಂದ್ರ ನಟಿಸಿ, ನಿರ್ದೇಶಿಸಿರೋ ಯುಐ ಸಿನಿಮಾದ ಟೀಸರ್ ಇಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ರಿಲೀಸ್ ಆಗಿದೆ. ನಟ ಶಿವರಾಜ್ ಕುಮಾರ್ ಹಾಗೂ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ರ ತಂದೆ ಅಲ್ಲು ಅರವಿಂದ್ UI ಟೀಸರ್ ನ ಲಾಂಚ್ ಮಾಡಿದರು. ಮತ್ತೊಂದು ವಿಶೇಷತೆಯೆಂದರೇ 8 ಭಾಷೆಗಳಲ್ಲಿ UI ಸಿನಿಮಾ ರಿಲೀಸ್ ಆಗುತ್ತಿದೆ..
ಪ್ರಿಯಾಂಕಾ ಉಪೇಂದ್ರ, ರೀಷ್ಮಾ ನಾಣಯ್ಯ, ನಿಧಿ ಸುಬ್ಬಯ್ಯ ಸೇರಿದಂತೆ ಚಿತ್ರರಂಗದ ಸಾಕಷ್ಟು ಕಲಾವಿದರು, ತಂತ್ರಜ್ಞರು ಭಾಗಿಯಾಗಿ ಯುಐ ಟೀಂಗೆ ಶುಭ ಹಾರೈಸಿದರು. ಹಾಲಿವುಡ್ ಶೈಲಿಯ ಯುಐ ಟೀಸರ್ ಮೇಕಿಂಗ್ ನೆಕ್ಸ್ಟ್ ಲೆವೆಲ್ ಗಿದ್ದು, ಕಲಿಯುಗದ ಕಥೆಯನ್ನ ಹೇಳಲು ಉಪ್ಪಿ ಕೊಂಬಿರೋ ಕುದುರೆ ಏರಿ ಬರ್ತಿದ್ದಾರೆ. ಯುಐ ಪ್ಯಾನ್ ಇಂಡಿಯಾ ಮೂವಿ ಆಗಿದ್ದು, ಶಿವಣ್ಣ, ಅಲ್ಲು ಅರವಿಂದ್ ಸಮೇತ ಎಲ್ಲರೂ ಉಪ್ಪಿಯನ್ನ ಕೊಂಡಾಡಿದರು..
ಸದ್ಯ ಈ UI ಟೀಸರ್ ನೋಡಿದ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.. “ಏನ್ರೀ ಇದು ಟೀಸರ್ ಈ ಲೆವೆಲ್ಲಿಗೆ ಕಿಕ್ ಅಂತ ಮಾತಾಡುತ್ತಿದ್ದಾರೆ.. ನಿಜಕ್ಕೂ ಹಾಲಿವುಡ್ ರೇಂಜ್ ಗೆ ಸಿದ್ದವಾಗಿದೆ ಸಿನಿಮಾ ಅನ್ನೋದಕ್ಕೆ ಟೀಸರ್ ಸಾಕ್ಷಿ ಯಾಗುತ್ತಿದೆ .. ಉಪ್ಪಿ ಲುಕ್ ಮಾತ್ರ ಮಾಸ್ ಆಗಿದೆ ಕಣ್ಣುಗಳಲ್ಲೇ ಉಪ್ಪಿ ಮಾತನಾಡಿದ್ದಾರೆ.. ui ಸಿನಿಮಾ ಇಡೀ ವಿಶ್ವವೇ ತಿರುಗಿ ನೋಡುವ ಹಾಗೆ ಖಂಡಿತ ಮಾಡುತ್ತೆ” ಎಂದು ಸಿನಿಮಾ ಪ್ರಿಯರು ಮಾತನಾಡಕೊಳ್ಳುತ್ತಿದ್ದಾರೆ.. ಇದಲ್ಲದೇ ಟೀಸರ್ ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಲಕ್ಷಲಕ್ಷ ವ್ಯೂ ಪಡೆದುಕೊಂಡಿದೆ..
UI ಚಿತ್ರ ಪಾತ್ರವರ್ಗ:
ಉಪೇಂದ್ರ ಜೊತೆಗೆ ರೀಷ್ಮಾ ನಾಣಯ್ಯ, ಸನ್ನಿ ಲಿಯೋನ್, ಮುರಳಿ ಶರ್ಮಾ, ಇಂದ್ರಜಿತ್ ಲಂಕೇಶ್, ನಿಧಿ ಸುಬ್ಬಯ್ಯ, ಓಂ ಸಾಯಿ ಪ್ರಕಾಶ್, ನೀತು ವನಜಾಕ್ಷಿ, ಮುರಳಿ ಕೃಷ್ಣ, ಜಿರಳೆ ಸುಧಿ, ಪ್ರಶಾಂತ್ ಸಂಬರ್ಗಿ ಮತ್ತು ಪವನ್ ಆಚಾರ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ..