MLA Son: ಕ್ಯೂನಲ್ಲಿ ಬರೋದಕ್ಕೆ ಹೇಳಿದ್ದಕ್ಕೆ ಪೆಟ್ರೋಲ್ ಬಂಕ್ ಸಿಬ್ಬಂದಿ ಮೇಲೆ ಎಂಎಲ್​ಎ ಪುತ್ರನ ಹಲ್ಲೆ

ನವದೆಹಲಿ: ಓಖಾ ವಿಧಾನಸಭಾ ಕ್ಷೇತ್ರದ ಎಎಪಿ ಶಾಸಕ ಅಮಾನತುಲ್ಲಾ ಖಾನ್ (AAP MLA Amanatullah Khan) ಪೆಟ್ರೋಲ್​ ಪಂಪ್​​ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಮಾಹಿತಿ ನೀಡಿರುವ ಪೊಲೀಸರು, ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ ಎಂದು ಹೇಳಿದ್ದಾರೆ. ಮಂಗಳವಾರ ನೋಯ್ಡಾ ಸೆಕ್ಟರ್ -95ರ ಪೆಟ್ರೋಲ್​ ಪಂಪ್​ನಲ್ಲಿ ಘಟನೆ ನಡೆದಿದ್ದು, ಹಲ್ಲೆಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ (CCTV Footage) ಸೆರೆಯಾಗಿವೆ. ಸಿಬ್ಬಂದಿ ಮೇಲೆ ಹಲ್ಲೆ ಮತ್ತು ಬೆದರಿಕೆ ಹಾಕಿರುವ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನ ಆಧಾರದ ಮೇಲೆ ನೋಯ್ಡಾ (Noida) ಪೊಲೀಸರು ತಂದೆ-ಮಗ ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್ 323, 504, 506, 427 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಮಂಗಳವಾರ ಬೆಳಗ್ಗೆ ಸುಮಾರು 9.30ರ ವೇಳೆಗೆ ನೋಯ್ಡಾದ ಸೆಕ್ಟರ್-95ರ ಪೆಟ್ರೋಲ್ ಬಂಕ್​ನಲ್ಲಿ ಜನರು ತಮ್ಮ ವಾಹನಗಳಿಗೆ ಇಂಧನ ತುಂಬಿಸುತ್ತಿದ್ದರು. ಆದ್ರೆ ಮೊದಲು ತಮ್ಮ ವಾಹನಕ್ಕೆ ಇಂಧನ ತುಂಬಿಸುವಂತೆ ಶಾಸಕರ ಪುತ್ರ ಸಿಬ್ಬಂದಿ ಜೊತೆ ಜಗಳ ಮಾಡಿದರು ಎಂದು ವರದಿಯಾಗಿದೆ.

ಈ ವೇಳೆ ಶಾಸಕರ ಪುತ್ರ ಸ್ಕ್ಯಾನಿಂಗ್ ಮಷೀನ್ ಒಡೆದು ಹಾಕಿದಲ್ಲದೇ, ಕಾರ್ ಡಿಕ್ಕಿಯಲ್ಲಿದ್ದ ಕಬ್ಬಿಣದ ರಾಡ್​ ಹೊರತಂದು ಹಲ್ಲೆಗೆ ಮುಂದಾಗಿದ್ದರು. ಅಲ್ಲದೇ ಅಲ್ಲಿಯ ಸಿಬ್ಬಂದಿಗೆ ಜೀವ ಬೆದರಿಕೆ ಹಾಕಿದ್ದಾರೆ. ನಂತರ ಸ್ಥಳಕ್ಕೆ ಬಂದ ಶಾಸಕರು ಪೆಟ್ರೋಲ್ ಬಂಕ್ ಮುಚ್ಚಿಸೋದಾಗಿ ಬೆದರಿಕೆ  ಹಾಕಿದ್ದಾರೆ  ಎಂದು ಎಫ್​ಐಆರ್​ನಲ್ಲಿ ಉಲ್ಲೇಖವಾಗಿದೆ.

ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸರೆ

ನಂತರ ಪೆಟ್ರೋಲ್ ಸಿಬ್ಬಂದಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇತ್ತ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಶಾಸಕ ಅಮಾನತುಲ್ಲಾ ಖಾನ್ ಪೊಲೀಸರು ಮತ್ತು ಪೆಟ್ರೋಕ್ ಬಂಕ್ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿರುವ ದೃಶ್ಯಗಳು ಸಹ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಹಲ್ಲೆಯ ಸಂಬಂಧ ವಿನೋದ್ ಪ್ರತಾಪ್ ಸಿಂಗ್ ಎಂಬವರು ಶಾಸಕರ ಪುತ್ರನ ವಿರುದ್ಧ ದೂರು ದಾಖಲಿಸಿದ್ದಾರೆ. ಹಲ್ಲೆಯ ಸಂಬಂಧ ದೂರು ದಾಖಲಾಗಿರುವ ಮಾಹಿತಿ ಬಂದಿದೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಮನೀಶ್ ಮಿಶ್ರಾ ಮಾಹಿತಿ ನೀಡಿದ್ದಾರೆ.

ಲಾಲೂ ಮೀಸಲಾತಿ ಮಾತು, ಮುಗಿಬಿದ್ದ ಬಿಜೆಪಿ

ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಮುಸ್ಲಿಮರಿಗೆ ಪಾಲು ನೀಡುವ ವಿಷ್ಯ ದೇಶಾದ್ಯಂತ ದೊಡ್ಡ ಚರ್ಚೆ ಹುಟ್ಟುಹಾಕಿದೆ. ಇದರ ಬೆನ್ನಲ್ಲೇ ಲಾಲೂ ಪ್ರಸಾದ್ ಯಾದವ್ ಹೊಸ ವಿವಾದವೊಂದನ್ನ ಎಬ್ಬಿಸಿದ್ದಾರೆ.

ಮುಸ್ಲಿಮರಿಗೆ ಪೂರ್ಣ ಮೀಸಲಾತಿ ಸಿಗಬೇಕು ಅಂತಾ ಹೇಳಿಕೆ ನೀಡಿದ್ದಾರೆ. ಲಾಲೂ ಪ್ರಸಾದ್​ರ ಈ ಹೇಳಿಕೆ ವಿರುದ್ಧ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ. ಜೈಲಿಗೆ ಹೋಗಿ ಬಂದವ್ರು ಮುಸ್ಲಿಂ ಮೀಸಲಾತಿ ಪರ ಮಾತನಾಡ್ತಿದ್ದಾರೆ. ಇವರಿಗೆ ವೋಟ್ ಬ್ಯಾಂಕ್ ರಾಜಕಾರಣ ಬಿಟ್ಟು ಬೇರೇನೂ ಕಾಣಲ್ಲ. ಇಂಡಿಯಾ ಒಕ್ಕೂಟದ ನಿಜ ಬಣ್ಣ ಬಯಲಾಗಿದೆ ಅಂತಾ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *