ಸಮರ್ಥ ಪ್ರಧಾನಿ ಅಭ್ಯರ್ಥಿ ನಮ್ಮಲ್ಲೂ ಇದ್ದಾರೆ : ಸಿದ್ದರಾಮಯ್ಯ ಮಾತಿಗೆ ಸ್ವಪಕ್ಷೀಯರಿಂದಲೇ ಕೌಂಟರ್
ಹೈಲೈಟ್ಸ್:
- ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಪ್ರಧಾನಿ ಹುದ್ದೆಗೆ ಸಮರ್ಥ ನಾಯಕರಿದ್ದಾರೆ
- ಸಚಿವ ಸತೀಶ್ ಜಾರಕಿಹೊಳಿ ಮತ್ತು ಎಚ್ ಕೆ ಪಾಟೀಲ್ ಕೌಂಟರ್
- ಪ್ರಧಾನಿ ಹುದ್ದೆಗೆ ರೇಸಿಗೆ ರಾಜ್ಯದಿಂದ ಯಾರೂ ಇಲ್ಲ ಎಂದಿದ್ದ ಸಿಎಂ ಸಿದ್ದರಾಮಯ್ಯ
ಬೆಂಗಳೂರು / ಬೆಳಗಾವಿ : ಇಂಡಿಯಾ ಬ್ಲಾಕ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ, ಮುಂದಿನ ಪ್ರಧಾನಮಂತ್ರಿ ಅಭ್ಯರ್ಥಿ ಯಾರು ಎನ್ನುವ ಚರ್ಚೆ, ರಾಜ್ಯ ಕಾಂಗ್ರೆಸ್ಸಿನಲ್ಲಿ ಜೋರಾಗಿ ನಡೆಯಲಾರಂಭಿಸಿದೆ. ಸಿಎಂ ಸಿದ್ದರಾಮಯ್ಯನವರ ಹೇಳಿಕೆಗೆ ಪಕ್ಷದಲ್ಲಿ ಅಸಮಾಧಾನದ ಹೊಗೆ ಎದ್ದಿದೆ.
ನಮ್ಮ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಪ್ರಧಾನಿ ಯಾರು ಎನ್ನುವ ಚಿಂತೆ ಬಿಜೆಪಿಯವರಿಗೆ ಬೇಡ, ಯಾರಾಗಬೇಕು ಎನ್ನುವುದು ಈಗಾಗಲೇ ನಿರ್ಧಾರವಾಗಿದೆ ಎಂದು ಶಿವಸೇನೆಯ (ಯುಬಿಟಿ) ಉದ್ದವ್ ಠಾಕ್ರೆ, ಕೆಲವು ದಿನಗಳ ಹಿಂದೆ ಮುಂಬೈನಲ್ಲಿ ಹೇಳಿದ್ದರು. ಆ ವೇಳೆ, ಶರದ್ ಪವಾರ್ ಮತ್ತು ಮಲ್ಲಿಕಾರ್ಜುನ ಖರ್ಗೆ ಕೂಡಾ ಅಲ್ಲಿ ಹಾಜರಿದ್ದರು.