Rahul Gandhi: ಪ್ರಜ್ವಲ್ ರೇವಣ್ಣ ಒಬ್ಬ ಮಾಸ್ ರೇಪಿಸ್ಟ್, ಈತನ ಪರವಾಗಿ ಮೋದಿ ಪ್ರಚಾರ ಮಾಡ್ತಾರೆ: ರಾಹುಲ್ ಗಾಂಧಿ
ಶಿವಮೊಗ್ಗ: ಕಾಂಗ್ರೆಸ್ ಸಮಾವೇಶದಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (Rahul Gandhi) ತಮ್ಮ ಭಾಷಣದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ (Prajwal Revanna Pen Drive) ಉಲ್ಲೇಖಿಸಿ ಪ್ರಧಾನಿ ಮೋದಿ (PM Narendra Modi) ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಜ್ವಲ್ ರೇವಣ್ಣ (Prajwal Revanna) 400ಕ್ಕೂ ಅಧಿಕ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿಯವರು, ಪ್ರಜ್ವಲ್ ಬಗ್ಗೆ ಸಮರ್ಥನೆ ಮಾಡಿಕೊಂಡು, ಅವರಿಗೆ ಮತ ಹಾಕಿದ್ರೆ ನನಗೆ ವೋಟ್ ಹಾಕಿದಂತೆ ಅಂತಿದ್ದಾರೆ. ಪ್ರಜ್ವಲ್ ಮಾಡಿರೋದರ ಬಗ್ಗೆ ಪ್ರಧಾನಿಗಳಿಗೂ ಗೊತ್ತಿತ್ತು. ಬಿಜೆಪಿಯ (BJP Leaders) ಪ್ರತಿ ನಾಯಕರಿಗೂ ಗೊತ್ತಿತ್ತು. ಪ್ರಜ್ವಲ್ ರೇವಣ್ಣ ಒಬ್ಬ ಮಾಸ್ ರೇಪಿಸ್ಟ್ ಎಂದು ರಾಹುಲ್ ಗಾಂಧಿ ಗುಡುಗಿದರು.
ಪ್ರಜ್ವಲ್ ಪರವಾಗಿ ಒಂದೇ ವೇದಿಕೆಯಲ್ಲಿ ಮೋದಿ ಪ್ರಚಾರ ಮಾಡಿದ್ದಾರೆ. ಅದಕ್ಕಾಗಿ ದೇಶದ ಮಹಿಳೆಯರಲ್ಲಿ ಮೋದಿ, ಗೃಹ ಸಚಿವ ಅಮಿತ್ ಶಾ ಎಲ್ಲಾ ಮಹಿಳೆಯರ ಮುಂದೆ ತಲೆಬಾಗಿ ಕ್ಷಮೆ ಕೇಳಬೇಕು ಎಂದು ರಾಹುಲ್ ಗಾಂಧಿ ಗುಡುಗಿದರು.
ಮಾಸ್ ರೇಪಿಸ್ಟ್ ಪರ ಕ್ಯಾಂಪೇನ್
ಇಂತಹ ಘಟನೆಯನ್ನು ನಾವು ಇಡೀ ಜಗತ್ತಲ್ಲೇ ನೋಡಿಲ್ಲ. ಇಡೀ ಪ್ರಪಂಚದಲ್ಲಿ ಚರ್ಚೆ ಆಗುತ್ತಿದೆ. ಮಾಸ್ ರೇಪಿಸ್ಟ್ ಜೊತೆ ಮೋದಿ ವೇದಿಕೆ ಹಂಚಿಕೊಂಡು ಮತ ಯಾಚನೆ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಮಾಸ್ ರೇಪಿಸ್ಟ್ಗೆ ಮೋದಿಯ ಗ್ಯಾರಂಟಿ
ಮಾಸ್ ರೇಪಿಸ್ಟ್ ಪರ ಮೋದಿ ಪ್ರಚಾರ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಮೋದಿಯವರ ಗ್ಯಾರಂಟಿ, ಒಬ್ಬ ಮಾಸ್ ರೇಪಿಸ್ಟ್ಗೆ ರೇಪ್ನ ಗ್ಯಾರಂಟಿ. ದೇಶದಿಂದ ಅವನನ್ನು ಹೊರಗೆ ಹೋಗಲು ಮೋದಿ ಅವಕಾಶ ಕೊಟ್ಟಿದ್ದಾರೆ. ಅವರ ಬಳಿ ಸಿಬಿಐ ಸೇರಿ ಎಲ್ಲವೂ ಅಧಿಕಾರ ಇದೆ. ಆದರೂ ಇಂತಹ ರೇಪಿಸ್ಟ್ ನನ್ನು ದೇಶದಿಂದ ಹೊರಗೆ ಹೋಗಲು ಬಿಟ್ಟಿದ್ದಾರೆ ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದರು.
ಬಿಜೆಪಿಯಿಂದ ಪ್ರಜ್ವಲ್ ರೇವಣ್ಣಗೆ ಸಹಾಯ
ಕಾಂಗ್ರೆಸ್ ನಿಂದ ಇಂತಹವರ ವಿರುದ್ಧ ಕ್ರಮ ಸಾಧ್ಯ. ಅದಕ್ಕಾಗಿ ಇವಾಗ ನೀವು ಒಂದು ತೀರ್ಮಾನ ಮಾಡಿ ನಮಗೆ ಆಶೀರ್ವಾದ ಮಾಡಬೇಕು. ಮಾಸ್ ರೇಪಿಸ್ಟ್ ವಿದೇಶಕ್ಕೆ ಒಡಿಹೋಗಲು ಬಿಜೆಪಿಯವರೇ ಸಹಾಯ ಮಾಡಿದ್ದಾರೆ ಎಂದು ಆರೋಪಿಸಿದರು.
ಸಂವಿಧಾನ ಉಳಿಸಲು ಕಾಂಗ್ರೆಸ್ಗೆ ಮತ
ಬಿಜೆಪಿಯವರು ಸಂವಿಧಾನವನ್ನು ತೆಗೆಯೋದಕ್ಕಾಗಿ ಚುನಾವಣೆ ನಡೆಸುತ್ತಿದ್ದಾರೆ. ಇವತ್ತು ಅವರ ಕೈಯಲ್ಲಿರುವ ಸಂವಿಧಾನವನ್ನು ಕಾಂಗ್ರೆಸ್ ರಕ್ಷಣೆ ಮಾಡ್ತಿದೆ. ಅಂಬೇಡ್ಕರ್ ಅವರಿಗೆ ನಾವು ನಿಜವಾಗಿಯೂ ಧನ್ಯವಾದಗಳನ್ನು ಹೇಳಬೇಕಾಗುತ್ತದೆ. ಸಂವಿಧಾನದಲ್ಲಿ ಸಮಾನತೆ ತರಬೇಕೆಂದು ಬರೆದಿದೆ. ಈ ಸಂವಿಧಾನದಲ್ಲಿ ಮೀಸಲಾತಿಯ ಬಗ್ಗೆಯೂ ಬರೆದಿದ್ದಾರೆ. ಈ ಎರಡು ವಿಷಯಗಳನ್ನು ಬಿಜೆಪಿಯವರು ತೆಗೆಯೋಕೆ ಹೊರಟಿದ್ದಾರೆ. ಬಿಜೆಪಿ ಅಧ್ಯಕ್ಷರು ಸಂವಿಧಾನ ಬೇಡ ಎಂದು ಹೇಳಿದ್ದಾರೆ.