Karnataka Lok sabha Election: 14 ಕ್ಷೇತ್ರದಲ್ಲಿ ಇಂದು ಬಹಿರಂಗ ಪ್ರಚಾರಕ್ಕೆ ತೆರೆ; ಇಂದಿನಿಂದ 2 ದಿನ ಮದ್ಯ ಬಂದ್

ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಸಮರದ ಅಬ್ಬರ (Lok Sabha phase 1) ಬಹಿರಂಗ ಪ್ರಚಾರಕ್ಕೆ (Open Campaign) ಇಂದು ತೆರೆ ಬೀಳಲಿದೆ. ಹೀಗಾಗಿ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳನ್ನು ಹೊರತುಪಡಿಸಿ ಇನ್ನುಳಿದ ಮುಖಂಡರು (Political Leaders) ಕ್ಷೇತ್ರ ಬಿಟ್ಟು ತೆರಳಲಿದ್ದಾರೆ. ಇದೇ 26ರಂದು ರಾಜ್ಯಾದ ಮೊದಲ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ (Voting) ನಡೆಯಲಿದ್ದು, ಮತದಾನ ಮುಕ್ತಾಯಗೊಳ್ಳುವ 48 ಗಂಟೆಗಳ ಮುಂಚೆ ಬಹಿರಂಗ ಪ್ರಚಾರ ಅಂತ್ಯಗೊಳಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಸಂಜೆ 6ಕ್ಕೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಆದರೆ ಅಭ್ಯರ್ಥಿಗಳು ಮಾತ್ರ ನಾಳೆ ಮನೆ ಮನೆ ಪ್ರಚಾರ (Door to Door Campaign) ಮಾಡಬಹುದಾಗಿದೆ.

ಇಂದಿನಿಂದ 2 ದಿನ ಮದ್ಯ ಬಂದ್

ಏಪ್ರಿಲ್ 26ಕ್ಕೆ ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ ಮೊದಲನೆ ಹಂತದ ಮತದಾನ ನಡೆಯಲಿದೆ. ಈ ಹಿನ್ನೆಲೆ ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯದ 14 ಕ್ಷೇತ್ರಗಳಲ್ಲಿ ಇಂದಿನಿಂದ ಮದ್ಯ ಬಂದ್ ಮಾಡಲಾಗಿದೆ. ಇಂದು ಸಂಜೆ 5 ಗಂಟೆ 59 ನಿಮಿಷದಿಂದ ಡ್ರೈ ಡೇ ಶುರುವಾಗಲಿದ್ದು ಶುಕ್ರವಾರದವರೆಗು ಮದ್ಯ ಮಾರಾಟಕ್ಕೆ ಅವಕಾಶ ಇಲ್ಲ. ಹೋಟೆಲ್ ಓಪನ್ ಮಾಡಬಹುದು ಆದ್ರೆ ಲಿಕ್ಕರ್ ಸೇಲ್ ಮಾಡೊ ಹಾಗಿಲ್ಲ ಎಂದು ಆದೇಶ ಹೊರಡಿಸಿದ್ದಾರೆ.

ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆಗೆ ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದು, ಇಂದಿನಿಂದ ಉತ್ತರದತ್ತ ಎಲ್ಲಾ ಪಕ್ಷದ ನಾಯಕರು ಮುಖ ಮಾಡಲಿದ್ದಾರೆ. ಏಪ್ರಿಲ್ 25 ರಿಂದ ಮೇ‌3 ರವರೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಸಿಎಂ ಪ್ರಚಾರ ನಡೆಸಲಿದ್ದು, ಎರಡನೇ ಹಂತದ ಮತದಾನಕ್ಕೆ ಮುನ್ನ ಅಂದರೆ ಮೇ 5 ರಂದು ಎರಡನೇ ಹಂತದ‌ ಚುನಾವಣಾ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ.

ಮೊದಲ ಹಂತದ 14 ಕ್ಷೇತ್ರಗಳಲ್ಲಿ ಅಬ್ಬರದ ಪ್ರಚಾರ ನಡೆಸಿರುವ ಸಿಎಂ ಸಿದ್ದರಾಮಯ್ಯ ಅವರು, ಉತ್ತರ ಕರ್ನಾಟಕ ಭಾಗದಲ್ಲೂ 12 ದಿನಗಳ ಕಾಲ ನಿರಂತರ ಪ್ರಚಾರಕ್ಕೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಆಯಾ ಭಾಗದ ಪ್ರಮುಖ ಸತೀಶ್ ಜಾರಕಿಹೊಳಿ , ಎಂಬಿ ಪಾಟೀಲ್, ಈಶ್ವರ್ ಖಂಡ್ರೆ ಸೇರಿ ಕೈ ಪ್ರಮುಖರ ಜೊತೆಗೆ ಜೊತೆಗೆ ಸಿಎಂ, ಡಿಸಿಎಂ ಪ್ರಚಾರ ನಡೆಸಲಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಸ್ಥಳೀಯ ನಾಯಕರ ಜೊತೆ ಹೆಚ್ಚು ಪ್ರಚಾರ ಮಾಡಿದ್ದ ಸಿಎಂ, ಕೇಸರಿ ಪಡೆಯ ಭದ್ರ ಕೋಟೆ ಉತ್ತರ ಕರ್ನಾಟಕ ಭೇದಿಸಲು ರಣತಂತ್ರ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಪ್ರಚಾರಕ್ಕೆ ಹೆಚ್ಚು ಒತ್ತು ಕೊಡಲು ಕೈ ಅಭ್ಯರ್ಥಿಗಳ ಸಿದ್ದತೆ ನಡೆಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *