Congress ಅಧಿಕಾರಕ್ಕೆ ಬಂದ್ರೆ ಅಯೋಧ್ಯೆ ತೀರ್ಪನ್ನು ರದ್ದುಗೊಳಿಸುತ್ತಾರೆ, ಆಪ್ತರ ಬಳಿ ರಾಹುಲ್ ಗಾಂಧಿ ಹೇಳಿದ್ದಾರೆ: ಆಚಾರ್ಯ
ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ( Ram Mandir) ನಿರ್ಮಾಣವನ್ನು ಕಾಂಗ್ರೆಸ್ (Congress) ವಿರೋಧಿಸುತ್ತಲೇ ಬಂದಿದೆ. ಜೊತೆಗೆ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸುಪ್ರೀಂ ಕೋರ್ಟ್ನ ತೀರ್ಪುನ್ನು ರದ್ದುಗೊಳಿಸುತ್ತಾರೆ ಎಂದು ‘ಕೈ’ ನಾಯಕ ರಾಹುಲ್ ಗಾಂಧಿ ( Rahul Gandhi) ಆಪ್ತರ ಬಳಿ ಹೇಳಿದ್ದಾರಂತೆ. ಇದನ್ನು ಕಾಂಗ್ರೆಸ್ನ ಮಾಜಿ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಬಹಿರಂಗಪಡಿಸಿದ್ದಾರೆ. ರಾಜೀವ್ ಗಾಂಧಿ ಶಾ ಬಾನೋ ನಿರ್ಧಾರವನ್ನು ರದ್ದುಗೊಳಿಸಿದಂತೆಯೇ ರಾಮಮಂದಿರದ ಕುರಿತು ನ್ಯಾಯಾಲಯದ ತೀರ್ಪು ಬದಲಾಗಲಿದೆ ಅಂತ ಹೇಳಿದ್ದಾರೆ ಎಂದು ಆಚಾರ್ಯ ಅವರು ಹೇಳಿಕೆ ನೀಡಿದ್ದಾರೆ.
ಪ್ರಮೋದ್ ಕೃಷ್ಣಂ ಹೇಳಿದ್ದೇನು?
ರಾಮ ಮಂದಿರದ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ಬಂ ನಂತರ ರಾಹುಲ್ ಗಾಂಧಿ ಅವರು ತಮ್ಮ ಆಪ್ತರೊಂದಿಗೆ ಸಭೆ ನಡೆಸಿದರು. ಕಾಂಗ್ರೆಸ್ ಸರ್ಕಾರ ರಚನೆಯಾದರೆ ಈ ನಿರ್ಧಾರವನ್ನು ರದ್ದುಪಡಿಸುತ್ತದೆ ಎಂದು ಕಾಂಗ್ರೆಸ್ ನಾಯಕ ಹೇಳಿದರು.
ನಾನು ಕಾಂಗ್ರೆಸ್ನಲ್ಲಿ 32 ವರ್ಷಗಳಿಗಿಂತ ಹೆಚ್ಚು ಕಾಲ ಕಳೆದಿದ್ದೇನೆ. ರಾಮಮಂದಿರ ನಿರ್ಧಾರ ಬಂದಾಗ, ರಾಹುಲ್ ಗಾಂಧಿ ಅವರು ತಮ್ಮ ಆಪ್ತರೊಂದಿಗೆ ಸಭೆ ನಡೆಸಿದರು. ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ ಅವರು ಸೂಪರ್ ಪವರ್ ಆಯೋಗವನ್ನು ರಚಿಸುತ್ತಾರೆ. ರಾಮಮಂದಿರ ನಿರ್ಧಾರವನ್ನು ರದ್ದುಗೊಳಿಸಲಾಗುವುದು ಎಂದು ಹೇಳಿದರು. ರಾಜೀವ್ ಗಾಂಧಿ ಶಾ ಬಾನೋ ನಿರ್ಧಾರವನ್ನು ರದ್ದುಗೊಳಿಸಿದಂತೆಯೇ ಮಾಡೋಣ ಎಂದು ರಾಹುಲ್ ಗಾಂಧಿ ಹೇಳಿದ್ದಾರೆಂದು ಆಚಾರ್ಯ ಹೇಳಿಕೆ ನೀಡಿದ್ದಾರೆ.
ರಾಮಮಂದಿರ ನಿರ್ಮಾಣದ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು
2019 ರ ನವೆಂಬರ್ನಲ್ಲಿ ಸುಪ್ರೀಂ ಕೋರ್ಟ್ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅವಕಾಶ ನೀಡುವ ಮಹತ್ವದ ತೀರ್ಪು ನೀಡಿತು ಆ ಮೂಲಕ ದಶಕಗಳ ಕಾಲದ ವಿವಾದ ಕೊನೆಗೊಂಡಿತು. ರಾಮಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಈ ವರ್ಷದ ಜನವರಿ 22 ರಂದು ಅವರ ಸಮ್ಮುಖದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಾಯಿತು. ನಿನ್ನೆಯಷ್ಟೇ ಮೋದಿ ಅವರು 2ನೇ ಬಾರಿಗೆ ರಾಮಮಂದಿರಕ್ಕೆ ಭೇಟಿ ನೀಡಿ ನಂತರ ಅಯೋಧ್ಯೆಯಲ್ಲಿ ಮೆಗಾ ರೋಡ್ ಶೋ ನಡೆಸಿದರು.