ಎಂಥಾ ಕಾಕತಾಳೀಯ! ಅತ್ತ ‘ಲಕ್ಷ್ಮೀ ಬಾರಮ್ಮ’ ಚಿನ್ನು.. ಇತ್ತ ‘ಗೊಂಬೆ’.. ಇಬ್ಬರೂ ಮೊದಲ ಮಗುವಿನ ನಿರೀಕ್ಷೆಯಲ್ಲಿ..!

ಹೈಲೈಟ್ಸ್‌:

  • ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ಲಚ್ಚಿ/ ಚಿನ್ನು ಪಾತ್ರ ನಿರ್ವಹಿಸಿದ್ದ ಕವಿತಾ ಗೌಡ
  • ‘ಲಕ್ಷ್ಮೀ ಬಾರಮ್ಮ’ ಸೀರಿಯಲ್‌ನಲ್ಲಿ ಗೊಂಬೆ ಆಗಿ ಮಿಂಚಿದ್ದ ನೇಹಾ ಗೌಡ
  • ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ನೇಹಾ ಗೌಡ – ಚಂದನ್ ಗೌಡ ದಂಪತಿ
  • ಪೋಷಕರಾಗಿ ಬಡ್ತಿ ಪಡೆಯುತ್ತಿದ್ದಾರೆ ಚಂದನ್ ಕುಮಾರ್ – ಕವಿತಾ ಗೌಡ ದಂಪತಿ

ಅದು 2013ರ ಮಾರ್ಚ್ 4. ಅಂದಿನ ಈಟಿವಿ ಕನ್ನಡ ಅರ್ಥಾತ್ ಇಂದಿನ ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಚ್ಚ ಹೊಸ ಸೀರಿಯಲ್ ಪ್ರಾರಂಭವಾಯಿತು. ಅದೇ ‘ಲಕ್ಷ್ಮೀ ಬಾರಮ್ಮ’.

‘ಲಕ್ಷ್ಮೀ ಬಾರಮ್ಮ’ ಸೀರಿಯಲ್‌ನಲ್ಲಿ ಶ್ರುತಿ ಅಲಿಯಾಸ್ ಗೊಂಬೆಯಾಗಿ ಅಭಿನಯಿಸಿದವರು ನಟಿ ನೇಹಾ ಗೌಡ (ನೇಹಾ ರಾಮಕೃಷ್ಣ). ಇನ್ನೂ ಲಕ್ಷ್ಮೀ ಅಲಿಯಾಸ್‌ ಚಿನ್ನು ಪಾತ್ರಕ್ಕೆ ಜೀವ ತುಂಬಿದವರು ಕವಿತಾ ಗೌಡ.

ಲಕ್ಷ್ಮೀ, ಚಂದು ಹಾಗೂ ಗೊಂಬೆ.. ಈ ಮೂವರ ಸುತ್ತ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯ ಕಥೆ ಹೆಣೆಯಲಾಗಿತ್ತು. 2100ಕ್ಕೂ ಅಧಿಕ ಸಂಚಿಕೆಗಳನ್ನ ‘ಲಕ್ಷ್ಮೀ ಬಾರಮ್ಮ’ ಸೀರಿಯಲ್ ಯಶಸ್ವಿಯಾಗಿ ಪೂರೈಸಿತು. ಆರುವರೆ ವರ್ಷಗಳ ಕಾಲ ಸುದೀರ್ಘವಾಗಿ ಪ್ರಸಾರ ಕಂಡ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ 2020 ಜನವರಿ 25 ರಂದು ಅಂತ್ಯಕಂಡಿತು.

ಇಂತಿಪ್ಪ ‘ಲಕ್ಷ್ಮೀ ಬಾರಮ್ಮ’ ಸೀರಿಯಲ್‌ನಲ್ಲಿ ಲಕ್ಷ್ಮೀ ಹಾಗೂ ಗೊಂಬೆ ಆಗಿ ನಟಿಸಿದ್ದ ನಟಿಯರು ಇದೀಗ ತಾಯ್ತನದ ಸಂಭ್ರಮದಲ್ಲಿದ್ದಾರೆ.

ಹೌದು.. ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ಲಕ್ಷ್ಮೀ (ಲಚ್ಚಿ/ಚಿನ್ನು) ಪಾತ್ರದಲ್ಲಿ ನಟಿಸಿದ್ದ ಕವಿತಾ ಗೌಡ ಈಗ ಗರ್ಭಿಣಿ. ಇದೇ ತಿಂಗಳು.. ಅಂದ್ರೆ ಮೇ ತಿಂಗಳ ಆರಂಭದಲ್ಲಿ ಸಿಹಿ ಸುದ್ದಿಯನ್ನ ನಟಿ ಕವಿತಾ ಗೌಡ ಸೋಷಿಯಲ್ ಮೀಡಿಯಾದ ಮೂಲಕ ಹಂಚಿಕೊಂಡಿದ್ದರು. ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲೇ ನಾಯಕ ಚಂದು ಪಾತ್ರ ನಿರ್ವಹಿಸಿದ್ದ ಚಂದನ್ ಕುಮಾರ್ ಅವರನ್ನ 2021ರಲ್ಲಿ ಕವಿತಾ ಗೌಡ ಮದುವೆಯಾದರು. ವಿವಾಹವಾದ ಮೂರು ವರ್ಷಗಳ ಬಳಿಕ ಕವಿತಾ ಗೌಡ – ಚಂದನ್ ಕುಮಾರ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಅತ್ತ ಕವಿತಾ (ಚಿನ್ನು) – ಚಂದನ್ ಕುಮಾರ್ ದಂಪತಿ ಸಿಹಿ ಸುದ್ದಿ ಹಂಚಿಕೊಂಡ ಕೆಲವೇ ದಿನಗಳ ಅಂತರದಲ್ಲಿ ‘ಲಕ್ಷ್ಮೀ ಬಾರಮ್ಮ’ ಗೊಂಬೆ ಖ್ಯಾತಿಯ ನೇಹಾ ಗೌಡ ಹಾಗೂ ಚಂದನ್ ಗೌಡ ದಂಪತಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. 2018ರಲ್ಲಿ ಮದುವೆಯಾದ ನೇಹಾ – ಚಂದನ್ ದಂಪತಿ 6 ವರ್ಷಗಳ ಬಳಿಕ ಪೋಷಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಈ ಖುಷಿಯ ವಿಷಯವನ್ನ ನೇಹಾ ಗೌಡ ಹಾಗೂ ಚಂದನ್ ಗೌಡ ದಂಪತಿ ಮೇ 31 ರಂದು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ.

‘ಲಕ್ಷ್ಮೀ ಬಾರಮ್ಮ’ ಸೀರಿಯಲ್‌ನಲ್ಲಿ ಬಾಡಿಗೆ ತಾಯ್ತನ, ಮಗುವಿನ ತಾಯಿಯ ಕರ್ತವ್ಯಗಳನ್ನ ನಿಭಾಯಿಸಿದ್ದ ನಟಿ ಕವಿತಾ ಗೌಡ ಹಾಗೂ ನೇಹಾ ಗೌಡ ಇದೀಗ ರಿಯಲ್‌ ಆಗಿ ತಾಯಿ ಆಗ್ತಿದ್ದಾರೆ. ಮದರ್‌ಹುಡ್‌ಗೆ ಕಾಲಿಡ್ತಿರುವ ನಟಿಯರಿಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *