ಹಾಸನ ಪನ್ ಡ್ರೈವ್ ಕೇಸ್: ಎಚ್ಡಿಕೆ ಮನವಿ ಮಾಡಿ 2 ದಿನವಾದರೂ ಪ್ರಜ್ವಲ್ ಪತ್ತೆ ಇಲ್ಲ! ಮುಂದಿನ ನಡೆ ಕುತೂಹಲ
ಹೈಲೈಟ್ಸ್:
- ಹಾಸನ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿ ಪ್ರಜ್ವಲ್ ಎಲ್ಲಿದ್ದರೂ ಬಂದು ತನಿಖೆ ಎದುರಿಸುವಂತೆ ಮನವಿ ಮಾಡಿದ್ದ ಎಚ್ ಡಿ ಕುಮಾರ್ ಕುಮಾರಸ್ವಾಮಿ
- ಸೋಮವಾರ ಮಧ್ಯಾಹ್ನವೇ ಕುಮಾರಸ್ವಾಮಿ ಪತ್ರಿಕಾ ಗೋಷ್ಠಿ ಕರೆದು ಮನವಿ ಮಾಡಿದ್ದರೂ ಈವರೆಗೂ ಪ್ರಜ್ವಲ್ ಪತ್ತೆಯಿಲ್ಲ, ಉತ್ತರವೂ ಇಲ್ಲ
- ಪ್ರಜ್ವಲ್ ಇನ್ನೂ ಭಾರತಕ್ಕೆ ಬಾರದಿದ್ದರೆ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದರೆ ಇಂಟರ್ ಪೋಲ್ ಸಹಾಯದಿಂದ ವಶಕ್ಕೆ ಪಡೆವ ಸಾಧ್ಯತೆ
ಬೆಂಗಳೂರು: ಹಾಸನ ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ದೇಶಕ್ಕೆ ವಾಪಸ್ ಆಗಿ ತನಿಖೆ ಎದುರಿಸುವಂತೆ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅವರು ಮನವಿ ಮಾಡಿದ್ದರು. ಎಲ್ಲೇ ಇದ್ದರೂ 24 ಗಂಟೆ ಅಥವಾ 48 ಗಂಟೆಯೊಳಗಾಗಿ ದೇಶಕ್ಕೆ ಬಂದು ತನಿಖೆಗೆ ಸಹಕಾರ ನೀಡುವಂತೆ ಮನವಿ ಮಾಡಿದ್ದರು. ಸೋಮವಾರ ಮಧ್ಯಾಹ್ನ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಜ್ವಲ್ ರೇವಣ್ಣ ಅವರ ಬಳಿ ಈ ಮನವಿ ಮಾಡಿದ್ದರು. ಅವರು ಮನವಿ ಮಾಡಿ ಎರಡು ದಿನ 20 ಗಂಟೆ ಕಳೆದಿದೆ. ಆದ
ಪ್ರಜ್ವಲ್ ರೇವಣ್ಣ ಪ್ರಕರಣ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರ ಕುಟುಂಬಕ್ಕೆ ಸಾಕಷ್ಟು ಮುಜುಗರ ಉಂಟು ಮಾಡಿದೆ. ಆದರೆ ಈ ಪ್ರಕರಣದಲ್ಲಿ ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ಸ್ವತಃ ಕುಮಾರಸ್ವಾಮಿ ಹೇಳಿದ್ದರು. ಆದರೆ ಪ್ರಜ್ವಲ್ ಆರೋಪಿ ಅಷ್ಟೇ ಅಪರಾಧಿ ಅಲ್ಲ ಎಂದೂ ಹೇಳಿದ್ದರು. ಜೊತೆಗೆ ಫೇಕ್ ವಿಡಿಯೋಗಳ ಬಗ್ಗೆಯೂ ಅವರು ಅನುಮಾನ ವ್ಯಕ್ತಪಡಿಸಿದ್ದರು.