ಮಾರುಕಟ್ಟೆಯಲ್ಲಿರುವ ಅತ್ಯಂತ ಅಗ್ಗದ Electric Carಗಳಿವು! ಬೆಲೆ 8 ಲಕ್ಷಕ್ಕಿಂತಲೂ ಕಡಿಮೆ

Affordable Electric Cars In India: ಭಾರತೀಯ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯು ವೇಗವಾಗಿ ವಿಸ್ತರಿಸುತ್ತಿದೆ. 2024 ರ ಆರಂಭದಿಂದಲೇ ಹೊಸ ಮಾಡೆಲ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ.ಟಾಟಾ ಪಂಚ್‌ನ ಎಲೆಕ್ಟ್ರಿಕ್ ಆವೃತ್ತಿಯು ಜನವರಿ 17 ರಂದು ಅಂದರೆ ನಾಳೆ ಬಿಡುಗಡೆಯಾಗಲಿದೆ. ಇದು ಕೈಗೆಟುಕುವ EV ಆಗಿರಲಿದೆ. ಇದೀಗ ಈ ಹೊಸ ಕಾರು ಬಿಡುಗಡೆಗೂ ಮುನ್ನ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ಒಳ್ಳೆಯ  ಮತ್ತು ಅಗ್ಗದ ಎಲೆಕ್ಟ್ರಿಕ್ ಕಾರುಗಳ ಮಾಹಿತಿ ಇಲ್ಲಿದೆ.

MG Comet EV : 
ಎಂ ಜಿ ಕಳೆದ ವರ್ಷ ತ್ರೀ ಡೋರ್ ಕಾಮೆಟ್ EVಯನ್ನು ಬಿಡುಗಡೆ ಮಾಡಿತು. ಕಂಪನಿಯ ಪೋರ್ಟ್‌ಫೋಲಿಯೊದಲ್ಲಿ ಇದು ಎರಡನೇ EV ಆಗಿದೆ. ಮೈಕ್ರೋ ಎಲೆಕ್ಟ್ರಿಕ್ ಹ್ಯಾಚ್ 17.3 kWh ಬ್ಯಾಟರಿಯನ್ನು ಹೊಂದಿದೆ. ARAI ಪ್ರಕಾರ, ಕಾಮೆಟ್ ಪೂರ್ಣ ಚಾರ್ಜ್‌ನಲ್ಲಿ 230 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ.ಇದು 3.3 kW ಚಾರ್ಜರ್ ಅನ್ನು  ಸಪೋರ್ಟ್ ಮಾಡುತ್ತದೆ. ಇದರ ಬೆಲೆ 7.98 ಲಕ್ಷದಿಂದ 9.98 ಲಕ್ಷದವರೆಗೆ ಇರುತ್ತದೆ.

ಟಾಟಾ ಟಿಯಾಗೊ ಇವಿ :
ಟಾಟಾ ಟಿಯಾಗೊ  19.2 kWh ಮತ್ತು 24 kWh ಹೀಗೆ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ.MIDC ಸೈಕಲ್ ಪ್ರಕಾರ, 19.2 kWh ಆವೃತ್ತಿಯು 250 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ ಮತ್ತು 24 kWh ಆವೃತ್ತಿಯು 350 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. ಇದರ ಬೆಲೆ 8.69 ಲಕ್ಷದಿಂದ 12.04 ಲಕ್ಷ ರೂ.

ಸಿಟ್ರೊಯೆನ್ eC3 : 
ಸಿಟ್ರೊಯೆನ್ ಕಳೆದ ವರ್ಷ ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು eC3 ರೂಪದಲ್ಲಿ ಬಿಡುಗಡೆ ಮಾಡಿತು. ಕ್ರಾಸ್ಒವರ್ ಹ್ಯಾಚ್ 76 bhp ಮತ್ತು 143 Nm ಟಾರ್ಕ್ ಅನ್ನು ಜನರೆಟ್ ಮಾಡುತ್ತದೆ. ಇದು 29.2 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. eC3 ನ ಗರಿಷ್ಠ ವೇಗ ಗಂಟೆಗೆ 107 ಕಿ.ಮೀ. ಇದರ  ಕ್ಲೈಮ್ ರೇಂಜ್ 320 ಕಿ.ಮೀ (MIDC ಸೈಕಲ್) ಆಗಿದೆ. ಇದರ ಬೆಲೆ 11.61–12.49 ಲಕ್ಷ ರೂ.

ಟಾಟಾ ಟಿಗೋರ್ ಇವಿ : 
Tigor EV ಅತ್ಯಂತ ಪಾಕೆಟ್ ಸ್ನೇಹಿ EV ಸೆಡಾನ್ ಆಗಿದೆ. ಟಾಟಾ ಮೋಟಾರ್ಸ್ ಪ್ರಕಾರ, ಇದು 0-60 kmph ನಿಂದ 5.7 ಸೆಕೆಂಡುಗಳಲ್ಲಿ ವೇಗವನ್ನು ಪಡೆಯುತ್ತದೆ. EV ಸೆಡಾನ್ 315 ಕಿಮೀ ವ್ಯಾಪ್ತಿಯನ್ನು ಹೊಂದಿದೆ. ಇದು 26 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಇದರ ಬೆಲೆ 12.49 ಲಕ್ಷದಿಂದ 13.75 ಲಕ್ಷ ರೂ. ಆಗಿದೆ.

ಟಾಟಾ ನೆಕ್ಸನ್ ಇವಿ : 
Nexon EV ಎರಡು ಟ್ರಿಮ್‌ಗಳಲ್ಲಿ ಬರುತ್ತದೆ. ಮಿಡ್ ರೇಂಜ್ (MR) ಮತ್ತು ಲಾಂಗ್ ರೇಂಜ್ (LR). MR ಆವೃತ್ತಿಯು 30kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಇದು 325 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. ಆದರೆ, LR 40.5kWh ಬ್ಯಾಟರಿಯನ್ನು ಹೊಂದಿದ್ದು, 465 ಕಿಮೀ ರೇಂಜ್ ನೀಡುತ್ತದೆ. ಇದರ ಬೆಲೆ 14.74 ಲಕ್ಷದಿಂದ 19.94 ಲಕ್ಷ ರೂ.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *