Lok Sabha Elections : ಲೋಕ್ ಪೋಲ್ ಸಮೀಕ್ಷೆ : ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಲಾಭ, ಬಿಜೆಪಿಗೆ ಬಿಗ್ ಶಾಕ್, ಜೆಡಿಎಸ್ ಯಥಾಸ್ಥಿತಿ!
ಹೈಲೈಟ್ಸ್:
- ಕರ್ನಾಟಕದಲ್ಲಿ ರಂಗೇರಿದ ಲೋಕಸಭಾ ಚುನಾವಣೆ
- ಲೋಕ್ ಪೋಲ್ ಸಮೀಕ್ಷೆಯಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಲಾಭ
- ಬಿಜೆಪಿಗೆ ಬಿಗ್ ಶಾಕ್ ನೀಡಿದ ಸಮೀಕ್ಷೆ, ಜೆಡಿಎಸ್ ಯಥಾಸ್ಥಿತಿ!
ಬೆಂಗಳೂರು : ಲೋಕಸಭಾ ಚುನಾವಣೆ ರಂಗೇರಿದ್ದು, ಬಿಜೆಪಿ – ಜೆಡಿಎಸ್ ಹಾಗೂ ಕಾಂಗ್ರೆಸ್ ಭರ್ಜರಿಯಾಗಿ ಚುನಾವಣೆ ತಯಾರಿ ನಡೆಸುತ್ತಿವೆ. ಕರ್ನಾಟಕದಲ್ಲಿ 28 ಕ್ಷೇತ್ರಗಳನ್ನು ಗೆಲ್ಲುವ ಗುರಿಯೊಂದಿಗೆ ಕೆಲಸ ಮಾಡುತ್ತಿರುವ ಬಿಜೆಪಿ – ಜೆಡಿಎಸ್ ಮೈತ್ರಿಗೆ ಲೋಕ್ ಪೋಲ್ ಸಮೀಕ್ಷೆ ಶಾಕ್ ನೀಡಿದ್ದು, ಕಳೆದ ಬಾರಿಗಿಂತ ಬಹಳಷ್ಟು ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎಂದು ಭವಿಷ್ಯ ನುಡಿದಿದೆ. ಆದರೆ, ಕಾಂಗ್ರೆಸ್ ಎರಡು ದಶಕಗಳ ಬಳಿಕ ಎರಡಂಕಿ ದಾಟಲಿದೆ ಎಂದು ಸಮೀಕ್ಷೆ ಹೇಳಿದೆ.
ಲೋಕ್ ಪೋಲ್ ಸಮೀಕ್ಷೆ ಪ್ರಕಾರ ಆಡಳಿತಾರೂಢ ಕಾಂಗ್ರೆಸ್ 12 ರಿಂದ 14 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎನ್ನಲಾಗಿದೆ. ಬಿಜೆಪಿ 10 ರಿಂದ 12 ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲಲಿದೆ ಎಂದು ಸಮೀಕ್ಷೆ ತಿಳಿಸಿದ್ದು, ಜೆಡಿಎಸ್ 1 ರಿಂದ 2 ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದು ಸಮೀಕ್ಷೆ ತಿಳಿಸಿದೆ. ಬಹುತೇಕ ಎಲ್ಲ ಸಮೀಕ್ಷೆಗಳು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗೆ 20+ ಕ್ಷೇತ್ರಗಳನ್ನು ನೀಡಿದ್ದವು. ಆದರೆ, ಈ ಸಮೀಕ್ಷೆ ಕುತೂಹಲ ಕೆರಳಿಸಿದೆ.ಕಾಂಗ್ರೆಸ್ ಕಳೆದ ಬಾರಿ ಕೇವಲ ಒಂದು ಸ್ಥಾನಕ್ಕೆ ಮಾತ್ರ ತೃಪ್ತಿಪಟ್ಟಿತ್ತು. ಆದರೆ, ಈ ಸಲ ತನ್ನ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು 12 ರಿಂದ 14ಕ್ಕೆ ಏರಿಸುತ್ತದೆ ಎಂದು ಲೋಕ್ ಪೋಲ್ ಸಮೀಕ್ಷೆ ಹೇಳಿದೆ. ಈ ಸಾಧನೆಗೆ ಗ್ಯಾರಂಟಿ ಯೋಜನೆಗಳು ಬಹಳಷ್ಟು ಸಹಾಯ ಮಾಡಲಿವೆ ಎಂದು ಹೇಳಿವೆ. ಕಳೆದ ಬಾರಿ 25 ಕ್ಷೇತ್ರಗಳನ್ನು ಗೆದ್ದಿದ್ದ ಬಿಜೆಪಿ ಈ ಸಲ ಕೇವಲ 10 ರಿಂದ 12 ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲಲಿದೆ ಎಂದು ಲೋಕ್ ಪೋಲ್ ಹೇಳಿದೆ. ಇನ್ನು, ಜೆಡಿಎಸ್ ಕಳೆದ ಬಾರಿ 1 ಕ್ಷೇತ್ರ ಗೆದಿತ್ತು. ಅದು ಈಗ 1 ರಿಂದ 2 ಕ್ಷೇತ್ರ ಆಗಬಹುದು ಎಂದು ಸಮೀಕ್ಷೆ ಹೇಳಿದೆ.
ಪಕ್ಷ
|
2019ರ ಲೋಕಸಭಾ
ಚುನಾವಣೆ ಫಲಿತಾಂಶ |
ಲೋಕ್ ಪೋಲ್ ಸಮೀಕ್ಷೆ
|
ಬಿಜೆಪಿ
|
25
|
10 – 12
|
ಕಾಂಗ್ರೆಸ್
|
01
|
12 – 14
|
ಜೆಡಿಎಸ್
|
01
|
01 – 02
|
ಪಕ್ಷೇತರ
|
01
|
–
|
ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಯಾವಾಗ?
ಕರ್ನಾಟಕದಲ್ಲಿ ಎರಡು ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ. ಏಪ್ರಿಲ್ 26ರಂದು 14 ಲೋಕಸಭಾ ಕ್ಷೇತ್ರಗಳಿಗೆ, ಮೇ 7ರಂದು 14 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಜೂನ್ 4ಕ್ಕೆ ಫಲಿತಾಂಶ ಬರಲಿದೆ. ಈಗಾಗಲೇ ಮೊದಲ ಹಂತದಲ್ಲಿ ನಡೆಯುವ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಶುರುವಾಗಿದ್ದು, ಏಪ್ರಿಲ್ 4 ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದೆ.