ನಾನು ಬಿಜೆಪಿಗರಿಗೆ ಮನೆ ದೇವರು, ನನ್ನ ಬಗ್ಗೆ ಮಾತಾಡದಿದ್ದರೆ ತಿಂದಿದ್ದು ಕರಗಲ್ಲ! ಪ್ರಿಯಾಂಕ್ ಖರ್ಗೆ ವಾಗ್ದಾಳಿ
ಹೈಲೈಟ್ಸ್:
- ನಾನು ಬಿಜೆಪಿಗರ ಪಾಲಿನ ಮನೆ ದೇವರು, ನನ್ನ ಬಗ್ಗೆ ಮಾತಾಡದಿದ್ದರೆ ಅವರಿಗೆ ಎರಡು ಹೊತ್ತು ತಿಂದಿದ್ದು ಕರಗಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ
- ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಅವರು, ಜೆಡಿಎಸ್ ಹಾಗೂ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು
- ನಮಗೇನೂ ಸಚಿವರ ಕಮಿಟಿ ಮಾಡಿಕೊಂಡು ಇದನ್ನು ಮಾಡುವುದಕ್ಕೆ ಬೇರೆ ಕೆಲಸ ಇಲ್ವಾ? ನೀವು ಮಾಡಿದ ಕೆಟ್ಟ ಕೆಲಸಕ್ಕೆ ನಾವು ಪ್ರಚೋದನೆ ಕೊಡಬೇಕಾ?
ಬೆಂಗಳೂರು: ನಾನು ಬಿಜೆಪಿಗರಿಗೆ ಮನೆ ದೇವರು, ನನ್ನ ಬಗ್ಗೆ ಮಾತಾಡದಿದ್ದರೆ ಎರಡು ಹೊತ್ತು ತಿಂದಿದ್ದು ಕರಗಲ್ಲ ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಅವರು, ಬಿಜೆಪಿ ಟಾರ್ಗೆಟ್ ಮೊದಲು ಸಿಎಂ, ಡಿಸಿಎಂ ಎರಡನೆಯವರು, ಮೂರನೇಯವನು ನಾನು ಎಂದರು.
ಹಾಸನ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ನವರು ರಾಜ್ಯದ ಮರ್ಯಾದೆ ಸಂಪೂರ್ಣ ಹಾಳು ಮಾಡಿದ್ದಾರೆ. ನಮ್ಮ ಮೇಲೆ ಗೂಬೆ ಕೂರಿಸೋದು ಬಿಟ್ಟು ಜಡ್ಜ್ ಮುಂದೆ ಕೊಡಲಿ ದೇವರಾಜೇಗೌಡ. ಈ ರೀತಿ ಉಡಾಫೆ ಮಾತಾಡೋದು ಬಿಡಿ ಎಂದರು.