Rameshwaram Cafe Blast: ರಾಮೇಶ್ವರಂ ಕೆಫೆ ಸ್ಪೋಟ ಕೇಸ್​​​, ಶಂಕಿತ ಉಗ್ರ ಮುಸಾವಿರ್ ಹುಸೇನ್ ಅರೆಸ್ಟ್​

ಬೆಂಗಳೂರು: ರಾಮೇಶ್ವರಂ ಕೆಫೆ ಸ್ಪೋಟ (Rameshwaram Cafe Blast Case) ಪ್ರಕರಣದ ಶಂಕಿತ ಉಗ್ರ ಮುಸಾವಿರ್ ಶಾಜೀನ್ ಹುಸೇನ್ ನನ್ನು (Mussavir Hussain Shazib) ಎನ್​ಐಎ ಅಧಿಕಾರಿಗಳು ಬಂಧನ ಮಾಡಿದ್ದಾರೆ. ಉತ್ತರ ಭಾರತದ ರಾಜ್ಯದಲ್ಲಿ ಬಾಂಬರ್ ಅರೆಸ್ಟ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಉಗ್ರ ಮುಸಾವಿರ್ ಶಾಜೀನ್ ಹುಸೇನ್ ಜೊತೆ ಮತ್ತೊಬ್ಬ ಉಗ್ರ ಕೂಡ ಬಂಧನ ಆಗಿದೆ ಎನ್ನಲಾಗಿದೆ. ಎನ್ ಐಎ ತಂಡದಿಂದ (NIA Team) ಕಾರ್ಯಾಚರಣೆ ನಡೆಸಿ ಇಬ್ಬರು ಶಂಕಿತ ಉಗ್ರರನ್ನು ಬಂಧನ ಮಾಡಲಾಗಿದೆ. ಶಂಕಿತ ಉಗ್ರರು ಅಸ್ಸಾಂ (Assam) ಹಾಗೂ ಪಶ್ಚಿಮ ಬಂಗಾಳ (West Bengal) ಕಡೆ ತಲೆಮರೆಸಿಕೊಂಡು ಓಡಾಡುತ್ತಿದ್ದ ಎನ್ನಲಾಗಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಎನ್​ಐಎ ತಂಡ ಶಂಕಿತ ಉಗ್ರರನ್ನು ಬಂಧನ ಮಾಡಿದೆ.

ಇಬ್ಬರಿಗೂ ತಲಾ 10 ಲಕ್ಷ ಬಹುಮಾನ ಘೋಷಿಸಿದ್ದ ಎನ್​ಐಎ

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಬ್ಲಾಸ್ಟ್ ನ ಮಾಸ್ಟರ್ ಮೈಂಡ್ ಅಬ್ದುಲ್ ಮತೀನ್ ತಾಹ ಹಾಗೂ ಮಸಾವೀರ್ ಬಗ್ಗೆ ಸುಳಿವು ನೀಡಿದವರಿಗೆ ಬಹುಮಾನ ನೀಡುವುದಾಗಿ ಎನ್​​ಐಎ ಘೋಷಿಸಿತ್ತು. ಅಲ್ಲದೇ ಇಬ್ಬರ ಫೋಟೋ ರಿಲೀಸ್ ಮಾಡಿದ್ದ ಎನ್‌ಐಎ ಅಧಿಕಾರಿಗಳು, ಈ ಇಬ್ಬರ ಬಗ್ಗೆಯೂ ಸುಳಿವು ನೀಡುವಂತೆ ಮನವಿ ಮಾಡಿದ್ದರು. ಸುಳಿವು ನೀಡಿದವರಿಗೆ ಇಬ್ಬರ ಸುಳಿವಿಗೂ ತಲಾ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದರು.

ಆರೋಪಿಯ ವಿವರ

  • ಮುಸ್ಸವೀರ್ ಹುಸೇನ್ ಶಾಜಿಬ್ ಅಲಿಯಾಸ್ @SHAZEB @MD ಜೂನ್ಡ್ ಹುಸೇನ್ @ಮೊಹಮ್ಮದ್ ಜೂನ್ ಸಯದ್
  • ವಯಸ್ಸು – 30 ವರ್ಷಗಳು
  • ಲಕ್ಷಣ – ಬಾಡಿ ಬಿಲ್ಟ್, ಜಿಮ್ ಮಾದರಿಯ ದೇಹ
  • ಎತ್ತರ – ಅಂದಾಜು 6 ಅಡಿ 2 ಇಂಚು
  • ಕೇಶವಿನ್ಯಾಸ: ಕಪ್ಪು ಮತ್ತು ನೇರ ಕೂದಲು
  • ಉಡುಪು: ಟಿ ಶರ್ಟ್ ಮತ್ತು ಜೀನ್ಸ್

ಮತ್ತೋರ್ವ ಆರೋಪಿ ವಿವರ

  • ಅಬ್ದುಲ್ ಮಥೀನ್ ಅಹ್ಮದ್ ತಾಹಾ @ಅಬ್ದುಲ್ ಮತೀನ್ ತಾಹಾ@ಮತೀನ್ @ ತಾಹಾ @ ವಿಗ್ನೇಶ್ ಡಿ @ ಸುಮಿತ್ (ಅಥವಾ ಯಾವುದೇ ಇತರ ಭಾವಿಸಲಾದ ಹಿಂದೂ ಹೆಸರು)
  • ವಯಸ್ಸು – ಸುಮಾರು 30 ವರ್ಷ
  • ಗೋಧಿ ಬಣ್ಣ, ಮಾಧ್ಯಮ ದೇಹ
  • ಅಂದಾಜು. 5 ಅಡಿ 5 ಇಂಚುಗಳು
  • ಕೇಶವಿನ್ಯಾಸ – ಮುಂಭಾಗದಿಂದ ಬೋಳು ಮತ್ತು ಹಿಂಭಾಗ ಮತ್ತು ಬದಿಗಳಲ್ಲಿ
  • ಹಗುರವಾದ ಕೂದಲು (ಕ್ಯಾಪ್ ಧರಿಸುತ್ತಾನೆ)
  • ಉಡುಪು – ಟಿ-ಶರ್ಟ್ ಮತ್ತು ಜೀನ್ಸ್, ಹೂಡೀಸ್ ಮತ್ತು ಕ್ಯಾಪ್
  • ಹಿಂದೂ ಹೆಸರಲ್ಲಿ ನಕಲಿ ಆಧಾರ್, ಗುರುತಿನ ಕಾರ್ಡ್

2024ರ ಮಾರ್ಚ್​ 1ರಂದು ಬೆಂಗಳೂರಿನ ರಮೇಶ್ವರಂ ಕೆಫೆಯಲ್ಲಿ ಶಂಕಿತ ಉಗ್ರ ಬಾಂಬ್ ಇಟ್ಟು ಎಸ್ಕೇಪ್ ಆಗಿದ್ದ. ಬಾಂಬ್ ಬ್ಲಾಸ್ಟ್​ನಲ್ಲಿ ಹಲವರು ಗಾಯಗೊಂಡಿದ್ದರು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪ್ರಕರಣ ತನಿಖೆಯನ್ನು ಕೈಗೆತ್ತಿಕೊಂಡ ಎನ್​​ಐಎ ಅಧಿಕಾರಿಗಳು ನಾಲ್ವರು ಶಂಕಿತರನ್ನು ಗುರುತಿಸಿದ್ದರು. ಅಲ್ಲದೇ ಇಬ್ಬರು ಆರೋಪಿಗಳ ವಿವರ ಹಂಚಿಕೊಂಡು ಬಂಧನಕ್ಕೆ ಜನರ ಸಹಕಾರ ಕೇಳಿದ್ದರು. ಈ ನಡುವೆ ಶಿವಮೊಗ್ಗದ ಬಿಜೆಪಿ ಕಾರ್ಯಕರ್ತನನ್ನು ಎನ್​ಐಎ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಈ ವೇಳೆ ಶಂಕಿತ ಉಗ್ರ ಅಬ್ದುಲ್ ಮಥೀನ್ ಅಹ್ಮದ್ ತಾಹಾ ತನ್ನ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು ಹಣ ವರ್ಗಾವಣೆ ನಡೆಸಿದ್ದಾಗಿ ಬಿಜೆಪಿ ಕಾರ್ಯಕರ್ತರ ಮಾಹಿತಿ ಹಂಚಿಕೊಂಡಿದ್ದರು. ಅಲ್ಲದೇ ಯಾವುದೇ ದಾಖಲೆಗಳನ್ನು ಬೇರೆಯವರಿಗೆ ನೀಡುವ ಮುನ್ನ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದರು. ಶಂಕಿತ ಅಬ್ದುಲ್ ಮಥೀನ್ ಅಹ್ಮದ್ ತಾಹಾ ಹಿಂದೂ ಯುವಕನ ಹೆಸರಿನಲ್ಲಿ ದಾಖಲೆ ಮಾಡಿಕೊಂಡು ಕೃತ್ಯ ಎಸಗಿದ್ದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

 

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *