Shiva Rajkumar: ನಾನ್ ವೈಲೆನ್ಸ್ ಚಿತ್ರಕ್ಕೆ ಕರುನಾಡ ಚಕ್ರವರ್ತಿ ಸಾಥ್! ಗುಡ್ ಲಕ್ ಹೇಳಿದ ಶಿವಣ್ಣ
ಸ್ಯಾಂಡಲ್ವುಡ್ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shiva Rajkumar) ತಮಿಳಿನ ನಾನ್ ವೈಲೆನ್ಸ್ (Non-Violence) ಚಿತ್ರಕ್ಕೆ ಸಾಥ್ ಕೊಟ್ಟಿದ್ದಾರೆ. ಹಾಗಂತ ಸಿನಿಮಾದಲ್ಲಿ ಆ್ಯಕ್ಟ್ ಮಾಡ್ತಿದ್ದಾರಾ..? ಹೀಗೆ ಕೇಳ್ಬೇಡಿ. ಇದು ಜಸ್ಟ್ ಫಸ್ಟ್ ಲುಕ್ ಮ್ಯಾಟರ್ ಆಗಿದೆ. ಮೆಟ್ರೋ ಶಿರೀಶ್, ಬಾಬಿ ಸಿಂಹ, ಯೋಗಿ ಬಾಬು ಈ ಚಿತ್ರದಲ್ಲಿ ನಟಿಸಿದ್ದಾರೆ. ಎರಡು ಹಿಟ್ ಚಿತ್ರ ಕೊಟ್ಟ ಡೈರೆಕ್ಟರ್ ಆನಂದ್ ಕೃಷ್ಣನ್ ಈ ಚಿತ್ರವನ್ನ ಡೈರೆಕ್ಷನ್ ಮಾಡುತ್ತಿದ್ದಾರೆ. ನೈಜ ಘಟನೆಯನ್ನೆ (Real Incident) ಈ ಚಿತ್ರ ಆಧರಿಸಿದೆ. ಬಹುಶಃ ಇಲ್ಲಿ ವೈಲೆನ್ಸ್ ಜಾಸ್ತಿನೇ ಇದೆ. ಆದರೂ ಈ ಚಿತ್ರಕ್ಕೆ ನಾನ್ ವೈಲೆನ್ಸ್ ಟೈಟಲ್ ಕೊಟ್ಟಿದ್ದಾರೆ. ಅದ್ಹೇಗೆ ಅನ್ನೋದು ಮುಂದುವರೆದ ಕುತೂಹಲವೇ ಆಗಿದೆ.
ಆದರೆ ಈ ಚಿತ್ರದ ಫಸ್ಟ್ ಲಕ್ (First Look) ರಿಲೀಸ್ ಮಾಡಿರೋ ಶಿವಣ್ಣ, ಇಡೀ ಟೀಮ್ಗೆ ಗುಡ್ ಲಕ್ ಹೇಳಿದ್ದಾರೆ.
ನಾನ್ ವೈಲೆನ್ಸ್ ಫಸ್ಟ್ ಲುಕ್ ರಿಲೀಸ್ ಮಾಡಿದ ಶಿವ…!
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಎಲ್ಲರ ಜೊತೆಗೂ ಚೆನ್ನಾಗಿದ್ದಾರೆ. ಎಲ್ಲ ಭಾಷೆಯ ಹೀರೋಗಳ ಜೊತೆಗೂ ಒಳ್ಳೆ ಬಾಂಧವ್ಯ ಬೆಳೆಸಿಕೊಂಡಿದ್ದಾರೆ. ಜೈಲರ್ ಚಿತ್ರದ ಮೂಲಕ ಎಲ್ಲರ ಗಮನ ಸೆಳೆದ ಶಿವಣ್ಣ, ಅಲ್ಲೂ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ. ಇವರ ಈ ಒಂದು ಪ್ರೀತಿಯಿಂದಲೇ ನಾನ್ ವೈಲೆನ್ಸ್ ಟೀಮ್ ಫಸ್ಟ್ ಲುಕ್ ಅನ್ನ ಬಿಡುಗಡೆ ಮಾಡೋವಂತೆ ಕೇಳಿಕೊಂಡಿದೆ.
ಹಾಗಾಗಿಯೇ ಶಿವರಾಜ್ ಕುಮಾರ್ ತಮ್ಮ ಸೋಷಿಯ್ ಮೀಡಿಯಾ ಪೇಜ್ನಲ್ಲಿ ಈ ಒಂದು ಫಸ್ಟ್ ರಿಲೀಸ್ ಮಾಡಿದ್ದಾರೆ. ಡೈರೆಕ್ಟರ್ ಆನಂದ್ ಕೃಷ್ಣನ್ ಸೇರಿದಂತೆ, ಯೋಗಿ ಬಾಬು, ಬಾಬಿ ಸಿಂಹ, ನಟ ಮೆಟ್ರೋ ಶಿರೀಶ್ ಹೀಗೆ ಎಲ್ಲರಿಗೂ ಗುಡ್ ಲಕ್ ಹೇಳಿದ್ದಾರೆ.
ನಾನ್ ವೈಲೆನ್ಸ್ ಚಿತ್ರಕ್ಕೆ ರಿಯಲ್ ಘಟನೆ ಆಧಾರ.!
ಡೈರೆಕ್ಟರ್ ಆನಂದ್ ಕೃಷ್ಣನ್ ಒಂದು ರಿಯಲ್ ಘಟನೆಯನ್ನ ಆಧರಿಸಿಯೇ ಈ ಚಿತ್ರ ಮಾಡಿದ್ದಾರೆ. ಮಧುರೈ ಅಲ್ಲಿ 90 ರ ದಶಕದಲ್ಲಿ ಒಂದು ಘಟನೆ ನಡೆದಿತ್ತು. ಇಲ್ಲಿಯ ಜೈಲ್ನಲ್ಲಿಯೇ ನಡೆದ ಈ ಘಟನೆಯನ್ನೆ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಇಡೀ ಸಿನಿಮಾ ಇದರ ಸುತ್ತವೇ ಇದೆ.
ಇದರೊಟ್ಟಿಗೆ ಹ್ಯಾಟ್ರಿಕ್ ಹಿಟ್ ನಿರೀಕ್ಷೆಯನ್ನ ಕೂಡ ಡೈರೆಕ್ಟರ್ ಮಾಡುತ್ತಿದ್ದಾರೆ. ಕಾರಣ, ಇವರ ಈ ಹಿಂದಿನ ಮೆಟ್ರೋ ಹಾಗೂ ಕೊಡಿಯಲ್ಲಿ ಒರುವನ್ ಸಿನಿಮಾ ಹಿಟ್ ಆಗಿವೆ. ಇದೀಗ ನಾನ್ ವೈಲೆನ್ಸ್ ಸಿನಿಮಾ ಮಾಡುತ್ತಿದ್ದಾರೆ. ಇದು ಹಿಟ್ ಆಗೋ ರೀತಿಯಲ್ಲಿಯೇ ಸ್ಕ್ರಿಪ್ಟ್ ಮಾಡಿಕೊಂಡಿದ್ದಾರೆ.

ನಾನ್ ವೈಲೆನ್ಸ್ ಶೂಟಿಂಗ್ ಮುಗಿತಾ ಬಂತು..!
ನಾನ್ ವೈಲೆನ್ಸ್ ಚಿತ್ರದ ಶೂಟಿಂಗ್ ಬಹುತೇಕ ಮುಗಿತಾ ಬಂದಿದೆ. ಈ ಶೂಟಿಂಗ್ ಎಲ್ಲ ಮುಗಿಸಿದ ಬಳಿಕವೇ ಚಿತ್ರ ತಂಡ, ಸಿನಿಮಾದ ಟ್ರೈಲರ್ ಮತ್ತು ಟೀಸರ್ ಕುರಿತು ಹೇಳಿದೆ. ಅತೀ ಶೀಘ್ರದಲ್ಲಿಯೇ ಈ ಒಂದು ಅನೌನ್ಸ್ಮೆಂಟ್ ಕೂಡ ಆಗುತ್ತದೆ. ಇದರ ಹೊರತಾಗಿ ಈ ಸಿನಿಮಾ ಬಹು ಭಾಷೆಯಲ್ಲಿಯೇ ರಿಲೀಸ್ ಆಗುತ್ತಿದೆ.
ತೆಲುಗು, ತಮಿಳು, ಮಲೆಯಾಳಂ, ಹಿಂದಿ, ಕನ್ನಡ ಹೀಗೆ ಎಲ್ಲ ಭಾಷೆಯಲ್ಲೂ ನಾನ್ ವೈಲೆನ್ಸ್ ರಿಲೀಸ್ ಆಗಲಿದೆ. ಇದಕ್ಕೂ ಹೆಚ್ಚಾಗಿ ಈ ಚಿತ್ರದಲ್ಲಿ 90 ರ ದಶಕವನ್ನ ರೀ-ಕ್ರಿಯೇಟ್ ಮಾಡಲು ಇಡೀ ತಂಡ ಸಾಕಷ್ಟು ಶ್ರಮಪಟ್ಟಿದೆ.