ಬಿಜೆಪಿಯವ್ರು ಟಿವಿಯಲ್ಲಿ ದೇವರನ್ನು ತೋರಿಸ್ತಾರೆ, ನಾವು ದೇವಸ್ಥಾನಕ್ಕೆ ಉಚಿತ ಪಯಾಣ ಕಲ್ಪಿಸುತ್ತೇವೆ: ಸಂತೋಷ್ ಲಾಡ್

ಧಾರವಾಡ,: ಭಾರತೀಯ ಜನತಾ ಪಕ್ಷದವರು ಕೇವಲ ಟಿವಿಯಲ್ಲಿ ದೇವರನ್ನು ತೋರಿಸುತ್ತಾರೆ. ನಾವು ದೇವಾಲಯಗಳಿಗೆ ಹೋಗಲು ಉಚಿತ ಪ್ರಯಾಣದ ಅವಕಾಶ ಕಲ್ಪಿಸಿದ್ದೇವೆ ಎಂದು ಸಚಿವ ಸಂತೋಷ್ ಲಾಡ್ ಬಿಜೆಪಿಗೆ ಕುಟುಕಿದ್ದಾರೆ.

ನಗರದ ಕೆಸಿಡಿ ಮೈದಾನದಲ್ಲಿ ಗ್ಯಾರಂಟಿ ಫಲಾನುಭವಿಗಳ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು ಕೊಟ್ಟ ನಮ್ಮ ಸಿದ್ದರಾಮಯ್ಯ ಪರ ನೀವು ಇರಬೇಕೊ ಬೇಡವೋ? ಅದಕ್ಕೆ ತಾವು ಬೆಂಬಲ ಕೊಡಬೇಕು ಎಂದು ಫಲಾನುಭವಿಗಳಲ್ಲಿ ಮನವಿ ಮಾಡಿದರು.

ಕಾಪಿ ಮಾಡ್ತಿದ್ದಾರೆ ಬಿಜೆಪಿಯವರು

ಬಿಜೆಪಿಯವರು ಕೇವಲ ಟಿವಿಯಲ್ಲಿ ದೇವರನ್ನು ತೋರಿಸುತ್ತಾರೆ. ನಮ್ಮ ಸರ್ಕಾರ ದೇವಸ್ಥಾನಗಳಿಗೆ ಉಚಿತವಾಗಿ ಹೋಗಲು ಅವಕಾಶ ಮಾಡಿಕೊಟ್ಟಿದೆ. ನಿಮಗೆ ಐದು ಕೆಜಿ ಅಕ್ಕಿ ಸಿಗುತ್ತಿದೆ, ಅಕ್ಕಿ ಬದಲಿಗೆ ದುಡ್ಡು ಬರುತ್ತಿದೆ. ಯಾರೂ ಹಸಿವಿನಿಂದ ಬಳಲಬಾರದು ಎಂದು ಕಾರ್ಯಕ್ರಮ ತಂದಿದ್ದೇವೆ. ಇದು ಬಿಜೆಪಿ ಗ್ಯಾರಂಟಿ ಅಲ್ಲ, ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮ. 9 ವರ್ಷಗಳಿಂದ ಅವರು (ಬಿಜೆಪಿ) ಪ್ರಚಾರ ಮಾಡಲಿಲ್ಲ. ನಮ್ಮ ಗ್ಯಾರಂಟಿಗಳು ಬರುತಿದ್ದಂತೆ ಆ ಹೆಸರು ಕಾಪಿ ಮಾಡಿ ಮೋದಿ ಗ್ಯಾರಂಟಿ ಎನ್ನುತಿದ್ದಾರೆ. ಇತಿಹಾಸವನ್ನು ತಿರುಚಿ ಹೇಳುವ ಕೆಲಸ ಆರಂಭವಾಗಿದೆ ಎಂದರು.

ಹಿಂದೂ ಬಿಲ್ ತಂದಿದ್ದುಅಂಬೇಡ್ಕರ್

ಬಿಜೆಪಿಯವರು ಹಿಂದೂ ಹಾಗೂ ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ. ಈ‌ ಪದ ಬಳಕೆಗೆ ತಂದಿದ್ದು ಬೇರೆ ಯಾರೂ ಅಲ್ಲ ಡಾ.ಅಂಬೇಡ್ಕರ್. ಇವತ್ತು ಬಿಜೆಪಿಯವರು ಹಿಂದೂ ಎಂದು ಜೋರಾಗಿ ಹೇಳುತ್ತಾರೆ. ಆದರೆ ಕಾನೂನಾತ್ಮಕವಾಗಿ ಅದನ್ನು (ಹಿಂದೂ ಬಿಲ್) ತಂದಿದ್ದು ಬಿ.ಆರ್.ಅಂಬೇಡ್ಕರ್. ಬ್ರಾಹ್ಮಣ, ವೈಶ್ಯ, ಕ್ಷತ್ರೀಯ, ಶೂದ್ರರನ್ನು ಒಗ್ಗೂಡಿಸಿದ್ದು ಅಂಬೇಡ್ಕರ್ ಎಂದರು.

ಸಮಾವೇಶದಲ್ಲಿ ಜಿಲ್ಲಾಧಿಕಾರಿ ದಿವ್ಯಾ ಪ್ರಭು, ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್, ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಧಾರವಾಡ, ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರಗಳ 30 ಸಾವಿರಕ್ಕೂ ಫಲಾನುಭವಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದರು.

 

ಸೋಮವಾರದಂದು ಬಿಡುವಿಲ್ಲದೆ ಅನೇಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಸಂತೋಷ್ ಲಾಡ್ ಅವರು, ಇದಕ್ಕೂ ಮೊದಲು ಸಂತೋಷ್ ಲಾಡ್ ಅವರು ಅನಾರೋಗ್ಯಕ್ಕೊಳಗಾಗಿ ಹುಬ್ಬಳ್ಳಿಯ ಸೆಕ್ಯೂರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಗಿರೀಶ್ ಸೂರ್ಯವಂಶಿ ಅವರ ಆರೋಗ್ಯ ವಿಚಾರಿಸಿದರು.

ಬಳಿಕ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ಹಾಗೂ ಧಾರವಾಡ ಜಿಲ್ಲಾ ಸಹಕಾರ ಯೂನಿಯನ್‌ ಧಾರವಾಡ ಹಾಗೂ ಸಹಕಾರ ಇಲಾಖೆ ಸಹಯೋಗದಲ್ಲಿ ಬೆಳಗಾವಿ ವಿಭಾಗದ ಆಯ್ದ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಹಕರುಗಳಿಗೆ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಉನ್ನತ ಮಾದರಿ ಸಹಕಾರ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದರು.

ಧಾರವಾಡದ ಸತ್ತೂರಿನಲ್ಲಿ ನಡೆದ ಶ್ರೀ ಶರಣಬಸವೇಶ್ವರ ಮೂರ್ತಿ ಪ್ರತಿಷ್ಠಾನದ 5 ನೇ ವಾರ್ಷಿಕೋತ್ಸವ ಹಾಗೂ ಶ್ರೀ ಬಸವೇಶ್ವರ ರೂರಲ್‌ ಎಜುಕೇಶನ್‌ ಮತ್ತು ಡೆವಲಪ್‌ಮೆಂಟ್‌ ಟ್ರಸ್ಟ್‌ನ 20 ನೇ ವಾರ್ಷಿಕೋತ್ಸದ ಹಾಗೂ ಡಾ. ಶರಣಪ್ಪ ಎಂ ಕೊಟಗಿ ಚಾರಿಟಬಲ್‌ ಟ್ರಸ್ಟ್‌ ನ 7 ನೇ ವಾರ್ಷಿಕೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಸಮುತ್ಸವ 2024 ರಲ್ಲಿ ಪಾಲ್ಗೊಂಡರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *