*ಮಾರುಕಟ್ಟೆಯಲ್ಲಿರುವ ಅತ್ಯಂತ ಅಗ್ಗದ Electric Carಗಳಿವು! ಬೆಲೆ 8 ಲಕ್ಷಕ್ಕಿಂತಲೂ ಕಡಿಮೆ* https://kknewskannada.com/10734/

ಅಯೋಧ್ಯೆ ನಗರದಲ್ಲಿ (Ayodhya) ರಾಮ ಲಲ್ಲಾ ಪ್ರತಿಷ್ಠಾಪನೆ ಕಾರ್ಯಕ್ರಮಗಳು ಆರಂಭವಾಗಿದೆ. ಇಂದಿನಿಂದ ಪೂಜೆಯ ವಿಧಿ-ವಿಧಾನಗಳು ಆರಂಭವಾಗಲಿದ್ದು, ಸುಮಾರು 7 ದಿನ ವಿಶೇಷ ಕಾರ್ಯಕ್ರಮಗಳನ್ನ ಮಾಡಲಾಗುತ್ತದೆ. ಅಯೋಧ್ಯೆಯಲ್ಲಿ ಜನವರಿ 22 ರವರೆಗೆ ಜಪ ಮತ್ತು ಮಂತ್ರಗಳದ್ದೇ ಕಾರುಬಾರು ಎನ್ನಬಹುದು. ರಾಮಮಂದಿರ (Ram Mandir) ಸಮಾರಂಭವು ಮೊದಲು ಪ್ರಾಯಶ್ಚಿತ್ತ ಪೂಜೆಯೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಇದರೊಂದಿಗೆ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮವು ಔಪಚಾರಿಕವಾಗಿ ಪ್ರಾರಂಭವಾಗುತ್ತದೆ. ಇಂದು ಅಂದರೆ ಮಂಗಳವಾರ ಬೆಳಗ್ಗೆ 9:30ರಿಂದ ಪ್ರಾಯಶ್ಚಿತ್ತ ಪೂಜೆ ಆರಂಭವಾಗಿದ್ದು, ಸುಮಾರು 5 ಗಂಟೆಗಳ ಕಾಲ ನಡೆಯಲಿದೆ. 121 ಬ್ರಾಹ್ಮಣರು ಈ ಪ್ರಾಯಶ್ಚಿತ್ತ ಪೂಜೆಯನ್ನು ಮಾಡುತ್ತಾರೆ. ಈ ಪ್ರಾಯಶ್ಚಿತ್ತ ಪೂಜೆ ಎಂದರೇನು? ರಾಮಮಂದಿರದ ಆಚರಣೆಯಲ್ಲಿ ಎಷ್ಟು ನಿಯಮಗಳಿವೆ ಎಂಬುದು ಇಲ್ಲಿದೆ.

ಪ್ರಾಯಶ್ಚಿತಾ ಪೂಜೆ ಎಂದರೇನು?
ಇಂದು ನಡೆಯುವ ಪ್ರಾಯಶ್ಚಿತ್ತ ಪೂಜೆಯು ಒಂದು ವಿಭಿನ್ನ ವಿಧಾನವಾಗಿದ್ದು, ಇದು ಇದರಲ್ಲಿ ಪ್ರಾಯಶ್ಚಿತ್ತವನ್ನು ದೈಹಿಕ, ಆಂತರಿಕ, ಮಾನಸಿಕ ಮತ್ತು ಬಾಹ್ಯ ಮೂರು ವಿಧಾನಗಳಲ್ಲಿ ಮಾಡಲಾಗುತ್ತದೆ. ಪಂಡಿತರ ಪ್ರಕಾರ, ಬಾಹ್ಯ ಪ್ರಾಯಶ್ಚಿತ್ತಕ್ಕಾಗಿ ಸ್ನಾನದ 10 ವಿಧಾನಗಳನ್ನು ನಡೆಸಲಾಗುತ್ತದೆ. ಇದರಲ್ಲಿ ಪಂಚ ದ್ರವ್ಯವಲ್ಲದೆ ಬೂದಿ ಸೇರಿದಂತೆ ಹಲವು ಔಷಧೀಯ ವಸ್ತುಗಳನ್ನ ಬಳಸಿ ಸ್ನಾನ ಮಾಡಲಾಗುತ್ತದೆ.

ಇದಿಷ್ಟೇ ಅಲ್ಲದೇ, ಇನ್ನೊಂದು ಪ್ರಾಯಶ್ಚಿತ್ತ ದಾನ ಮತ್ತು ನಿರ್ಣಯವನ್ನೂ ಮಾಡಲಾಗುತ್ತದೆ. ಇದರಲ್ಲಿ ಆತಿಥೇಯರು ಗೋದಾನದ ಮೂಲಕ ಪ್ರಾಯಶ್ಚಿತ್ತ ಮಾಡುತ್ತಾರೆ. ಸ್ವಲ್ಪ ಹಣವನ್ನು ದಾನ ಮಾಡುವ ಮೂಲಕ ಪ್ರಾಯಶ್ಚಿತ್ತವನ್ನು ಪಡೆಯಲಾಗುತ್ತದೆ.

ಪ್ರಾಯಶ್ಚಿತ್ತ ಪೂಜೆ ಎಂದರೆ ಸಂಪೂರ್ಣವಾಗಿ ಸ್ವಚ್ಛ ಮಾಡುವುದು ಎಂದು ಎನ್ನಬಹುದು. ಈ ದಿನ ಇಲ್ಲಿ ವಿಗ್ರಹ ಮತ್ತು ದೇವಾಲಯವನ್ನು ಮಾಡಲು ಬಳಸುವ ಉಳಿ ಮತ್ತು ಸುತ್ತಿಗೆಯನ್ನು ಸಹ ಪ್ರಾಯಶ್ಚಿತ್ತ ಮಾಡಲಾಗುತ್ತದೆ. ಈ ದಿನ ತಿಳಿದೋ ತಿಳಿಯದೆಯೋ ಮಾಡಿದ ಪಾಪಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುವುದು ಈ ಪೂಜೆಯ ಹಿಂದಿನ ಅರ್ಥ ಎನ್ನಬಹುದು. ನಾವು ನಮ್ಮ ಜೀವನದಲ್ಲಿ ಅನೇಕ ರೀತಿಯ ತಪ್ಪುಗಳನ್ನು ಮಾಡುತ್ತೇವೆ, ಅದು ನಮಗೆ ತಿಳಿದಿರುವುದಿಲ್ಲ, ಆದ್ದರಿಂದ ಶುದ್ಧೀಕರಣ ಬಹಳ ಮುಖ್ಯ.

ಈ ಪೂಜೆಯನ್ನು ಯಾರು ಮಾಡುತ್ತಾರೆ?
ಹಿಂದೂ ಧರ್ಮದಲ್ಲಿ, ಯಾವುದೇ ಮಂಗಳಕರ ಅಥವಾ ಶುಭ ಕಾರ್ಯವನ್ನು ಮಾಡಲು ಕೆಲ ನೀತಿ ನಿಯಮಗಳನ್ನ ಅನುಸರಿಸಲಾಗುತ್ತದೆ. ಯಾವುದೇ ಆಚರಣೆ ಅಥವಾ ಯಾಗ ಅಥವಾ ಪೂಜೆಯಲ್ಲಿ ಆತಿಥೇಯರು ಮಾತ್ರ ಕುಳಿತುಕೊಳ್ಳುತ್ತಾರೆ. ಅದಕ್ಕಾಗಿಯೇ ಆತಿಥೇಯರು ಪ್ರಾಯಶ್ಚಿತ್ತ ಪೂಜೆಯನ್ನು ಮಾಡಬೇಕು.

ಧಾರ್ಮಿಕ ಆಚರಣೆಗಳಲ್ಲಿ ಎಷ್ಟು ನಿಯಮಗಳಿದೆ?
ಯಾವುದೇ ಶುಭ ಅಥವಾ ಧಾರ್ಮಿಕ ಕಾರ್ಯಗಳನ್ನ ಮಾಡುವಾಗ ಮುಖ್ಯವಾಗಿ 12 ನಿಯಮಗಳನ್ನ ಪಾಲಿಸಬೇಕು. ಆ ನಿಯಮಗಳೇನು ಎಂಬುದು ಇಲ್ಲಿದೆ.

1. ನೆಲದ ಮೇಲೆ ಮಲಗುವುದು
2. ಬ್ರಹ್ಮಚರ್ಯವನ್ನು ಪಾಲಿಸಬೇಕು
3. ಮೌನ ವ್ರತ
4. ಗುರುಗಳ ಸೇವೆ
5. ದಿನಕ್ಕೆ ಮೂರು ಬಾರಿ ಸ್ನಾನ ಮಾಡುವುದು.
6. ಪಾಪ ಮಾಡಬಾರದು
7. ಪಥ್ಯಗಳನ್ನ ಮಾಡಬೇಕು
8. ಪ್ರತಿನಿತ್ಯ ದಾನ ಮಾಡಬೇಕು
9. ಆತ್ಮಾಧ್ಯಯನ
10. ನಿತ್ಯ ಪೂಜೆ ಮಾಡಬೇಕು.
11. ಗುರುವಿನ ಮೇಲೆ ನಂಬಿಕೆ
12. ದೇವರ ನಾಮಸ್ಮರಣೆ

ಪ್ರಾಣ ಪ್ರತಿಷ್ಠಾಪನೆ ಯಾವಾಗ?
ಜನವರಿ 22 ರಂದು ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ಉದ್ಘಾಟನೆ ಮಾತ್ರವಲ್ಲ, ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಕೂಡ ಉಪಸ್ಥಿತರಿರುತ್ತಾರೆ. ರಾಮಮಂದಿರ ಕಾರ್ಯಕ್ರಮಕ್ಕೆ ವಿರೋಧ ಪಕ್ಷದ ಹಲವು ನಾಯಕರು ಹಾಗೂ ಬಾಲಿವುಡ್ ತಾರೆಯರನ್ನು ಆಹ್ವಾನಿಸಲಾಗಿದೆ.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *