Shiva Rajkumar: ಅಣ್ಣಾವ್ರ ದೊಡ್ಮಗ ಶಿವಣ್ಣ ಬಳಿ ಇರುವ ಆಸ್ತಿ ಎಷ್ಟು? ಗೀತಾ ಶಿವರಾಜ್​ಕುಮಾರ್​ ಸಲ್ಲಿಸಿದ ಅಫಿಡವಿಟ್​​ನಲ್ಲಿದೆ ಪಕ್ಕಾ ಲೆಕ್ಕ!

ವರನಟ ಡಾ. ರಾಜ್​ಕುಮಾರ್ ದೊಡ್ಮಗ, ಸ್ಯಾಂಡಲ್​ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ (Shiva Rajkumar) ಕರುನಾಡಿನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟರಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಇತ್ತೀಚಿಗೆ ಟಾಲಿವುಡ್​, ಕಾಲಿವುಡ್​ ನಲ್ಲೂ ಶಿವಣ್ಣಗೆ (Shivanna) ಬೇಡಿಕೆ ಹೆಚ್ಚಿದೆ. ಸದ್ಯ ಶಿವಣ್ಣ ಸಿನಿಮಾ ಕೆಲಸಕ್ಕೆ ಬ್ರೇಕ್ ಕೊಟ್ಟು ಲೋಕಸಭೆ ಚುನಾವಣೆ (Lok Sabha Election) ಪ್ರಚಾರದ ಅಖಾಡಕ್ಕೆ ಧುಮುಕಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಶಿವಣ್ಣ ಪತ್ನಿ ಗೀತಾ ಶಿವರಾಜ್​****ಕುಮಾರ್ (Geetha Shivarajkumar)​, ಶಿವಮೊಗ್ಗದಲ್ಲಿ ಅಫಿಡವಿಟ್ (Affidavit) ಸಲ್ಲಿಕೆ ಮಾಡಿದ್ದಾರೆ. ಈ ಅಫಿಡವಿಟ್​​ನಲ್ಲಿ ಶಿವಣ್ಣ ಆಸ್ತಿ ಬಗ್ಗೆಯೂ ಮಾಹಿತಿ ಇದೆ. ಆ ಬಗ್ಗೆ ಇಲ್ಲಿದೆ ವಿವರ.

ಎಂಎಸ್ ಪುಟ್ಟಸ್ವಾಮಿ ಹೆಸರಲ್ಲಿದೆ ಅದಾಯದ ಲೆಕ್ಕ!

ಪ್ರತಿ ಸಿನಿಮಾಗೂ ಕೋಟಿ ಕೋಟಿ ಸಂಭಾವನೆ ಪಡೆಯುವ ನಟ ಶಿವರಾಜ್​ಕುಮಾರ್​ ಅವರ ಆಸ್ತಿ ಎಷ್ಟಿದೆ? ಬ್ಯಾಂಕ್ ಬ್ಯಾಲೆನ್ಸ್, ಜೊತೆಗೆ ಸಾಲ ಎಷ್ಟಿದೆ ಎಂದು ತಿಳಿದುಕೊಳ್ಳುವ ಕುತೂಹಲ ಕೂಡ ಇದ್ದೆ ಇರುತ್ತೆ.  ಶಿವರಾಜ್​ಕುಮಾರ್ ಅವರ ನಿಜವಾದ ಹೆಸರು ಎಂಎಸ್ ಪುಟ್ಟಸ್ವಾಮಿ, ಈ ಹೆಸರಿನಲ್ಲಿ ಆದಾಯದ ದಾಖಲೆಗಳನ್ನು ಕೂಡ ನೀಡಲಾಗಿದೆ.

News18

ಶಿವಣ್ಣ ಹೆಸರಲ್ಲಿರುವ ಆಸ್ತಿ ಎಷ್ಟು?

ಬ್ಯಾಂಕ್ ಬ್ಯಾಲೆನ್ಸ್ ಬಗ್ಗೆ ಕೂಡ ತಿಳಿಸಲಾಗಿದೆ. ಶಿವರಾಜ್​ಕುಮಾರ್ ಬಳಿ ಬ್ಯಾಂಕ್ ಬ್ಯಾಲೆನ್ಸ್ 4.82 ಕೋಟಿ ರೂಪಾಯಿ ಇದೆ. ಗೀತಾ ಅವರ ಬ್ಯಾಂಕ್ ಬ್ಯಾಲೆನ್ಸ್ 64 ಲಕ್ಷ ರೂಪಾಯಿ ಇದೆ. ಶಿವಣ್ಣ ಬಳಿ 18 ಕೋಟಿ ರೂಪಾಯಿ ಹಾಗೂ ಗೀತಾ ಬಳಿ 5 ಕೋಟಿ ರೂಪಾಯಿ ಚರಾಸ್ತಿ ಇದೆ. ಸ್ಥಿರಾಸ್ತಿ ವಿಚಾರಕ್ಕೆ ಬಂದರೆ ಶಿವಣ್ಣ ಬಳಿ 31 ಕೋಟಿ ಬೆಲೆ ಬಾಳುವ ಸ್ಥಿರಾಸ್ತಿ ಇದೆ. ಗೀತಾ ಬಳಿ 34 ಕೋಟಿ ರೂಪಾಯಿ ಸ್ಥಿರಾಸ್ತಿ ಇದೆ.

2022-2023 ಆರ್ಥಿಕ ವರ್ಷದಲ್ಲಿ 2,97,27,100 ರೂಪಾಯಿ ಆದಾಯ ಹೊಂದಿದ್ದಾರೆ.  ಗೀತಾ ಶಿವರಾಜ್​ ಕುಮಾರ್ ಅವರು 1,48,63,750 ಕೋಟಿ ರೂಪಾಯಿ ಆದಾಯ ಹೊಂದಿದ್ದಾರೆ. ತಮ್ಮ ಬಳಿ ಇರುವ ಹಣದ ಬಗ್ಗೆ ಕೂಡ ತಿಳಿಸಿದ್ದಾರೆ. ಶಿವಣ್ಣ ಬಳಿ 22,58,338 ರೂಪಾಯಿ ಕ್ಯಾಶ್ ಇದೆ. ಗೀತಾ ಶಿವರಾಕ್​ಕುಮಾರ್ಅ ಬಳಿ 3 ಲಕ್ಷ ರೂಪಾಯಿ ಕ್ಯಾಶ್ ಇದೆ.

ಶಿವಣ್ಣ ಹಾಗೂ ಗೀತಾ ಮೇಲಿರುವ ಸಾಲದ ಹೊರೆ ಎಷ್ಟು?

ಶಿವಣ್ಣ ಹೆಸರಲ್ಲಿ ಸಾಲ ಕೂಡ ಕೋಟಿ ಕೋಟಿ ಇದೆ. ಶಿವಣ್ಣನಿಗೆ 17 ಕೋಟಿ ರೂಪಾಯಿ ಸಾಲ ಬಾಕಿ ಇದೆ. ಇದರಲ್ಲಿ ಸಾಲ 3 ಕೋಟಿ ರೂಪಾಯಿ, ಅಡ್ವಾನ್ಸ್ 13.6 ಕೋಟಿ ರೂಪಾಯಿ. ಗೀತಾ ಹೆಸರಲ್ಲಿ 7 ಕೋಟಿ ರೂಪಾಯಿ ಸಾಲ ಕೂಡ ಇದೆ. ಸಿನಿ ಮುತ್ತು ಸರ್ವಿಸ್ ​ಗೆ 1.64 ಕೋಟಿ ರೂಪಾಯಿ, ಗೀತಾ ಪಿಕ್ಚರ್ಸ್​ಗೆ 6 ಕೋಟಿ ರೂಪಾಯಿ, ಧ್ರುವಕುಮಾರ್​ಗೆ 2.30 ಕೋಟಿ ರೂಪಾಯಿ ಹಾಗೂ ಇತರರಿಗೆ 2.13 ಕೋಟಿ ರೂಪಾಯಿ ಸಾಲ ನೀಡಿದ್ದಾರೆ ಎಂದು ಗೀತಾ ಸಲ್ಲಿಸಿರು ಅಫಿಡವಿಟ್​​ನಲ್ಲಿ ಮಾಹಿತಿ ನೀಡಲಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *