ಡ್ರಗ್ ಮಾಫಿಯಾ: ಕೆಲವೇ ಹೊತ್ತಿನಲ್ಲಿ ಇಂದ್ರಜಿತ್ ವಿಚಾರಣೆ, ಸ್ಯಾಂಡಲ್ ವುಡ್ ನಟರ ಪಟ್ಟಿಯೂ ಸಿದ್ಧ

ಬೆಂಗಳೂರು: ಡ್ರಗ್ ಮಾಫಿಯಾ ಕುರಿತಂತೆ ಆರೋಪಿಗಳು ಬಾಯ್ಬಿಟ್ಟ ಸ್ಯಾಂಡಲ್ ವುಡ್ ಸ್ಟಾರ್ ಗಳನ್ನು ವಿಚಾರಣೆಗೊಳಪಡಿಸಲು ಪಟ್ಟಿ ಸಿದ್ಧವಾಗಿದ್ದು ಕೆಲವೇ ಹೊತ್ತಿನಲ್ಲಿ ಸಿಸಿಬಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ವಿಚಾರಣೆ ಮಾಡಲಿದೆ.

ಕಿಂಗ್ ಪಿನ್ ಅನಿಕಾ ಹೇಳಿಕೆಯಾಧರಿಸಿ 15 ನಟ-ನಟಿಯರು, ಸಂಗೀತಗಾರರ ಪಟ್ಟಿ ಸಿದ್ಧಪಡಿಸಲಾಗಿದೆ. ಈ ಪೈಕಿ ತಲಾ ಮೂವರು ನಟಿಯರು ಮತ್ತು ನಟರು, ಒಬ್ಬ ಸಂಗೀತ ನಿರ್ದೇಶಕ, ಧಾರವಾಹಿ ಕಲಾವಿದರು, ಪ್ರತಿಷ್ಠಿತರ ಮಕ್ಕಳು ಸೇರಿದ್ದಾರೆ ಎನ್ನಲಾಗಿದೆ. ಮೊದಲನೇ ಸಿನಿಮಾದಲ್ಲೇ ಪ್ರಶಸ್ತಿ ಗೆದ್ದ ಪ್ರತಿಭಾವಂತ ನಟಿಯೂ ವಿಚಾರಣೆಗೊಳಗಾಗಬೇಕಿರುವವರ ಪಟ್ಟಿಯಲ್ಲಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *