ಭೂಮಿಗೆ ಬಂತಾ ಏಲಿಯನ್ಸ್ ವಾಹನ! ಏನಿದು ಬೆಳಕಿನ ಸ್ತಂಭ? ಜಪಾನ್ನಲ್ಲಿ ಅಚ್ಚರಿಯ ವಿದ್ಯಮಾನ
ಹೈಲೈಟ್ಸ್:
- ಜಪಾನ್ ದೇಶದ ಟೊಟ್ಟೋರಿ ಎಂಬಲ್ಲಿ ಇದೇ ವರ್ಷ ಮೇ ತಿಂಗಳ ಆರಂಭದಲ್ಲಿ ಕಂಡ ಬೆಳಕಿನ ಸ್ತಂಭಗಳು
- ‘ಭೂಮಿಗೆ ಬಂದೇ ಬಿಟ್ಟ ಭಗವಂತ’ ಎನ್ನುತ್ತಿದ್ದಾರೆ ನೆಟ್ಟಿಗರು!
- ಹಾಲಿವುಡ್ ಸಿನಿಮಾಗಳಲ್ಲಿ ತೋರಿಸುವ ಅನ್ಯಗ್ರಹ ಜೀವಿಗಳ ವಾಹನದ ಬೆಳಕು ಎಂಬ ಅಭಿಪ್ರಾಯ!
ಟೋಕಿಯೋ (ಜಪಾನ್): ತಂತ್ರಜ್ಞಾನದಲ್ಲಿ ಅಪಾರ ಸಾಧನೆ ಮೆರೆದಿರುವ ಪುಟ್ಟ ದ್ವೀಪ ರಾಷ್ಟ್ರ ಜಪಾನ್ನ ಆಗಸದಲ್ಲಿ ಕಂಡು ಬಂದ ವಿದ್ಯಮಾನವೊಂದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಆಗಸದಲ್ಲಿ ಕಂಡ 9 ಬೆಳಕಿನ ಕಂಬಗಳು ಅನ್ಯಗ್ರಹ ಜೀವಿಗಳ ವಾಹನದ ಬೆಳಕು ಎಂದು ವಾದಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ವೈರಲ್ ಆಗಿವೆ.
ಜಪಾನ್ ದೇಶದ ಟೊಟ್ಟೋರಿ ಎಂಬಲ್ಲಿ ಇದೇ ವರ್ಷ ಮೇ ತಿಂಗಳ ಆರಂಭದಲ್ಲಿ ಆಗಸದಲ್ಲಿ ಕಾಣ ಸಿಕ್ಕ ಈ ಬೆಳಕಿನ ಕಂಬಗಳ ಕುರಿತಾಗಿ ಇದೀಗ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ನೆಟ್ಟಿಗರು ‘ಭೂಮಿಗೆ ಬಂದೇ ಬಿಟ್ಟ ಭಗವಂತ’ ಎನ್ನುತ್ತಿದ್ದಾರೆ. ಜೊತೆಯಲ್ಲೇ ಹತ್ತು ಹಲವು ರೀತಿಯ ವ್ಯಾಖ್ಯಾನಗಳು, ಅಂತೆ ಕಂತೆಗಳು ಹಾಗೂ ಊಹಾಪೋಹಗಳೂ ಶುರುವಾಗಿವೆ. ಹಾಲಿವುಡ್ ಸಿನಿಮಾಗಳಲ್ಲಿ ತೋರಿಸುವ ರೀತಿ ಬಿಲಿಯನ್ಗಟ್ಟಲೆ ಕಿಲೋ ಮೀಟರ್ ದೂರದಲ್ಲಿ ಇರುವ ಅನ್ಯಗ್ರಹ ಜೀವಿಗಳು ತಮ್ಮ ಬೃಹತ್ ವಾಹನದಲ್ಲಿ ಭೂಮಿಗೆ ಬಂದಿದ್ದಾರೆ. ತಮ್ಮ ವಾಹನ ಲ್ಯಾಂಡ್ ಮಾಡುವ ಸನ್ನಾಹದಲ್ಲಿದ್ದಾರೆ ಎಂದು ಸಿನಿಮೀಯ ಮಾದರಿಯಲ್ಲೇ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಿದ್ಧಾರೆ.