Prajwal Revanna Case: ಹಲವಾರು ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿ ಪ್ರಜ್ವಲ್ ರೇವಣ್ಣನನ್ನು ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ 6 ದಿನದ ಮಟ್ಟಿಗೆ ವಿಶೇಷ ತನಿಖಾ ತಂಡದ (SIT) ಕಸ್ಟಡಿಗೆ ನೀಡಿದೆ.
ಸದ್ಯ ಪ್ರಜ್ವಲ್ ರೇವಣ್ಣನನ್ನು ಸಿಐಡಿ ಕಚೇರಿಯಲ್ಲಿರಿಸಿಕೊಂಡಿರುವ ಎಸ್ಐಟಿ ಅಧಿಕಾರಿಗಳು ವಿಚಾರಣೆ ಶುರು ಮಾಡಿದೆ. ಈ ವೇಳೆ ನ್ಯಾಯಾದೀಶರು ಪ್ರಜ್ವಲ್ ರೇವಣ್ಣನನ್ನು ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಮೊದಲಿಗೆ ನಿಮ್ಮ ಹೆಸರೇನು ಎಂದು ಪ್ರಜ್ವಲ್ಗೆ ಜಡ್ಜ್ ಪ್ರಶ್ನಿಸಿದ್ದಾರೆ. ನಂತರ ಎಲ್ಲಿ ನಿಮ್ಮನ್ನು ವಶಕ್ಕೆ ಪಡೆಯಲಾಯಿತು? ಎಂದು ಕೇಳಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್ನಲ್ಲಿ ನನ್ನನ್ನು ವಶಕ್ಕೆ ಪಡೆದರು ಎಂದು ಪ್ರಜ್ವಲ್ ತಿಳಿಸಿದ.
ನಂತರ ನಿಮ್ಮ ಮನೆಗೆ ಬಂಧನ ವಿಷಯವನ್ನು ತಿಳಿಸಿದ್ದರಾ? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಜ್ವಲ್, ನಮ್ಮ ತಂದೆಗೆ ಹೇಳಲು ಹೇಳಿದೆ ಅಂತಾ ತಿಳಿಸಿದರು. ಏನಾದ್ರೂ ಟಾರ್ಚರ್ ಆಯ್ತಾ ಎಂದು ಜಡ್ಜ್ ಕೇಳಿದಾಗ, ಇಲ್ಲ ನನಗೆ ಏನು ಟಾರ್ಚರ್ ಆಗಿಲ್ಲ, ಆದರೆ ಎಸ್ಐಟಿ ಕಚೇರಿಯ ಶೌಚಾಲಯದ ಬಗ್ಗೆ ಪ್ರಜ್ವಲ್ ಅಳಲು ತೋಡಿಕೊಂಡಿದ್ದಾರೆ.
ವಿಚಾರಣೆ ವೇಳೆ ಜಡ್ಜ್ ಮುಂದೆ ಪ್ರಜ್ವಲ್, ʼನನಗೆ ಕೊಟ್ಟಿರುವ ರೂಂ ಸರಿಯಿಲ್ಲ. ಕೆಟ್ಟ ವಾಸನೆ ಬರುತ್ತಿದ್ದು, ಉಸಿರಾಟಕ್ಕೆ ತೊಂದರೆಯಾಗುತ್ತಿದೆ. ಇಲ್ಲಿ ಇರುವುದಕ್ಕೆ ಆಗುತ್ತಿಲ್ಲ, ನನಗೆ ಹಿಂಸೆ ಆಗುತ್ತಿದೆ ಅಂತಾ ಹೇಳಿದ್ದಾರೆ. ಈ ವೇಳೆ ಅಲ್ಲೇ ಇದ್ದ ಕೆಲವರು ನಗಲು ಆರಂಭಿಸಿದರು. ಇದನ್ನು ಗಮನಿಸಿದ ಜಡ್ಜ್ ಎಲ್ಲರಿಗೂ ಸುಮ್ಮನಿರುವಂತೆ ಸೂಚಿಸಿದರು.
ಎಸ್ಐಟಿಯಿಂದ ನನಗೆ ಯಾವುದೇ ರೀತಿಯ ಟಾರ್ಚರ್ ಆಗಿಲ್ಲ. ಆದರೆ ನನ್ನನ್ನು ಕ್ರಿಮಿನಲ್ ರೀತಿ ಬಿಂಬಿಸಲಾಗುತ್ತಿದೆ. ಇದರಿಂದ ನನಗೆ ನೋವಾಗಿದೆ. ಲೋಕಸಭಾ ಚುನಾವಣೆಯ ಫಲಿತಾಂಶವನ್ನು ನೋಡಲು ನನಗೆ ಅವಕಾಶ ಕಲ್ಪಿಸಿ ಎಂದು ಪ್ರಜ್ವಲ್ ಮನವಿ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.