ನನ್ನ ತಂದೆ ಹೊಡೆದರು, ಪೊಲೀಸರಿಂದ ಬೆದರಿಸಿದರು; ಭಿಕ್ಷೆ ಬೇಡಿಕೊಂಡು ಬದುಕಲು ಹೇಳಿದ್ರು – ನಿಶಾ ಯೋಗೇಶ್ವರ್ ಗಂಭೀರ ಆರೋಪ
ಹೈಲೈಟ್ಸ್:
- ನಮ್ಮ ತಂದೆ ನನಗೆ ಹೊಡೆದರು; ಪೊಲೀಸರನ್ನು ಕರೆಸಿ ಬೆದರಿಸುತ್ತಾರೆ ಎಂದು ಸಿಪಿ ಯೋಗೇಶ್ವರ್ ಪುತ್ರಿ ಆರೋಪ.
- ರಾಮನಿಗೆ 14 ವರ್ಷ ವನವಾಸವಿತ್ತು. ಆದರೆ, ನಾನು ಜೀವನ ಪೂರ್ತಿ ವನವಾಸದಲ್ಲೇ ಇದ್ದೇನೆ ಎಂದ ನಿಶಾ.
- ಇನ್ಸ್ಟಾಗ್ರಾಂ ಖಾತೆಯಲ್ಲಿ ಸರಣಿ ವಿಡಿಯೊ ಪೋಸ್ಟ್ ಮಾಡಿದ ನಿಶಾ ಯೋಗೇಶ್ವರ್.
ರಾಮನಗರ: ಇನ್ಸ್ಟಾಗ್ರಾಂ ಖಾತೆ ಹಾಗೂ ಸೋಷಿಯಲ್ ಮೀಡಿಯಾದಲ್ಲಿಸರಣಿ ವಿಡಿಯೊ ಪೋಸ್ಟ್ ಮಾಡಿ, ತಂದೆ ಸಿ.ಪಿ. ಯೋಗೇಶ್ವರ್ ವಿರುದ್ಧ ಅವರ ಪುತ್ರಿ ನಿಶಾ ರೆಬಲ್ ಆಗಿದ್ದಾರೆ. ”ಮಾತನಾಡಿಸಲು ಹೋದಾಗ ತಂದೆ ಹೊಡೆದರು. ಪೊಲೀಸರನ್ನು ಕರೆಸಿ ಬೆದರಿಸುತ್ತಾರೆ,” ಎಂದು ನಿಶಾ ಯೋಗೇಶ್ವರ್ ಗಂಭೀರ ಆರೋಪ ಮಾಡಿದ್ದಾರೆ.
”ನನ್ನ ಹೆಸರಿನ ಜತೆ ತಂದೆ ಸಿ.ಪಿ. ಯೋಗೇಶ್ವರ್ ಹೆಸರು ಇದೆ, ತೆಗೆಯುವುದು ಹೇಗೇ?,” ಎಂದು ಜಾಲತಾಣದಲ್ಲಿಪ್ರಶ್ನೆ ಮಾಡಿರುವ ಅವರು, ಕಣ್ಣೀರು ಹಾಕುತ್ತಲೇ ಮೂರು ಸರಣಿ ವಿಡಿಯೊದಲ್ಲಿಮಾತನಾಡಿದ್ದಾರೆ. ” ದೇವರ ಇಚ್ಚೆಯಿಂದ ನಾನು ಯೋಗೇಶ್ವರ್ ಮಗಳಾಗಿ ಹುಟ್ಟಿದ್ದೇನೆ. ನನ್ನ ಜೀವನದ 24 ವರ್ಷದಿಂದ ನನ್ನ ತಂದೆಯ ಹೆಸರು ನನ್ನ ಹೆಸರಿನ ಜತೆ ಇರುವುದು ಇಷ್ಟವಿಲ್ಲವೆ ” ಎಂದು ಜಾಲತಾಣಿಗರನ್ನು ಪ್ರಶ್ನಿಸಿದ್ದಾರೆ.