Jagan Mohan Reddy: ಬಸ್​ ಯಾತ್ರೆಯಲ್ಲಿದ್ದ ಆಂಧ್ರ ಸಿಎಂ ಜಗನ್​ ಮೋಹನ್​ ರೆಡ್ಡಿ ಮೇಲೆ ಕಲ್ಲಿನಿಂದ ದಾಳಿ!

ವಿಜಯವಾಡ: ಆಂಧ್ರಪ್ರದೇಶ ವಿಧಾನಸಭೆಗೂ (Andhra Assembly Election) ಮುನ್ನ ಆಡಳಿತ ಪಕ್ಷ ವೈಎಸ್​ಆರ್​ಸಿಪಿ (YSRCP) ನಡೆಸುತ್ತಿರುವ “ಮೇಮಂತ ಸಿದ್ದಂ” ಬಸ್ ಯಾತ್ರೆ (Bus Yatra) ವೇಳೆ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ (Jagan Mohan Reddy) ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಕಲ್ಲಿನಿಂದ ಹಲ್ಲೆ ನಡೆಸಿದ್ದಾನೆ. ಜನರಿಗೆ ಕೈ ಬೀಸಿ ಶುಭಾಶಯ ತಿಳಿಸುತ್ತಿರುವ ವೇಳೆ ದಾಳಿ ನಡೆದಿದೆ. ವೇಗವಾಗಿದ ಬಂದ ಕಲ್ಲು ಸಿಎಂ ಜಗನ್ ಹಣೆಗೆ ಬಡಿದು ರಕ್ತ ಚಿಮ್ಮಿದೆ. ಕ್ಯಾಟ್ ಬಾಲ್ ನಿಂದ ದಾಳಿ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕಲ್ಲೇಟಿನಿಂದ ಸಿಎಂ ಜಗನ್ ಎಡ ಕಣ್ಣಿನ ಹುಬ್ಬಿಗೆ ತೀವ್ರ ಪೆಟ್ಟಾಗಿದೆ. ಸಿಎಂ ಜಗನ್ ಪಕ್ಕದಲ್ಲಿದ್ದ ಶಾಸಕ ವೆಲ್ಲಂಪಲ್ಲಿ ಶ್ರೀನಿವಾಸ್ ಅವರ ಎಡಗಣ್ಣಿಗೂ ಗಾಯವಾಗಿದೆ. ತಕ್ಷಣ ಸಿಎಂ ಜಗನ್‌ಗೆ ವೈದ್ಯರು ಬಸ್‌ನಲ್ಲಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಪ್ರಥಮ ಚಿಕಿತ್ಸೆ ಬಳಿಕ ಸಿಎಂ ಜಗನ್ ಮತ್ತೆ ಬಸ್ ಪ್ರಯಾಣ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ.

ಜಗನ್ ಕಣ್ಣಿಗೆ ಗಾಯ

ಜಂಟಿ ಕೃಷ್ಣಾ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ಅನಿರೀಕ್ಷಿತ ಘಟನೆಯೊಂದು ನಡೆದಿದೆ. ಜಗನ್ ಅವರ ಬಸ್ ಯಾತ್ರೆಯಲ್ಲಿ ಅವರನ್ನು ನೋಡಲು ಮತ್ತು ಸ್ವಾಗತಿಸಲು ಬಂದಿದ್ದ ಅಪಾರ ಜನಸ್ತೋಮದಲ್ಲಿ ಕೆಲವು ಜನ ಜಗನ್ ಅವರ ವಾಹನದ ಮೇಲೆ ಕಲ್ಲು ಎಸೆದರು. ಇದರಿಂದ ಸಿಎಂ ಜಗನ್​  ಎಡಗಣ್ಣಿನ ಹುಬ್ಬಿಗೆ ಪೆಟ್ಟಿ ಬಿದ್ದಿದೆ.   

2024ರ ಆಂಧ್ರಪ್ರದೇಶ ಚುನಾವಣೆಗೆ ಸಿದ್ಧವಾಗಿರುವ ಆಡಳಿತಾರೂಢ ವೈಸಿಪಿ ಮೇಮಂತ ಸಿದ್ದಂ ಎಂಬ ಹೆಸರಿನಲ್ಲಿ ಬಸ್ ಯಾತ್ರೆ ನಡೆಸುತ್ತಿದೆ. ಈ ಕಾರ್ಯಕ್ರಮದಲ್ಲಿ ಎಪಿ ಸಿಎಂ ಮತ್ತು ವೈಎಸ್‌ಆರ್‌ಸಿಪಿ ಅಧ್ಯಕ್ಷರು ಭಾಗವಹಿಸುತ್ತಿದ್ದಾರೆ. ರಾಜ್ಯಾದ್ಯಂತ  ಪ್ರಚಾರ ಮಾಡಲಾಗುತ್ತಿದೆ. ಚುನಾವಣಾ ಪ್ರಚಾರದ ಅಂಗವಾಗಿ ಶನಿವಾರ ಜಂಟಿ ಕೃಷ್ಣಾ ಜಿಲ್ಲೆಯಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಅನಿರೀಕ್ಷಿತ ಘಟನೆ ನಡೆದಿದೆ.

 

ಜಗನ್ ಅವರ ಬಸ್ ಯಾತ್ರೆಯಲ್ಲಿ ಅವರನ್ನು ನೋಡಲು ಮತ್ತು ಸ್ವಾಗತಿಸಲು ಬಂದಿದ್ದ ಅಪಾರ ಜನಸ್ತೋಮದಲ್ಲಿ ಕೆಲವು ಜನ ಜಗನ್ ಅವರ ವಾಹನದ ಮೇಲೆ ಕಲ್ಲು ಎಸೆದರು. ಸಿಎಂ ಜಗನ್‌ ಜೊತೆಗೆ ಪಕ್ಕದಲ್ಲಿದ್ದವರಿಂದ ಗಾಯವಾಗಿದೆ. ರಕ್ತಸ್ರಾವವಾಗುತ್ತಿದ್ದರಿಂದ ತಕ್ಷಣ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಗಾಯದ ಹೊರತಾಗಿಯೂ ಜಗನ್ ಯಾತ್ರೆಯನ್ನ  ಮುಂದುವರಿಸಿದ್ದಾರೆ. ಸಿಎಂ ಮೇಲೆ ಹಲ್ಲೆ ನಡೆದಾಗ ಮಾಜಿ ಸಚಿವ ವೆಲ್ಲಂಪಲ್ಲಿ ಶ್ರೀನಿವಾಸ್ ಕೂಡ ಬಸ್ ನಲ್ಲಿದ್ದರು. ಅವರಿಗೂ ಗಾಯವಾಗಿತ್ತು. ಸಿಎಂ ಭದ್ರತಾ ಸಿಬ್ಬಂದಿ ದಾಳಿಕೋರರ ವಿವರ ಹಾಗೂ ಫೋಟೋ ಸಂಗ್ರಹಿಸಲು ಆರಂಭಿಸಿದ್ದಾರೆ.

ಟಿಡಿಪಿ ಕಾರ್ಯಕರ್ತರ ಕೆಲಸ?

ಸಿಎಂ ಜಗನ್ ಮೇಲೆ ನಡೆದ ಹಲ್ಲೆ ವಿಷಯ ತಿಳಿದ ನಂತರ ವೈಸಿಪಿ ಪಡೆ ಇದು ಟಿಡಿಪಿ ಕಾರ್ಯಕರ್ತರ ದಾಳಿ ಎಂದು ಆರೋಪಿಸುತ್ತಿದೆ. ಮತ್ತೊಂದೆಡೆ ವಿಜಯವಾಡಕ್ಕೆ ಸಿಎಂ ಜಗನ್ ಆಗಮನವನ್ನು ಅಪಾರ ಸಂಖ್ಯೆಯಲ್ಲಿ ಜನರು ಸ್ವಾಗತಿಸುತ್ತಿದ್ದಾರೆ. ವಿಜಯವಾಡ ನಗರದಲ್ಲಿ ಮೂರುವರೆ ಗಂಟೆಗೂ ಹೆಚ್ಚು ಕಾಲ ಜಗನ್ ರೋಡ್ ಶೋ ಮುಂದುವರಿದಿದೆ. ಸಿಎಂ ಜಗನ್‌ಗೆ ಬರುತ್ತಿರುವ ಜನಬೆಂಬಲವನ್ನು ಸಹಿಸಲಾಗದೆ ಟಿಡಿಪಿ ಬಣಗಳು ದಾಳಿಗೆ ಸಿದ್ಧವಾಗಿವೆ ಎಂದು ವಿಜಯವಾಡ ವೈಎಸ್‌ಆರ್‌ಸಿಪಿ ನಾಯಕರು ಹೇಳಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *