ನಿಖಿಲ್ ಕುಮಾರಸ್ವಾಮಿಯ ಹೊಸಾ ಸಿನಿಮಾ ಯಾವುದು ಗೊತ್ತಾ?

ಸ್ಯಾಂಡಲ್​ವುಡ್​ ಯುವರಾಜ ನಿಖಿಲ್​ ಕುಮಾರಸ್ವಾಮಿ, ಮಾಡಿರೋ ಮೂರು ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಬಿಗ್ ಹಿಟ್ ಪಡೆದುಕೊಂಡಿವೆ. ಸದ್ಯ ಬ್ಯಾಕ್ ಟು ಬ್ಯಾಕ್​ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಿಖಿಲ್​ 4 ನೇ ಸಿನಿಮಾದ ಟೈಟಲ್​ ಟೀಸರ್​ ರಿಲೀಸ್​ ಆಗಿದೆ.. ಹಾಗಾದ್ರೆ ನಿಖಿಲ್​ ಈ ಬಾರಿ ಯಾವ ಲುಕ್​ನಲ್ಲಿ ಬರ್ತಿದ್ದಾರೆ ಗೊತ್ತಾ ಹೇಳ್ತೀವಿ ಜಸ್ಟ್​ ಹ್ಯಾವೇ ಲುಕ್​​….

ನಿಖಿಲ್​ ಕುಮಾರಸ್ವಾಮಿ..ಸ್ಯಾಂಡಲ್​​ವುಡ್​ನ ಹ್ಯಾಂಡ್ಸಮ್​​ ಹಂಕ್​​.. ಯಂಗ್ ಟೈಗರ್​.. ಕುರುಕ್ಷೇತ್ರದ ಅಭಿಮನ್ಯು.. ​ ಮೊದಲ ಸಿನಿಮಾದಲ್ಲೇ ಸ್ಯಾಂಡಲ್​ವುಡ್​​ ಟು ಟಾಲಿವುಡ್​​​ ನ ವರೆಗೂ ಸದ್ದು ಮಾಡಿದ ಜಾಗ್ವಾರ್​​ ಸ್ಟಾರ್.. ಡಾನ್ಸ್​, ಫೈಟ್​, ಡೈಲಾಗ್ ಆ್ಯಕ್ಟಿಂಗ್​​​​ನಿಂದಲೇ ಸೆನ್ಸೇಷನ್ ಕ್ರಿಯೇಟ್​ ಮಾಡಿರುವ ನಿಖಿಲ್​ ಮಾಡಿರೋದು ಮೂರೇ ಸಿನಿಮಾಗಳಾದ್ರು ಎಲ್ಲವು ಬಾಕ್ಸ್​ ಆಫಿಸ್​ ಸಖತ್​ ಸೆನ್ಸೇಷನ್​ ಕ್ರಿಯೇಟ್​ ಮಾಡಿವೆ. ಇದೀಗ ಅಂತಹದ್ದೇ ಮತ್ತೊಂದು ಹವಾ ಎಬ್ಬಿಸಲು ಈ  ಸ್ಟಾರ್​ನ 4 ನೇ ಸಿನಿಮಾ ಎಂಟ್ರಿಕೊಡಲಿದೆ..

ಯಸ್​ ಎರಡು ದಿನಗಳ ಹಿಂದೆಯಷ್ಟೆ ತಮ್ಮ ಹೊಸ ಸಿನಿಮಾದ ಕುರಿತಾಗಿ  ಅಪ್ಡೇಟ್​ ನೀಡಿದ್ರು ನಿಖಿಲ್​​. ಇವತ್ತು ಅದೇ ಸಿನಿಮಾದ ಟೈಟಲ್​ ಟೀಸರ್​ ರಿಲೀಸ್​ ಆಗಿದೆ. ಈ ಹಿಂದೆ ನನ್ನ ಮುಂದಿನ ಸಿನಿಮಾ ಕ್ರೀಡೆ ಆಧಾರಿತ ವಾಗಿರುತ್ತೆ ಅಂತ ನಿಖಿಲ್​ ಹೇಳಿಕೊಂಡಿದ್ರು. ಈಗ ಅಂತಹದ್ದೇ ಕಥಾ ಹಂದರವಿರುವ ಸಿನಿಮಾದಲ್ಲಿ, ಬ್ಯಾಸ್ಕೇಟ್​ ಬಾಲ್​ ಆಟಗಾರನಾಗಿ ನಿಖಿಲ್​ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಟೈಟಲ್​ “ರೈಡಲ್”​ ಅಂತ ಇಡಲಾಗಿದೆ, ಟೀಸರ್ ನೋಡಿದಾಗ ಇದೊಂದು ಪಕ್ಕಾ ಆಕ್ಷನ್ ಸಿನಿಮಾ ಅನ್ನೋದು ಕನ್​​ಫರ್ಮ್​​ ಆಗಿದೆ….

ಯುವರಾಜ ನಿಖಿಲ್ ಗೆ ‘ರೈಡರ್’ ಕಮರ್ಷಿಯಲ್ ಸಕ್ಸಸ್ ನೀಡುವ ಎಲ್ಲಾ ಸೂಚನೆಯನ್ನ ಸಹ ಟೈಟಲ್ ಟೀಸರ್ ನೀಡುತ್ತಿದೆ.  ಅಂದ್ಹಾಗೇ ಮದುವೆಯ ನಂತ್ರ ನಿಖಿಲ್​ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಫುಲ್​ ಬ್ಯುಸಿಯಾಗಿದ್ದು, ಅವ್ರ ಕೈಯಲ್ಲೀಗ ಈ ರೈಡರ್ ಸೇರಿ ಇನ್ನು ನಾಲ್ಕು  ಚಿತ್ರಗಳಿರೋದು ವಿಶೇಷವಾಗಿದ್ದು, ಮತ್ತೊಮ್ಮೆ ಈ ರೈಡರ್​ ಮೂಲಕ ಟಾಲಿವುಡ್​ನಲ್ಲಿ ನಿಖಿಲ್ ಅಬ್ಬರಿಸಲಿದ್ದಾರೆ…..​

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *