ಆಧಾರ ಕಾರ್ಡ್ ನೋಂದಣಿ ಪ್ರಕ್ರಿಯೆಯನ್ನು ಖಾಸಗಿಯವರಿಗೂ ಕೊಡಲು ಆಗ್ರಹ
ಕಲಬುರಗಿ: ಆಧಾರ ಕಾರ್ಡ್ ನೋಂದಣಿ ಪ್ರಕ್ರಿಯೆಯನ್ನು ಖಾಸಗಿ ಆಧಾರ ಸೆಂಟರ್ ಗಳ ಮೂಲಕ ನೆರವೇರಿಸುವ ಕಾರ್ಯ ಕೈಗೊಳ್ಳುವ ಮೂಲಕ ಸಾರ್ವಜನಿಕರಿಗೆ ಅನೂಕುಲ ಕಲ್ಪಿಸಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ಜಿಲ್ಲಾಧ್ಯಕ್ಷರಾದ ಆನಂದ ತೆಗನೂರ ರವರು ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಅವರು , ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಆಧಾರ ಕಾರ್ಡ್ ಸಹ ಒಂದು. ಎಲ್ಲಾ ಕೆಲಸ ಕಾರ್ಯಗಳಿಗೆ ಆಧಾರ ಕಾರ್ಡ್ ನ್ನು ಕೇಂದ್ರ ಸರಕಾರವು ಕಡ್ಡಾಯಗೊಳಿಸಿದ್ದು ಆದರೆ ಆಧಾರ ಕಾರ್ಡ ನೊಂದಣಿ ಮಾಹಿತಿ ಅಪಡೇಟ್ ಮಾಡುವುದು ಸೇರಿದಂತೆ ವಿವಿಧ ಪ್ರಕ್ರಿಯೆ ಕೈಗೊಳ್ಳಲು ಜನರು ದಿನಂಪ್ರತಿ ತಮ್ಮ ದಿನನಿತ್ಯದ ಕೆಲಸ ಕಾಯರ್ಗಳನ್ನು ಬಿಟ್ಟು ಆಧಾರ ಕಾರ್ಡ್ ಪಡೆದುಕೊಳ್ಳಲು ಗಂಟೆಗಟ್ಟಲೆ ನಿಲ್ಲಬೇಕಾದ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬಡ ಕೂಲಿಕಾರರು ಕೂಲಿ ಬಿಟ್ಟು ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಈ ಮೊದಲಿನಂತೆ ಖಾಸಗಿ ಆಧಾರ ಕಾರ್ಡ್ ಸೆಂಟರ್ ಮೂಲಕ ಆಧಾರ ಕಾರ್ಡ ವಿತರಣೆ ಕಾರ್ಯ ನಡೆಯಬೇಕಾಗಿದೆ. ಸದ್ಯ ಸರಕಾರವು ತಹಶೀಲ್ದಾರ ಕಛೇರಿ , ಕಚೇರಿ ಹಾಗೂ ಬ್ಯಾಂಕುಗಳಲ್ಲಿ ಮಾತ್ರ ಆಧಾರ ಕಾರ್ಡ್ ಸೆಂಟರ್ ಗಳನ್ನು ಮಾಡಿದ್ದು , ಇದರಿಂದ ಮಧ್ಯವರ್ತಿಗಳ ಹಾವಳಿಯಿಂದ ಹೆಚ್ಚಿನ ಪ್ರಮಾಣ ಹಣವನ್ನು ಪಡೆದುಕೊಂಡು ಆಧಾರ ಕಾರ್ಡ್ ಮಾಡಿಸುತ್ತಿದ್ದು ಇದರ ಜನರಿಗೆ ನೂರೆಂಟು ಸಮಸ್ಯೆಗಳನ್ನು ಎದುರಿಸುವ ಪ್ರಸಂಗ ಉದ್ಭವವಾಗಿದೆ. ಮಧ್ಯವರ್ತಿಗಳು ಒಂದು ಹೊಸ ಆಧಾರ ಕಾರ್ಡ್ ಅಥವಾ ಆಧಾರ ಕಾರ್ಡ್ ಅಪಲೋಡ್ ಮಾಡಿಸುವುದಕ್ಕೆ 500 ರಿಂದ 800 ರೂ.ವರಗೆ ಹಣವನ್ನು ಪಡೆಯುತ್ತಿರುವುದು ಕಂಡು ಬರುತ್ತಿದೆ. ಜಿಲ್ಲಾಡಳಿತ ಕೂಡಲೇ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿ ಕೂಡಲೇ ಈ ಮೊದಲಿನಂತೆ ಖಾಸಗಿಯಾಗಿ ಆಧಾರ ಕಾರ್ಡ್ ಸೆಂಟರ್ ಆರಂಭಿಸುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.