ರಾಮ ಮಂದಿರ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿಲ್ಲ: ಸಿಎಂ ಯೋಗಿ ಆದಿತ್ಯನಾಥ್

ಲಖನೌ: ರಾಮಜನ್ಮಭೂಮಿ ಹೋರಾಟದಿಂದ ಸನ್ಯಾಸಿಯಾದೆ ಎಂದು ಹೇಳಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಜನವರಿ 22 ರಂದು ನಡೆಯಲಿರುವ ಶ್ರೀರಾಮ ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ರಾಜಕೀಯವಾಗಿ ಲಾಭ ಮಾಡಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪವನ್ನು ಬುಧವಾರ ತಳ್ಳಿ ಹಾಕಿದ್ದಾರೆ.

ಮೊದಲಿನಿಂದಲೂ ರಾಮ ಮಂದಿರ ಹೋರಾಟದಲ್ಲಿ ಸಂಬಂಧ ಹೊಂದಿದ್ದೇನೆ. ವಾಸ್ತವವಾಗಿ, ರಾಮಜನ್ಮಭೂಮಿ ಹೋರಾಟದಿಂದ ನಾನು ಸನ್ಯಾಸಿಯಾದೆ. ಆದರೆ, ರಾಮನ ಪ್ರಾಣ ಪ್ರತಿಷ್ಠಾ ಸಮಾರಂಭದಿಂದ ಯಾವುದೇ ಕ್ರೆಡಿಟ್ ತೆಗೆದುಕೊಳ್ಳಲು ನಾನು ಉದ್ದೇಶಿಸಿಲ್ಲ. ನಾವು ರಾಮನ ಸೇವಕರಾಗಿ ಅಯೋಧ್ಯೆಗೆ ಹೋಗುತ್ತಿದ್ದೇವೆ ಎಂದು ಟಿವಿ ಚಾನೆಲ್ ವೊಂದರಲ್ಲಿ ಹೇಳಿದರು.

ರಾಮ ಮಂದಿರ ಉದ್ಘಾಟನೆ ಸಮಾರಂಭದ ಆಹ್ವಾನವನ್ನು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಾಯಕರಿಗೆ ನೀಡಲಾಯಿತು ಆದರೆ ಅವರು ಅದರ ಭಾಗವಾಗಲು ನಿರಾಕರಿಸಿದ್ದಾರೆ.“ರಾಮ ಮಂದಿರಕ್ಕೆ ಬರುವುದನ್ನು ಯಾರನ್ನೂ ತಡೆದಿಲ್ಲ. ರಾಮನ ಸೇವಕರಾಗಿ ಬರುವವರನ್ನು ಸ್ವಾಗತಿಸಲಾಗುತ್ತದೆ ಎಂದು ಅವರು ಟೀಕಿಸಿದರು.

ಇದು ಕ್ರೆಡಿಟ್ ತೆಗೆದುಕೊಳ್ಳುವ ಸಮಯವಲ್ಲ ಎಂದು ಹೇಳಿದ ಯೋಗಿ ಆದಿತ್ಯನಾಥ್, ರಾಮಮಂದಿರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ತಮ್ಮ ಗುರುದೇವ್ ಮಹಂತ್ ಅವೈದ್ಯನಾಥಜಿ ಅವರ ಪಾತ್ರವನ್ನು ವಿವರಿಸಿದರು.

ಈ ಹೋರಾಟದಲ್ಲಿ “3 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು ಮತ್ತು ದೇವಾಲಯದ ಪುನಶ್ಚೇತನಕ್ಕಾಗಿ 76 ಕ್ಕೂ ಹೆಚ್ಚು ಸಂಘರ್ಷಗಳು ನಡೆದವು. ಗೋರಕ್ಷನಾಥ ಪೀಠಕ್ಕೆ ಜನರು ಆಗಾಗ ಬರುತ್ತಿದ್ದರು. ಆ ಹೋರಾಟದ ಫಲವಾಗಿ ಇಂದು ದೇವಾಲಯ ತಲೆ ಎತ್ತಿದೆ’ ಎಂದು ಸಿಎಂ ಹೇಳಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *