Tabu Rao: ಹೀರೋ ಆಗಲು ಬೇರೆ ಮನೆ ಹೆಂಗಸರ ಬಗ್ಗೆ ಮಾತನಾಡೋದು ಎಷ್ಟು ಸರಿ? ಯತ್ನಾಳ್​ಗೆ ತಬು ರಾವ್ ಪ್ರಶ್ನೆ

ಬೆಂಗಳೂರು: ಸಚಿವ ದಿನೇಶ್ ಗುಂಡೂರಾವ್ (Minister Dinesh Gundurao) ಪತ್ನಿ ತಬು ರಾವ್ (Tabu Rao), ಸಂಜಯ ನಗರ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (BJP MLA Basanagouda Patil Yatnal) ವಿರುದ್ಧ ದೂರು ದಾಖಲಿಸಿದ್ದಾರೆ. ದೂರು ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ತಬು ರಾವ್, ಸಂಜಯ್ ನಗರ ಪೊಲೀಸರು ದೂರು ಸ್ವೀಕಾರ ಮಾಡಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಯಾರು ನನಗೆ ಗೊತ್ತಿಲ್ಲ. ನಾನು ರಾಜಕೀಯದಲ್ಲಿಲ್ಲ. ನನಗೇಕೆ ಹೀಗೆ ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಈ ರೀತಿ ಮಾನತಾಡೋದೇ ರಾಜಕೀಯನಾ ಎಂದು ತಬು ರಾವ್ ಪ್ರಶ್ನೆ ಮಾಡಿದರು.

ಭಾರತ ಮಾತೆ ಅಂತಾರೆ ಆದ್ರೆ ಹೆಣ್ಣು ಮಕ್ಕಳಿಗೆ ಇದೆನಾ ಇವರು ಕೊಡುವ ಮರ್ಯಾದೆ? ಸಂಜಯ್ ನಗರ ಪೊಲೀಸರಿಗೆ ಎಫ್​​ಐಆರ್ ಮಾಡೋಕೆ ಹೇಳಿದ್ದೀನಿ. ನಾನು ಮಾನನಷ್ಟ ಮೊಕದ್ದಮೆಯನ್ನೂ ಹಾಕುತ್ತೇನೆ. ದಿನೇಶ್ ಬಗ್ಗೆ ಮಾತನಾಡಿದ್ರೆ ಪರವಾಗಿಲ್ಲ ನಮ್ಮ ಬಗ್ಗೆ ಯಾಕೆ ಮಾತನಾಡಬೇಕು ಎಂದು ಯತ್ನಾಳ್​ ಅವರನ್ನ ಪ್ರಶ್ನಿಸಿದ್ದಾರೆ.

ಯತ್ನಾಳ್ ಹೇಳಿಕೆ ಅಸಹ್ಯ

ನ್ಯೂಸ್​ 18 ಜೊತೆ ಮಾತನಾಡಿದ ತಬು ರಾವ್, ಯತ್ನಾಳ್ ಹೇಳಿಕೆ ಅಸಹ್ಯ, ಅವರು ಯಾರು ಅಂತಲೂ ನನಗೆ ಗೊತ್ತಿಲ್ಲ. ಹೀರೋ ಆಗಲು ಭಾರತ್ ಮಾತಾಕಿ ಜೈ ಅಂತೀರಲ್ಲ ಹೆಣ್ಮಕ್ಕಳಿಗೆ ಗೌರವ ಕೊಡೋಕೆ ಆಗಲ್ಲವಾ ಎಂದು ಆಕ್ರೋಶ ಹೊರ ಹಾಕಿದರು.

ಇತ್ತೀಚೆಗೆ ಬಿಜೆಪಿ ಅಭ್ಯರ್ಥಿ, ನಟಿ ಕಂಗನಾ ರಣಾವತ್ ಹೇಳಿಕೆಗೆ ಬಿಜೆಪಿಯ ಎಲ್ಲರೂ ಮಾತನಾಡಿದರು. ಅವರ ಮನೆ ಹೆಣ್ಮಕ್ಕಳು ಬೇರೆ, ನಮ್ಮನೆ ಹೆಣ್ಮಕ್ಕಳು ಬೇರೆನಾ ಎಂದು ಕಮಲ ನಾಯಕರನ್ನು ತಬು ರಾವ್ ಪ್ರಶ್ನೆ ಮಾಡಿದರು.

ಮಾನಹಾನಿ ಕೇಸ್ ಹಾಕ್ತೀನಿ

ನಾನು ರಾಜಕಾರಣದಲ್ಲಿಲ್ಲ ಆದರೂ ನನ್ನನ್ನು ಯಾಕೆ ಟಾರ್ಗೆಟ್ ಮಾಡುತ್ತಾರೆ ಅಂತ ಗೊತ್ತಿಲ್ಲ. ಮುಸ್ಲಿಂ ಕಾರ್ಡ್‌ನ ಎಷ್ಟು ಅಂತ ಪ್ಲೇ ಮಾಡ್ತೀರಿ? ನಾನು ಈ ಬಗ್ಗೆ ಪೊಲೀಸ್ ಠಾಣೆಗೆ ದೂರು, ಮಾನಹಾನಿ ಕೇಸ್ ಹಾಕ್ತೀನಿ. ಇದು ಫಸ್ಟ್ ಟೈಂ‌ ಅಲ್ಲ, ಯಾವಾಗಲೂ ಈ ರೀತಿ ಮಾತನಾಡ್ತಾರೆ ಎಂದು ಬೇಸರ ಹೊರ ಹಾಕಿದರು.

ಬೇರೆ ಮನೆಯ ಹೆಂಗಸರ ಬಗ್ಗೆ ಮಾತನಾಡೋದು ಎಷ್ಟು ಸರಿ?

ದಿನೇಶ್ ಬಗ್ಗೆ ರಾಜಕೀಯ ದ್ವೇಷ ಇದ್ರೆ ಅವರ ಕುರಿತು ಮಾತನಾಡಲಿ. ಹೀರೋ ಆಗಲು ಬೇರೆ ಮನೆಯ ಹೆಂಗಸರ ಬಗ್ಗೆ ಮಾತನಾಡೋದು ಎಷ್ಟು ಸರಿ ಎಂದು ಯತ್ನಾಳ್​ ಅವರನ್ನು ಕೇಳಿದರು.

ಹೆಣ್ಮಕ್ಕಳಿಗೆ ಗೌರವ ಕೊಡುವುದನ್ನ ಕಲಿಯಿರಿ

ಎಲ್ಲಾ ಮುಸ್ಲಿಂ ಭಾರತೀಯರು ಎಷ್ಟು ಪ್ರೋವ್ ಮಾಡಬೇಕು. ನಾನು ಮುಸ್ಲಿಂ ಅಂತ ಈ ರೀತಿ ಟಾರ್ಗೆಟ್ ಮಾಡ್ತಾರೆ. ನಾನು ದೇವಸ್ಥಾನಗಳಿಗೆ ಕೊಡುವ ಭಕ್ತಿ ಭಾವ ಅವರು ಕೊಡ್ತಾರಾ? ಇದು ಕಂಪ್ಲೀಟ್ಲಿ ಲೋ‌ ಬ್ಲೋ, ಈ ಮಟ್ಟಕ್ಕೆ ಯಾರೂ ಇಳಿಯಬಾರದು. ಭಾರತ್ ಮಾತಾಕಿ ಜೈ ಎನ್ನುವವರು ಹೆಣ್ಮಕ್ಕಳಿಗೆ ಗೌರವ ಕೊಡುವುದನ್ನ ಕಲಿಯಿರಿ ಎಂದು ಬಿಜೆಪಿ ನಾಯಕರ ವಿರುದ್ಧ ತಬೂ ರಾವ್ ವಾಗ್ದಾಳಿ ನಡೆಸಿದರು.

ಫೇಸ್​ಬುಕ್​ನಲ್ಲಿಯೂ ಕಿಡಿ

ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ನಾಚಿಕೆಯಾಗಬೇಕು. ಕೆಟ್ಟದಾಗಿ ಮಾತನಾಡುವ ಯತ್ನಾಳ್​ರಿಗೆ ಒಳ್ಳೆಯದು ಭಾಷೆ ಗೊತ್ತಿಲ್ಲ. ಬೇರೆಯೊಬ್ಬರ ಪತ್ನಿ ಬಗ್ಗೆ ಮಾತನಾಡೋದು ಅತ್ಯಂತ ಕೀಳುಮಟ್ಟದ್ದು. ನಿಮಗೂ ಕುಟುಂಬವಿದೆ ಎಂಬುದನ್ನು  ಮರೆಯಬೇಡಿ. ಎಲ್ಲೆ ಮೀರಿದ ನಿಮ್ಮ ಹೇಳಿಕೆಗಳಿಗೆ ನಾಚಿಕೆಯಾಗಲಿ ಎಂದು ಕಿಡಿಕಾರಿದ್ದಾರೆ.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *