Lok Sabha Election: ಧಾರವಾಡದಿಂದ ಪಕ್ಷೇತರ ಸ್ಪರ್ಧೆಯ ಘೋಷಣೆ ಮಾಡಿದ ದಿಂಗಾಲೇಶ್ವರ ಶ್ರೀ! ಪ್ರಹ್ಲಾದ್ ಜೋಶಿಗೆ ಆತಂಕ!

ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಹುಬ್ಬಳ್ಳಿ-ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ತೀನಿ ಎಂದು ಫಕೀರ ದಿಂಗಾಲೇಶ್ವರ ಶ್ರೀ (Dingaleshwar Swamiji) ಘೋಷಿಸಿದ್ದಾರೆ.

ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಸುದ್ದಿಗಳು ಹರಿದಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸುದ್ದಿಗಾರರ ಜೊತೆ ಮಾತನಾಡಿ ತಮ್ಮ ನಿರ್ಧಾರ ಘೋಷಿಸಿದ ಶ್ರೀಗಳು, ನೊಂದ ಸಮಾಜಗಳು ನಮ್ಮ ಬಳಿ ನೋವು ತೋಡಿಕೊಂಡಿವೆ. ಲಿಂಗಾಯತ, ಗೌಡ ಸಮುದಾಯದ ಬಳಿಕ ಕುರುಬ ಸಮುದಾಯ ಹೆಚ್ಚು ಸಂಖ್ಯೆಯಲ್ಲಿ ಇದೆ. ಆದ ಕಾರಣ ಈ ನಿರ್ಧಾರ ಮಾಡಿದ್ದೇನೆ. ರಾಷ್ಟ್ರೀಯ ನಾಯಕರು ಆ ಸಮುದಾಯ, ಈ ಸಮುದಾಯದ ಜನ ನಮಗೆ ಅಗತ್ಯ ಇಲ್ಲ ಅಂತಾ ಮಾತಾಡಿದ್ರು. ಈಶ್ವರಪ್ಪ ಅವರಿಗೆ ಟಿಕೆಟ್ ಕೊಡಲಿಲ್ಲ, ಅವರ ಮಗನಿಗೆ ಹಾವೇರಿಯಿಂದ ಟಿಕೆಟ್ ಕೊಡಲಿಲ್ಲ. ಬಿಜೆಪಿ ಕಟ್ಟಿದವರು ಲಿಂಗಾಯತ, ರೆಡ್ಡಿ, ಕುರುಬರು. ಆದರೆ ಈ ಎಲ್ಲ ಸಮಾಜಗಳೂ ಬಿಜೆಪಿಯಿಂದ ನೋವು ಅನುಭವಿಸಿವೆ ಎಂದು ಹೇಳಿದರು.

ಕಳೆದ ಅವಧಿಯಲ್ಲಿ ಎಲ್ಲಾ ವೀರಶೈವ ಲಿಂಗಾಯತ ಸಮಾಜದ ನಾಯಕರನ್ನು ಬಳಸಿಕೊಂಡು ಆಡಳಿತವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುವುದು ಸಾಮಾಜಿಕ ನ್ಯಾಯಾನಾ? ಎಂದು ಪ್ರಶ್ನಿಸಿದ ದಿಂಗಾಲೇಶ್ವರ ಶ್ರೀ, ಒಂಭತ್ತು ಜನ ವೀರಶೈವ ಸಮಾಜದ ಜನ ಸಂಸತ್ ಪ್ರವೇಶ ಮಾಡಿದ್ರು. ಒಬ್ಬರಿಗೂ ಕ್ಯಾಬಿನೆಟ್ ಸ್ಥಾನ ಕೊಡಲಿಲ್ಲ. ಶಿಕ್ಷಣ ಖಾತೆ ತಾವು ಇಟ್ಟುಕೊಳ್ತಾರೆ, ಪಶು ಸಂಗೋಪನೆ ಖಾತೆಯನ್ನು ಹಿಂದುಳಿದ ದಲಿತ ಸಮುದಾಯಕ್ಕೆ ಕೊಡ್ತಾರೆ. ಎಷ್ಟು ತಾರತಮ್ಯ ಆ ಪಕ್ಷದಲ್ಲಿ ಇದೆ ನೋಡಿ ಎಂದು ಕಿಡಿಕಾರಿದರು.

ಇನ್ನು, ವಿ. ಸೋಮಣ್ಣ ಅವರಿಗೆ ಬೆಂಗಳೂರು ದಕ್ಷಿಣದಲ್ಲಿ ಟಿಕೆಟ್ ಕೊಡಬಹುದಿತ್ತು, ಆದರೆ ತುಮಕೂರು ಕ್ಷೇತ್ರಕ್ಕೆ ಕಳಿಸಿ ಅಲ್ಲಿನ ಲಿಂಗಾಯತರು ಇವರ ವಿರುದ್ದ ನಿಲ್ಲುವಂತೆ ಮಾಡಿದರು ಎಂದ ದಿಂಗಾಲೇಶ್ವರ ಶ್ರೀ, ಒಡೆದು ಆಳುವ ರೀತಿ ಮಾಡಿದ್ರು. ತೇಜಸ್ವಿ ಸೂರ್ಯವರನ್ನು ತುಮಕೂರಿನಲ್ಲಿ ನಿಲ್ಲಿಸಿ, ಸೋಮಣ್ಣ ಅವರನ್ನು ಬೆಂಗಳೂರು ದಕ್ಷಿಣದಲ್ಲಿ ನಿಲ್ಲಿಸಿ. ಯಾರ ಬಲ ಎಷ್ಟಿದೆ ಅಂತ ಚೆಕ್ ಮಾಡಬಹುದಿತ್ತು ಎಂದರು.

ಮಾಜಿ ಸಚಿವ ಈಶ್ವರಪ್ಪನವರ ಮಗನಿಗೆ ಟಿಕೆಟ್ ತಪ್ಪಿಸಿದ್ದು ಪ್ರಹ್ಲಾದ್ ಜೋಶಿ ಎಂದ ಶ್ರೀಗಳು, ನಾನು ಮೊದಲೇ ಜೋಶಿ ಅವರನ್ನು ನಂಬಬೇಡಿ ಅಂತ ಈಶ್ವರಪ್ಪ ಅವರಿಗೆ ಹೇಳಿದ್ದೆ. ಲಿಂಗಾಯತ ಸಮುದಾಯದ ನಾಯಕರಿಗೆ ಎರಡು ಅಥವಾ ಮೂರು ಅವಧಿಯಲ್ಲಿ ಅವಕಾಶ ಕೊಡ್ತಾರೆ. ಬೇರೆ ‌ಸಮುದಾಯದ ನಾಯಕರಿಗೆ ಹತ್ತು ಅವಧಿಯವರೆಗೆ ಅವಕಾಶ ಕೊಡ್ತಾರೆ. ಪ್ರಹ್ಲಾದ್ ಜೋಶಿ ಹೀರೋ ಆಗಿದ್ದಾರೆ, ಆದರೆ ಅಭಿವೃದ್ಧಿ ವಿಚಾರದಲ್ಲಿ ಝಿರೋ ಆಗಿದ್ದಾರೆ. ಪ್ರಹ್ಲಾದ್ ಜೋಷಿ, ಬೇರೆ ಸಮುದಾಯದವನ್ನು ಕಡೆಗಣಿಸುತ್ತಾರೆ. ನಮ್ಮ ಸಮುದಾಯವನ್ನು ಪ್ರಹ್ಲಾದ್ ಜೋಷಿ ತುಳಿದು ರಾಜಕಾರಣ ಮಾಡಿದ್ದಾರೆ. ಜೋಷಿ ಅವರು ತಮ್ಮ ಸಮುದಾಯದ ಬೆಳವಣಿಗೆ ಅಷ್ಟೇ ನೋಡ್ತಾರೆ ಎಂದು ಕಿಡಿಕಾರಿದರು.

ಇನ್ನು, ಪ್ರಹ್ಲಾದ್ ಜೋಷಿ ಅವರು ತಮ್ಮ ಪಕ್ಷದ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಠಾಧೀಶರನ್ನು ಕರೆದುಕೊಂಡು ಹೋಗಿದ್ದಾರೆ. ಮಠಾಧೀಶರ ಮಧ್ಯ ಪ್ರಹ್ಲಾದ್ ಜೋಷಿ ಕುಳಿತಿದ್ದಾರೆ ಎಂದ ದಿಂಗಾಲೇಶ್ವರ ಶ್ರೀ, ನನ್ನ ಜೊತೆಗೆ ಲಿಂಗಾಯತ ಸಮುದಾಯ ಇದೆ ಎಂದು ಹೈಕಮಾಂಡ್ ನಾಯಕರಿಗೆ ಸಂದೇಶ ನೀಡಿದ್ದಾರೆ. ಈ ಮೂಲಕ ತಮ್ಮ‌ ರಾಜಕಾರಣಕ್ಕೆ ನಮ್ಮ ಮಠಾಧೀಶರನ್ನು ಬಳಸಿಕೊಂಡಿದ್ದಾರೆ. ಮೊದಲ ಲೀಸ್ಟ್ ನಲ್ಲಿ ಪ್ರಹ್ಲಾದ್ ಜೋಷಿ ಅವರಿಗೆ ಟಿಕೆಟ್ ಆಗಿರಲ್ಲ, ಹೈಕಮಾಂಡ್‌ ನಾಯಕರಿಗೂ ಪ್ರಹ್ಲಾದ್ ಜೋಷಿ ಅವರ ಬಗ್ಗೆ ಗೊತ್ತಿತ್ತು ಅನ್ಸುತ್ತೆ ಎಂದರು.

ಇನ್ನು, ನಾನು ಬ್ರಾಹ್ಮಣ ಸಮುದಾಯದ ಅಭಿಮಾನಿ, ಬ್ರಾಹ್ಮಣ ಸಮುದಾಯದ ವಿರೋಧಿ ಅಲ್ಲ ಎಂದ ಅವರು, ಅನೇಕ ನಮ್ಮ ಮಠಾಧೀಶರು ಹಾಗೂ ಬ್ರಾಹ್ಮಣ ಸಮುದಾಯದ ಸ್ವಾಮೀಜಿಗಳೇ ದಿಂಗಾಲೇಶ್ವರರ ರಾಜಕಾರಣಕ್ಕೆ ಸ್ವಾಗತಿಸಿದ್ದಾರೆ. ಎಲ್ಲಾ ಸಮುದಾಯದ ಸ್ವಾಮೀಜಿಗಳನ್ನು ಕೋಮಾದಲ್ಲಿ ಇಡುವ ಪ್ರಯತ್ನ ಪ್ರಹ್ಲಾದ್ ಜೋಷಿ ಮಾಡ್ತಿದ್ದಾರೆ. ಹೀಗಾಗಿ ನಾನು ರಾಜಕಾರಣಕ್ಕೆ ಬರಬೇಕಾಯಿತು ಎಂದರು.

ಪ್ರಹ್ಲಾದ್ ಜೋಷಿ ಅವರು ಪ್ರಜಾಪ್ರಭುತ್ವದ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ ಶ್ರೀಗಳು, ಇದೆಲ್ಲ ಹೈಕಮಾಂಡ್ ಗೆ ತಿಳಿಯಬೇಕಿತ್ತು. ಅದರೆ ಅವರೇ ಅವರಿಗೆ ಸಪೋರ್ಟ್ ಮಾಡಿರಬಹುದು. ಎರಡು ಪಕ್ಷಗಳಲ್ಲಿ ನಮ್ಮ ಅಭಿಮಾನಿಗಳು ಸಮುದಾಯದವರಿದ್ದಾರೆ. ಇದು ಎರಡು ರಾಷ್ತ್ರೀಯ ಪಕ್ಷಗಳ ವಿರುದ್ದ ಸ್ವಾಭಿಮಾನಿಗಳ ಯುದ್ದ ಎಂದರು.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *