ʼಚುನಾವಣೆಯಲ್ಲಿ ಗೆದ್ದರೆ ಬಾಲಿವುಡ್ಗೆ ಗುಡ್ಬೈ ಹೇಳುತ್ತೇನೆʼ ನಟಿ ಕಂಗನಾ ರಣಾವತ್ ಮಹತ್ವದ ನಿರ್ಧಾರ!!
Bollywood Actress: ಬಾಲಿವುಡ್ ನಟಿ ಕಂಗನಾ ರಣಾವತ್ ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಆಕೆಯ ತವರು ಹಿಮಾಚಲ ಪ್ರದೇಶದಿಂದ ಬಿಜೆಪಿಯಿಂದ ನಾಮನಿರ್ದೇಶನಗೊಂಡಿದ್ದಾರೆ. ಸದ್ಯ ಕಂಗನಾ ತನ್ನ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಅವರು ಗೆಲ್ಲುತ್ತಾರೆ ಎಂದು ಹಲವರು ನಂಬಿದ್ದಾರೆ. ಆದರೆ ಅಷ್ಟರಲ್ಲಿ ಕಂಗನಾ ಕೂಡ ದೊಡ್ಡ ಘೋಷಣೆ ಮಾಡಿದ್ದಾರೆ. ಕಂಗನಾ ವಿರುದ್ಧ ಮುನಿಸಿಕೊಂಡಿರುವ ಕಾಂಗ್ರೆಸ್ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದರೆ ಕಂಗನಾ ಏನು ಮಾಡುತ್ತಾರೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಇದೀಗ ಕಂಗನಾ ವಿವರವಾಗಿ ಉತ್ತರ ನೀಡಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಗೆದ್ದರೆ ಬಾಲಿವುಡ್ನಿಂದ ಹೊರಬರುವುದಾಗಿ ಕಂಗನಾ ಘೋಷಿಸಿದ್ದಾರೆ. ಆಜ್ ತಕ್ ಗೆ ನೀಡಿದ ಸಂದರ್ಶನದಲ್ಲಿ ಕಂಗನಾ ಈ ದೊಡ್ಡ ಘೋಷಣೆ ಮಾಡಿದ್ದಾರೆ. ಹಾಗಾಗಿ ಕಂಗನಾ ಲೋಕಸಭೆ ಕ್ಷೇತ್ರಕ್ಕೆ ಕಾಲಿಟ್ಟರೆ ಬಾಲಿವುಡ್ ಕ್ಷೇತ್ರವನ್ನೇ ತೊರೆಯುವುದಾಗಿ ಹೇಳಿದ್ದಾರೆ.
ನಟಿ ಕಂಗನಾಗೆ ಸಿನಿಮಾ ಮತ್ತು ರಾಜಕೀಯ ಎರಡನ್ನೂ ಏಕಕಾಲದಲ್ಲಿ ಹೇಗೆ ನಿರ್ವಹಿಸುತ್ತೀರಿ ಎಂದು ಕೇಳಲಾಯಿತು. “ಜನರಿಗೆ ನನ್ನ ಅವಶ್ಯಕತೆ ಇದೆ ಎಂದು ನನಗೆ ಅನಿಸಿದರೆ, ನಾನು ಆ ದಿಕ್ಕಿನಲ್ಲಿ ಹೋಗುತ್ತೇನೆ.. ರಾಜಕೀಯಕ್ಕೆ ಹೋಗಬೇಡಿ ಅಂತ ಅನೇಕ ನಿರ್ದೇಶಕರು ಹೇಳಿದ್ದರು. ಆದರೆ ನಾನು ಜನರ ವಿಶ್ವಾಸ ಗಳಿಸಲು ಬಯಸುತ್ತೇನೆ. ನನ್ನ ವೈಯುಕ್ತಿಕ ಮಹತ್ವಾಕಾಂಕ್ಷೆಗಳಿಂದ ಜನರು ತೊಂದರೆ ಅನುಭವಿಸುವುದು ಸರಿಯಲ್ಲ. ಹಾಗಾಗಿ ಜನರೊಂದಿಗೆ ಸಂಪರ್ಕ ಸಾಧಿಸಲು ನನಗೆ ಅವಕಾಶ ಸಿಕ್ಕರೆ, ನಾನು ಅದನ್ನು ಸದುಪಯೋಗಪಡಿಸಿಕೊಳ್ಳುತ್ತೇನೆ” ಎಂದು ನಟಿ ಹೇಳಿಕೊಂಡಿದ್ದಾರೆ..
ರಾಜಕೀಯಕ್ಕೂ ಸಿನಿಮಾಗೂ ಏನು ವ್ಯತ್ಯಾಸ?
ಈ ಬಗ್ಗೆ ಮಾತನಾಡಿದ ಕಂಗನಾ, ಸಿನಿಮಾ ಜಗತ್ತು ನಕಲಿ, ಆದರೆ ರಾಜಕೀಯವೇ ನಿಜವಾದ ಜಗತ್ತು. ಸಿನಿಮಾದ ವಾತಾವರಣವೇ ಬೇರೆ. ಜನರನ್ನು ಆಕರ್ಷಿಸಲು ಅನೇಕ ದೃಶ್ಯಗಳನ್ನು ಚಿತ್ರಿಕರೀಸುತ್ತೇವೆ. ಆದರೆ ರಾಜಕೀಯದಲ್ಲಿ ಹಾಗಲ್ಲ. ಇಲ್ಲಿ ಜನರ ನಂಬಿಕೆ ನಿಜವಾಗಬೇಕು. ನಾನು ಈ ಕ್ಷೇತ್ರಕ್ಕೆ ಹೊಸಬಳು ಹಾಗಾಗಿ ಇಲ್ಲಿಂದ ಅನೇಕ ವಿಷಯಗಳನ್ನು ಕಲಿಯಲು ಬಯಸುತ್ತೇನೆ” ಎಂದು ಹೇಳಿದ್ದಾರೆ..