God Promise: ಕಾಂತಾರ ಲಕ್ಕಿ ಟೆಂಪಲ್‌ನಲ್ಲಿ ರವಿ ಬಸ್ರೂರು ಶಿಷ್ಯನ ಸಿನಿಮಾ ಲಾಂಚ್.! ಚಿತ್ರಕ್ಕೆ ಗಾಡ್ ಪ್ರಾಮಿಸ್ ಅನ್ನೋ ಟೈಟಲ್ ಫಿಕ್ಸ್.!
ಕನ್ನಡ ಚಿತ್ರರಂಗದಲ್ಲಿ ಒಂದು ನಂಬಿಕೆ ಇದೆ. ಒಂದು ಚಿತ್ರ ಹಿಟ್ (Hit Movie) ಆದ್ರೆ ಮುಗಿತು. ಆ ಚಿತ್ರದ ಮುಹೂರ್ತ ಆ ಮಂದಿರಗಳಲ್ಲಿ ಹೊಸ ಹೊಸ ಸಿನಿಮಾಗಳ (New Movie) ಪೂಜೆ ಆಗುತ್ತವೆ. ಬೆಂಗಳೂರಿನ ಮೋದಿ ರಸ್ತೆಯಲ್ಲಿ ಒಂದು ಗಣೇಶ ಟೆಂಪಲ್ ಇದೆ. ಇಲ್ಲಿ ಮುಂಗಾರು ಮಳೆ ಚಿತ್ರದ ಪೂಜೆ ಆಗಿತ್ತು. ಅಂದಿನಿಂದ ಇಲ್ಲಿ ಅನೇಕ ಚಿತ್ರಗಳ ಪೂಜೆ ಆಗಿದೆ. ಇದನ್ನ ಮುಂಗಾರು ಮಳೆ ಗಣೇಶ್ ಟೆಂಪಲ್ ಅಂತಲೇ ಕರೆಯುತ್ತಾರೆ. ಬಂಡೆ ಮಹಾಕಾಳಮ್ಮ ದೇವಸ್ಥಾನದಲ್ಲಿ ಸದ್ಯ ಸಾಕಷ್ಟು ಸಿನಿಮಾಗಳ ಪೂಜೆ ಆಗುತ್ತಿದೆ. ಟಗರು ಸಿನಿಮಾದ (Tagaru Movie) ಮುಹೂರ್ತ ಇದೇ ಟೆಂಪಲ್ ಅಲ್ಲಿ ಆಗಿತ್ತು. ಡಾಲಿ ಧನಂಜಯ್ ಬಹುತೇಕ ಸಿನಿಮಾಗಳು ಇಲ್ಲಿ ಲಾಂಚ್ ಆಗುತ್ತವೆ.
ಕುಂದಾಪುರದ ಆನೆಗುಡ್ಡೆ ಗಣಪತಿ ಟೆಂಪಕ್ ಈಗ ಲಕ್ಕಿ..!!
ಕುಂದಾಪುರದ ಆನೆಗುಡ್ಡೆ ಗಣಪತಿ ಟೆಂಪಲ್ ಇದೀಗ ಲಕ್ಕಿ ಟೆಂಪಲ್ ಅನಿಸಿಕೊಂಡಿದೆ. ಇದಕ್ಕೆ ಕಾರಣ ಬೇರೆ ಏನೋ ಅಲ್ಲ. ಕಾಂತಾರ ಸಿನಿಮಾನೇ ಆಗಿದೆ. ಡಿವೈನ್ ಹಿಟ್ ಕಾಂತಾರ ಸಿನಿಮಾದ ಮುಹೂರ್ತ ಇದೇ ಟೆಂಪಲ್ ಅಲ್ಲಿಯೇ ಆಗಿದೆ. ಕಾಂತಾರ ಪ್ರೀಕ್ವೆಲ್ ಚಿತ್ರದ ಮುಹೂರ್ತ ಕೂಡ ಇದೇ ದೇವಸ್ಥಾನದಲ್ಲಿಯೇ ನಡೆದಿದೆ.
ಅಲ್ಲಿಗೆ ಈ ಟೆಂಪಲ್ ಕೂಡ ತುಂಬಾನೆ ಲಕ್ಕಿ ಅನ್ನೋದು ತಿಳಿಯುತ್ತಿದೆ. ಇದರ ಬೆನ್ನಲ್ಲಿಯೇ ಇದೀಗ ಕನ್ನಡದ ಇನ್ನೂ ಒಂದು ಸಿನಿಮಾದ ಮುಹೂರ್ತ ಇಲ್ಲಿ ಆಗಿದೆ. ಈ ಚಿತ್ರದ ಟೈಟಲ್ ಹೊಸ ರೀತಿಯಲ್ಲಿಯೇ ಇದೆ. ಎಲ್ಲರ ಗಮನ ಕೂಡ ಇದು ಸೆಳೆಯುತ್ತದೆ. ಸಾಮಾನ್ಯವಾಗಿ ಜನ ಇದನ್ನ ಆಗಾಗ ಬೆಳಸುತ್ತಾರೆ. ಯಾರಾದರೂ ನೀವು ತಪ್ಪು ಮಾಡಿದ್ದೀರಿ ಅಂದ್ರೆ ಸಾಕು ನೋಡಿ. ಈ ಒಂದು ಮಾತು ಹೇಳಿ ಬಿಡ್ತಾರೆ.
‘ಗಾಡ್ ಪ್ರಾಮಿಸಿ’ ಚಿತ್ರಕ್ಕೆ ಇಲ್ಲಿಯೇ ಮುಹೂರ್ತ.!
ಗಾಡ್ ಪ್ರಾಮಿಸಿ ಅಂತ ನಾವು ಒಂದಿಲ್ಲ ಒಂದು ದಿನ ಹೇಳಿಯೇ ಇರುತ್ತವೆ. ಅದೇ ಮಾತನ್ನೆ ನವ ನಿರ್ದೇಶಕ ಚಿತ್ರದ ನಾಯಕ ಸೂಚನ್ ಶೆಟ್ಟಿ ಇಲ್ಲಿ ಟೈಟಲ್ ಆಗಿಯೇ ಮಾಡಿದ್ದಾರೆ. ಕೇಳೋಕು ಹಾಗೂ ನೋಡೋಕು ಈ ಟೈಟಲ್ ಇಂಟ್ರಸ್ಟಿಂಗ್ ಆಗಿಯೇ ಇದೆ. ಇದನ್ನ ನೋಡಿದಾಗ ಇದೂ ಟೈಟಲ್ ಆಯಿತೇ ಅನ್ನೋರು ಇದ್ದಾರೆ ಬಿಡಿ.
ಆದರೆ ಇದು ಈಗ ಟೈಟಲ್ ಆಗಿದೆ. ಸೂಚನ್ ಶೆಟ್ಟಿ ಕಲ್ಪನೆಯಲ್ಲಿಯೇ ಈ ಟೈಟಲ್ ಹೊರ ಬಂದಿದೆ. ಒಂದ್ ಒಳ್ಳೆ ಕಥೆಗೆ ಶೀರ್ಷಿಕೆ ಕೂಡ ಆಗಿದೆ. ಸೂಚನ್ ಶೆಟ್ಟಿ ಬಗ್ಗೆ ಹೇಳೋದಾದ್ರೆ ಸೂಚನ್, ರವಿ ಬಸ್ರೂರು ಶಿಷ್ಯ ನೋಡಿ.
ರವಿ ಬಸ್ರೂರ ಅವರ ಜೊತೆಗೆ ಸೂಚನ್ ಶೆಟ್ಟಿ ಕೆಲಸ ಮಾಡಿದ್ದಾರೆ. ನಿರ್ದೇಶಕ ಸೂಚನ್ ಈ ಹಿಂದೆ ಕಟಕ ಮತ್ತು ಗಿರ್ಮಿಟ್ ಚಿತ್ರದ ನಿರ್ದೇಶನದ ವಿಭಾಗದಲ್ಲಿಯೇ ಕೆಲಸ ಕಲಿತುಕೊಂಡಿದ್ದಾರೆ. ಈ ಎಲ್ಲ ಅನುಭವವನ್ನ ಈ ಮೊದಲ ಚಿತ್ರ ಗಾಡ್ ಪ್ರಾಮಿಸ್ ಚಿತ್ರಕ್ಕೇನೆ ಹಾಕುತ್ತಿದ್ದಾರೆ.
ಗಾಡ್ ಪ್ರಾಮಿಸಿ ಫ್ಯಾಮಿಲಿ ಡ್ರಾಮ ಇರೋ ಸಿನಿಮಾ.!
ಗ್ರಾಡ್ ಪ್ರಾಮಿಸಿ ಚಿತ್ರದಲ್ಲಿ ಫ್ಯಾಮಿಲಿ ಡ್ರಾಮ ಇದೆ. ಈ ಮೂಲಕ ಸೂಚನ್ ಒಂದ್ ಒಳ್ಳೆ ಕಥೆ ಕೊಡ್ತಿರೋ ಖುಷಿಯಲ್ಲಿಯೇ ಇದ್ದಾರೆ. ಕಾಮಿಡಿ ಕಂಟೆಂಟ್ ಕೂಡ ಈ ಚಿತ್ರದಲ್ಲಿ ಇರುತ್ತದೆ ಅನ್ನೋದು ವಿಶೇಷ. ಗುರುಪ್ರಸಾದ್ ನಾರ್ನಾಡ್ ಕ್ಯಾಮರಾವರ್ಕ್ ಮಾಡುತ್ತಿದ್ದಾರೆ. ಭರತ್ ಮಧುಸೂದನನ್ ಚಿತ್ರಕ್ಕೆ ಸಂಗೀತ ಕೊಡುತ್ತಿದ್ದಾರೆ. ಅತೀ ಶೀಘ್ರದಲ್ಲಿ ಸಿನಿಮಾ ತಂಡ ಶೂಟಿಂಗ್‌ಗೆ ಹೋಗಲಿದೆ ಅಂತಲೇ ಹೇಳಬಹುದು.